ಬೆಂಗಳೂರು:ದಕ್ಷಿಣ ಕನ್ನಡದ ಸುಳ್ಯದಲ್ಲಿರುವ ಪ್ರಸಿದ್ಧ ದೇವರಗುಂಡಿ ಫಾಲ್ಸ್ ಬಳಿ ಮಾಡೆಲ್​ಗಳು ಅರೆಬೆತ್ತಲೆ ಫೋಟೊಶೂಟ್ ನಡೆಸಿರುವುದು ಇದೀಗ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಮಾಡೆಲ್​ ಬೃಂದಾ ಅರಸ್​ ಕ್ಷಮೆಯಾಚಿಸಿದ್ದಾರೆ.
ಅಕ್ಟೋಬರ್​ ಆರಂಭದಲ್ಲಿ ನಾವು ದೇವರಗುಂಡಿ ಫಾಲ್ಸ್​ಗೆ ಫೋಟೋಶೂಟ್​ಗೆಂದು ಹೋಗಿದ್ದೇವು. ಅಲ್ಲಿಗೆ ಕರೆದುಕೊಂಡು ಹೋದ ಸ್ಥಳೀಯರು ದೇವಸ್ಥಾನದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಶೂಟ್​ ಮಾಡಬಹುದಾ ಎಂದು ಸ್ಥಳೀಯರನ್ನು ಕೇಳಿದೆವು. ಅದಕ್ಕೆ ಹೌದು ಎಂದು ಹೇಳಿದರು. ನಾವು ಶೂಟ್​ ಮಾಡುವಾಗಲೂ ಸಹ ಯಾರೂ ಬಂದು ಕೇಳಲಿಲ್ಲ ಎಂದರು.
ಇದನ್ನೂ ಓದಿ:PHOTOS| ಪ್ರಸಿದ್ಧ ದೇವರಗುಂಡಿ ಫಾಲ್ಸ್​ ಬಳಿ ಅರೆಬೆತ್ತಲೆ ಫೋಟೋಶೂಟ್​: ಸ್ಥಳೀಯರ ಆಕ್ರೋಶ!
ಶೂಟ್​ ಮಾಡಿದ ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದಾಗಲೂ ಯಾರು ಕೇಳಲಿಲ್ಲ. ಅಕ್ಟೋಬರ್​ 27ರಂದು ಸುಳ್ಯದ ಸ್ಥಳೀಯ ಪತ್ರಿಕೆಯಲ್ಲಿ ಫೋಟೋಶೂಟ್​ ಕುರಿತು ಲೇಖನವೊಂದು ಪ್ರಕಟವಾಗಿತ್ತು. ಆ ನಂತರವಷ್ಟೇ ಅದೊಂದು ದೇವರ ಸ್ಥಳ ಎಂದು ನಮಗೆ ತಿಳಿಯಿತು. ನಾವು ಮಾಡಿದ್ದು ತಪ್ಪು ಎಂದು ತಿಳಿದು ತಕ್ಷಣ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಹಾಕಿದೆವು ಎಂದು ಬೃಂದಾ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮುನ್ನ ಇನ್​ಸ್ಟಾಗ್ರಾಂನಿಂದ ವಿಡಿಯೋ ಮತ್ತು ಫೋಟೋ ಡೌನ್​ ಮಾಡಿಕೊಂಡಿದ್ದವರು ಇದೀಗ ವಿವಾದ ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದಿಲ್ಲ. ನಾವು ಫೋಟೋಶೂಟ್​ ಮಾಡುವಾಗಲೂ ಯಾವುದೇ ತೊಂದರೆ ಇರಲಿಲ್ಲ. ಆದರೆ, ಈಗ ವಿವಾದ ಕೇಳಿಬಂದಿರುವುದರಿಂದ ನಮ್ಮ ವೈಯಕ್ತಿಕ ಹಾಗೂ ಮಾಡೆಲಿಂಗ್​ ವೃತ್ತಿಗೆ ತೊಂದರೆಯಾಗಿದೆ ಎಂದರು.
ನಮಗೆ ತಿಳಿಯದೇ ತಪ್ಪು ನಡೆದಿದೆ. ಅದೊಂದು ಪುಣ್ಯ ಸ್ಥಳವೆಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ನಡೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ದಿಗ್ವಿಜಯ ನ್ಯೂಸ್​ ಮೂಲಕ ಸ್ಥಳೀಯರಲ್ಲಿ ಕ್ಷಮೆಯಾಚಿಸುತ್ತೇನೆಂದು ಬೃಂದಾ ಇಡೀ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.(ದಿಗ್ವಿಜಯ ನ್ಯೂಸ್​)
https://www.youtube.com/watch?v=9g51EPxw278
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
