ಬೆಂಗಳೂರು :ಜುಲೈ 19 ರ ಸೋಮವಾರ ಮತ್ತು 22 ರ ಗುರುವಾರ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಅಣಕು‌ ಪರೀಕ್ಷೆ ಸಿದ್ಧತೆ ನಡೆಯಿತು. ಬೆಂಗಳೂರು ನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮಲ್ಲೇಶ್ವರ 18ನೇ ಕ್ರಾಸ್​​ನ ಪರೀಕ್ಷಾ ಕೇಂದ್ರ, ಪೂರ್ಣಪ್ರಜ್ಞ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸುಮಾರು 4,885 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ 73,066 ಕೊಠಡಿಗಳನ್ನು ಮೀಸಲಿಟ್ಟಿದ್ದೇವೆ ಎಂದರು.
ಇದನ್ನೂ ಓದಿ:ಫೀಸ್ ಕಟ್ಟದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತಳಾಗುವ ಆತಂಕ: ವಿದ್ಯಾರ್ಥಿನಿ ಮನೆಗೇ ಬಂದ ಶಿಕ್ಷಣ ಸಚಿವರು
ಇಂದು ಮತ್ತು ನಾಳೆ ಅಣಕು‌ ಪರೀಕ್ಷೆ ಸಿದ್ದತೆ ಮಾಡಲಾಗುತ್ತೆ. ಸಾಮಾಜಿಕ ಅಂತರ, ಮಾಸ್ಕ್, ಸೇರಿದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗ್ತಿದೆ. ಈ ವರ್ಷ ಓಎಂಆರ್ ಶೀಟ್ ಮೇಲೆ ಫೋಟೋ, ರೋಲ್ ನಂಬರ್ ಇರುತ್ತೆ. ಪ್ರತಿ ವಿಷಯಕ್ಕೆ ವಿಶೇಷ ಬಣ್ಣದ ಓಎಂಆರ್ ಇರಲಿದೆ ಎಂದರು.
ಈ ವರ್ಷ 1,19,469 ಸಿಬ್ಬಂದಿಗಳು ಪರೀಕ್ಷಾ ಕೆಲಸ ನಿರ್ವಹಣೆ ಮಾಡಲಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಅವರು ಎಸ್ಓಪಿ ಪಾಲನೆಗೆ ಕ್ರಮ ಕೈಗೊಳ್ಳಲಿದ್ದಾರೆ. ಪರೀಕ್ಷಾ ಕೇಂದ್ರಗಳು ಅತ್ಯಂತ ಸುರಕ್ಷಿತ ಕೇಂದ್ರಗಳಾಗಿ ಇರಲಿವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು
ಯಾವುದೇ ಮಗುವಿಗೂ ಸಮಸ್ಯೆ ಆಗೋದಿಲ್ಲ. ಪಾಲಕರು ಆತಂಕವಾಗೋದು ಬೇಡ. ವಿದ್ಯಾರ್ಥಿಗಳು ಕುಡಿಯುವ ನೀರು ತರಬೇಕು. ಅವರು ತರದೇ ಹೋದ್ರೆ ನಾವೇ ನೀರು ಕೊಡ್ತೀವಿ. ಯಾವುದೇ ಆತಂಕ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕೆಂದು ಮನವಿ ಮಾಡಿದರು.
ಎಸ್ಸೆಸ್ಸೆಲ್ಸಿ: “ಯಾವುದೇ ಭಯ ಪಡದೆ ಪರೀಕ್ಷೆ ಬರೆಯೋಕೆ ಬನ್ನಿ”

‘ತೂಫಾನ್’ ಚಿತ್ರಕ್ಕೆ ಭರಪೂರ ಪ್ರಶಂಸೆ ನೀಡಿದ ಶಾರೂಖ್ ಖಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nineteen =
Remember me
