ಬೆಂಗಳೂರು:ಹಾಳಾಗಿದ್ದ ಮೊಬೈಲ್ ಅನ್ನು ರಿಪೇರಿ ಮಾಡಿಸಿಕೊಳ್ಳಲು ಬಂದ ಮಹಿಳೆಯ ಷಡ್ಯಂತ್ರಕ್ಕೆ ಸಿಲುಕಿದ ಮೊಬೈಲ್​ ರಿಪೇರಿ ಮಾಡುವವನ ಕಥೆ ಇದು.
ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಜಿಯಾವುಲ್ಲ ಎಂಬಾತ ಮೊಬೈಲ್​ ರಿಪೇರಿ ಕೆಲಸ ಮಾಡಿಕೊಂಡಿದ್ದಾರೆ. ಅಂಗಡಿಗೆ ಬಂದ ದೌಲತ್ ಎಂಬ ಮಹಿಳೆ ತನ್ನ ಮೊಬೈಲ್ ಹಾಳಾಗಿದೆ. ರಿಪೇರಿ ಮಾಡಿಕೊಡಿ ಎಂದಿದ್ದಳು. ಇದಾದ ಬಳಿಕ ತನ್ನ ಸಹಚರರೊಂದಿಗೆ ಮಾಸ್ಟರ್​ಪ್ಲ್ಯಾನ್​ ಮಾಡಿಕೊಂಡು ಜಿಯಾವುಲ್ಲನ ಮನೆಗೆ ಬಂದಿದ್ದ ಆಕೆತ ತಂಡ ಆತನ ಬಟ್ಟೆಬಿಚ್ಚಿಸಿ ಬೆತ್ತಲೆ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರಂತೆ.ಇದನ್ನೂ ಓದಿರಿಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಮೊಬೈಲ್​ ರಿಪೇರಿ ನೆಪದಲ್ಲಿ ಬಂದಿದ್ದ ಮಹಿಳೆಯು ಜಿಯಾವುಲ್ಲನ ಬಳಿ ಹಣವಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಳು. ಅದನ್ನು ಲಪಟಾಯಿಸಲು ತನ್ನ ಸ್ನೇಹಿತರಾದ ಸಲ್ಮಾನ್, ಅಸಾದ್, ಖಾಸಿಫ್ ಜತೆ ಸೇರಿ ಷಡ್ಯಂತ್ರ ರೂಪಿಸಿದ್ದಳು. ಅದರಂತೆ ಜಿಯಾವುಲ್ಲನ ಮನೆಗೆ ಬಂದಿದ್ದ ದೌಲತ್ ಹಾಗೂ ಸಹಚರರು ಆತನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿದ್ದರು. ಅಲ್ಲದೆ ಹಲ್ಲೆ ನಡೆಸಿ 25 ಸಾವಿರ ಹಣ ದೋಚಿದ್ದರು. ಮತ್ತಷ್ಟು ಹಣ ಕೊಡದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದಾಗಿ ಹಾಗೂ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ದೌಲತ್​ನ ಕಿರುಕುಳಕ್ಕೆ ಬೇಸತ್ತ ಜಿಯಾವುಲ್ಲ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಆರೋಪಿ ಸಲ್ಮಾನ್​ನನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪರ ಸ್ತ್ರೀಯರಿಗೆ ಅಶ್ಲೀಲ ಚಿತ್ರ ಕಳುಹಿಸಿ ಸಿಕ್ಕಿಬಿದ್ದ ಸಿನಿಮಾ ನಿರ್ಮಾಪಕ! ಈ ರಾಸಲೀಲೆ ಪ್ರಶ್ನಿಸಿದ ಪತ್ನಿ ಕತೆ ಏನಾಯ್ತು?

ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + five =
Remember me
