ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ಇಬ್ಬರು ಕುಖ್ಯಾತ ಮೊಬೈಲ್ ಸ್ನ್ಯಾಚರ್ಸ್​ಗಳನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಪಾದಚಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳರು, ಕ್ಷಣಾರ್ಧದಲ್ಲಿ ಮೊಬೈಲ್​ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ರಾತ್ರಿ ಮಾತ್ರವಲ್ಲ, ಹಗಲಿನಲ್ಲೂ ಲೆಕ್ಕವಿಲ್ಲದಷ್ಟು ಮಂದಿಯ ಮೊಬೈಲ್​ಗಳು ಕಳ್ಳರ ಪಾಲಾಗಿವೆ.
ಮೊಬೈಲ್​ ಕಳವಿನ ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕಳ್ಳರ ಬೇಟೆಗೆ ಬಲೆ ಬೀಸಿದ ಚಂದ್ರಾಲೇಔಟ್ ಠಾಣೆಯ ಪೊಲೀಸರು ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಬಾರಕ್ ಮತ್ತು ಸಯ್ಯದ್ ಉಮರ್ ಫಾರುಕ್ ಬಂಧಿತರು. ಬ್ಲಾಕ್ ಪಲ್ಸರ್ ಬೈಕ್​ನಲ್ಲಿ ಬಂದು ಕ್ಷಣಾರ್ಧದಲ್ಲೇ ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದರು.ಇದನ್ನೂ ಓದಿರಿಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಬಂಧಿತರಿಂದ 1.60 ಲಕ್ಷ ಮೌಲ್ಯದ 2 ಪಲ್ಸರ್ ಬೈಕ್, ಎರಡು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಕದ್ದ ಮೊಬೈಲ್​ಗಳನ್ನು ಮುದಾಸಿರ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರಂತೆ. ಆರೋಪಿಗಳ ಮಾಹಿತಿ ಮೇರೆಗೆ ಮುದಾಸಿರ್​ನನ್ನು ಬಂಧಿಸಿದ ಪೊಲೀಸರು ಆತನ ಬಳಿಯಿದ್ದ 22 ಮೊಬೈಲ್ ಫೋನ್, 2.52 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.
ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಕೋವಿಡ್​ ವ್ಯಾಕ್ಸಿನೇಷನ್​ನಲ್ಲೂ ‘ವಿವಿಐಪಿ ಸಂಸ್ಕೃತಿ’ ಇದ್ಯಾ? ಬಿ.ಸಿ.ಪಾಟೀಲ್​ ನಡೆಗೆ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
