ಬೆಂಗಳೂರು:ನರೇಂದ್ರ ಮೋದಿ ನೇತೃತ್ವದ 3.O ಸರ್ಕಾರದ 2024-25ನೇ ಸಾಲಿನ ಮುಂಗಡಪತ್ರ ಮಂಡನೆಗೆ ದಿನಗಣನೆ ಆರಂಭವಾಗಿದೆ. ಎರಡನೇ ಬಾರಿ ಹಣಕಾಸು ಖಾತೆ ಜವಾಬ್ದಾರಿ ಹೊತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್ ಪೂರ್ವಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ. ಪೂರ್ವ ಬಜೆಟ್ ಸಭೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಪರವಾಗಿ ಕಂದಾಯ ಮಂತ್ರಿ ಕೃಷ್ಣಬೈರೇಗೌಡ ಭಾಗಿಯಾಗಲಿದ್ದಾರೆ.
ಬಿಜೆಪಿ ನಿಚ್ಚಳ ಬಹುಮತ ಪಡೆಯದಿದ್ದರೂ ಎನ್ ಡಿಎ ಮಿತ್ರಪಕ್ಷಗಳ ಸಹಾಯದೊಂದಿಗೆ ಮೂರನೇ ಬಾರಿ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದರಿಂದಾಗಿ 2024-25ರ ಬಜೆಟ್ ನಲ್ಲಿ ಸಂಪೂರ್ಣ ಬಿಜೆಪಿ ಛಾಪು ಇರುತ್ತದೆಯೋ ? ಅಥವಾ ಮಿತ್ರಪಕ್ಷಗಳು ಪ್ರಣೀತಸೂತ್ರ ಒಳಗೊಂಡ ಸಮ್ಮಿಶ್ರ ರೂಪದಲ್ಲಿರಲಿದೆಯೆ ? ಎಂಬ ಕುತೂಹಲ ಮೂಡಿಸಿರುವುದು ಸಹಜ.
ಬಜೆಟ್ ಪೂರ್ವ ಸಂವಾದ, ಸಮಾಲೋಚನೆಗಳಿಗಾಗಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಿಗೆ ನಿರ್ಮಲಾ ಸೀತಾರಾಮನ್ ಪತ್ರ ಬರೆದು ಆಹ್ವಾನಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಜೂ.22ರಂದು ಬೆಳಗ್ಗೆ 10 ರಿಂದ ಈ ಸಭೆ ಆರಂಭವಾಗಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಜೆಟ್ ಪೂರ್ವ ಸಮಾಲೋಚನೆ ಸಭೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಆಹ್ವಾನಿಸಿ ಪತ್ರ ಬರೆದಿದ್ದಾರೆ. ಸಭೆಯ ಉದ್ದೇಶ ಹಾಗೂ  ವಿಚಾರಧಾರೆಯನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ.
ಪೂರ್ವ-ಬಜೆಟ್ ಸಮಾಲೋಚನೆಗಳ ಭಾಗವಾಗಿ, ಸಮಾನ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ನಮ್ಮ ನಿಕಟ ಪಾಲುದಾರರಾಗಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಶಾಸಕಾಂಗದೊಂದಿಗೆ) ಸೇರಿ ವಿವಿಧ ಪಾಲುದಾರರೊಂದಿಗೆ ಸಭೆಗಳನ್ನು ನಡೆಸಲಾಗುತ್ತದೆ.
ಮುಂಬರುವ ಒಕ್ಕೂಟ ಸರ್ಕಾರದ ಬಜೆಟ್ 2024-25 (ನಿಯಮಿತ) ಗಾಗಿ ಚರ್ಚೆಗಳ ಉಪಕ್ರಮವನ್ನು ಮುಂದುವರೆಸುತ್ತಾ, ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಸೂಕ್ತವಾಗಿ ಅಂಶವನ್ನು ಪಡೆಯಲು ಉದ್ದೇಶಿಸಲಾಗಿದೆ. ಈ ಸಭೆಯನ್ನು ಜೂನ್ 22 (ಶನಿವಾರ) ಬೆಳಗ್ಗೆ 10.00 ಗಂಟೆಗೆ ನವದೆಹಲಿಯ ವಿಜ್ಞಾನ ಭವನ ಹಾಲ್ ಸಂಖ್ಯೆ 2 ಮತ್ತು 3ರಲ್ಲಿ ಆಯೋಜಿಸಲಾಗಿದೆ.
ಈ ಸಭೆಯ ಗಮನವು ಸ್ಥೂಲ-ಆರ್ಥಿಕ ನೀತಿ ಮತ್ತು ಹಣಕಾಸಿನ ಬಲವರ್ಧನೆಗೆ ಗಮನ ಕೊಡಬೇಕಾದ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ಉಳಿಸಿಕೊಳ್ಳಲು ಸವಾಲುಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ ಮತ್ತು ಸಹಕಾರದ ಅಗತ್ಯವನ್ನು ಗಮನಿಸಿದರೆ, ಕೇಂದ್ರ ಸರ್ಕಾರವು ನಿಮ್ಮ ಸಲಹೆಗಳನ್ನು ಎದುರು ನೋಡುತ್ತಿದೆ.
ಈ ಸಭೆಯಲ್ಲಿ ಭಾಗವಹಿಸಿ ವಿಶೇಷ ವಿಚಾರಗಳು, ವಿಭಿನ್ನ ದೃಷ್ಟಿಕೋನಗಳನ್ನು ಒಳಗೊಂಡ ಸಲಹೆಗಳನ್ನು ನೀಡಬೇಕು ಎಂದು ನಿರ್ಮಲಾ ಸೀತಾರಾಮನ್ ವಿನಂತಿಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಪತ್ರ ಬರೆದು ನೀಡಿರುವ ಆಹ್ವಾನಕ್ಕೆ ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರಿಸಿ ಪತ್ರ ಬರೆದು, ಧನ್ಯವಾದ ತಿಳಿಸಿದ್ದಾರೆ. ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಸಭೆಗೆ ಹಾಜರಾಗುವುದು ನನಗೆ ಕಷ್ಟಕರವಾಗಿದೆ.
ಹಾಗಾಗಿ ರಾಜ್ಯದ ಜಿಎಸ್‌ಟಿ ಸಮಸ್ಯೆಗಳ ಬಗ್ಗೆಯೂ ಗಮನಹರಿಸುತ್ತಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಈ ಸಭೆಯಲ್ಲಿ ಪಾಲ್ಗೊಳ್ಳಲು ನಿಯೋಜಿಸುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
