ಬೆಂಗಳೂರು :ಪಾದಚಾರಿ, ರಸ್ತೆಬದಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಓಡಾಡುವರ ಕೈಯಲ್ಲಿ ಮೊಬೈಲ್​ ಕಳವು ಮಾಡುತ್ತಿದ್ದ ಆರೋಪಿಯನ್ನು ವಿವಿ ಪುರ ಪೊಲೀಸರು ಬಂಧಿಸಿದ್ದಾರೆ.
ಪಾರ್ವತಿಪುರದ ಇರ್ಷಾದ್ ಪಾಷಾ(19) ಬಂಧಿತ. ವಿ.ವಿ.ಪುರ, ಬಸವನಗುಡಿ, ಕಲಾಸಿಪಾಳ್ಯ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಇನ್ನಿತರ ಕಡೆಗಳಲ್ಲಿ ಬೈಕ್‌ನಲ್ಲಿ ಬಂದು ಮೊಬೈಲ್ ಕಳವು ಮಾಡುತ್ತಿದ್ದ. ಬಂಧಿತನಿಂದ 7.10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 49 ಮೊಬೈಲ್‌ಗಳು ಮತ್ತು 1 ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್..!
ತಾಯಿ ಜತೆ ನೆಲೆಸಿರುವ ಇರ್ಷಾದ್, 8ನೇ ತರಗತಿಯವರೆಗೆ ಓದಿ ಆಟೋ ರಿಕ್ಷಾಗಳ ಟಾಪ್ ಹೊಲಿಯುವ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜತೆ ಸೇರಿ 2018ರಲ್ಲಿ ತಿಲಕನಗರದಲ್ಲಿ ಮೊಬೈಲ್ ಸುಲಿಗೆ ಮಾಡಿ ಬಂಧನಕ್ಕೆ ಒಳಗಾಗಿ ಬಾಲ ನ್ಯಾಯ ಮಂಡಲಿಗೆ ಸೇರಿದ್ದ.
ಇದನ್ನೂ ಓದಿ:ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!
ಹೊರ ಬಂದ ಮೇಲೆ ಹಳೇ ಚಾಳಿಯನ್ನು ಮುಂದುವರೆಸಿದ್ದ. ಸ್ನೇಹಿತ ರಾಜು ಎಂಬಾತನಗೆ ಸುಳ್ಳು ಹೇಳಿ ಆತನ ಪಲ್ಸರ್ ಬೈಕ್ ಪಡೆದು ನಗರದ ಎಲ್ಲೆಡೆ ಸುತ್ತಾಡಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವರನ್ನು ಯಾಮಾರಿಸಿ ಮೊಬೈಲ್​ ಫೋನ್​ ಕಳವು ಮಾಡುತ್ತಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಇನ್‌ಸ್ಪೆಕ್ಟರ್ ಶಿವಶಂಕರ್ ನೇತೃತ್ವದ ತಂಡ ಆರೋಪಿ ಚಲನವಲನದ ಮೇಲೆ ನಿಗಾವಹಿಸಿ ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಯನಾಡಿನಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾದ್ರು ಸಿದ್ದಿಕ್​ ಕಪ್ಪನ್​ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
