ನವದೆಹಲಿ:ಸಾಮಾಜಿಕ ಜಾಲತಾಣವನ್ನು ನಾವು ಕಡೆಗಣಿಸುವಂತಿಲ್ಲ. ಹಾಗಾಗಿ ಫ್ಯಾಕ್ಟ್​ ಚೆಕ್ ಮಾಡದೆ ಸುದ್ದಿಗಳನ್ನು ಹಂಚಬೇಡಿ ಎಂದು ಸಾರ್ವಜನಿಕರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಎಲ್ಲ ರಾಜ್ಯಗಳ ಗೃಹಮಂತ್ರಿಗಳ ಜತೆ ಶುಕ್ರವಾರ ಆನ್​ಲೈನ್​ ಮೂಲಕ ನಡೆಸಿದ ‘ಚಿಂತನ ಶಿಬಿರ’ದಲ್ಲಿ ಮಾತನಾಡಿದ ಪ್ರಧಾನಿ, ಭಾರತೀಯ ನಾಗರಿಕರ ಸುರಕ್ಷತೆಗಾಗಿ ಸುಳ್ಳು ಸುದ್ದಿ ಹರಡುವ ಋಣಾತ್ಮಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿ. ದೇಶಾದ್ಯಂತ ಸಾಕಷ್ಟು ಹಾನಿ ಮಾಡುವ ಸಾಮರ್ಥ್ಯ ಒಂದು ಸುಳ್ಳು ಸುದ್ದಿಗೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಸುದ್ದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಸಾಮಾಜಿಕ ಜಾಲತಾಣದಲ್ಲಿ ಇರುವ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಸೋಷಿಯಲ್​ ಮೀಡಿಯಾವನ್ನು ಮಾತ್ರ ಸುದ್ದಿಯ ಮೂಲ ಎಂದು ಜನರು ಭಾವಿಸಬಾರದು ಎಂದು ಪ್ರಧಾನಿ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
