ಬೆಂಗಳೂರು:‘ಮೋದಿ@20’ ಗಮನಾರ್ಹ ಕೃತಿಯಾಗಿದ್ದು, ದೇಶದ ಬೇರೆ ಬೇರೆ ಕ್ಷೇತ್ರಗಳ ಗಣ್ಯರು ಕಂಡಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ, ಧ್ಯೇಯ, ಮನೋಸ್ಥೈರ್ಯ, ಕಾರ್ಯಶೈಲಿಗಳು ಹೇಗಿವೆ? ಎಂಬ ಮಾಹಿತಿ ಕೃತಿಯಲ್ಲಿದೆ.
ಜಾಗತಿಕ ನಾಯಕರಾಗಿ ಕಂಗೊಳಿಸುತ್ತಿರುವ ಮೋದಿ ಅವರಲ್ಲಿನ ಒಬ್ಬ ವೇದಾಂತಿಯೂ, ಸಾಹಸಿಯೂ, ಅರ್ಥಶಾಸ್ತ್ರಜ್ಞನೂ ಬದುಕಿನ ಮೌಲ್ಯ ಶೋಧಕನೂ ಇದ್ದಾನೆಯೇ? ಈ ದೇಶವನ್ನು ಎತ್ತರೆತ್ತರಕ್ಕೆ ಏರಿಸುತ್ತಲೇ ಲೋಕದ ಎಲ್ಲರೂ ಸುಖವಾಗಿ ಬಾಳಬೇಕೆಂಬ ಹಂಬಲವೂ ಇದೆಯೇ? ಚಿಕ್ಕಚಿಕ್ಕ ಕೆಲಸಗಳಿಂದಲೇ ಅದೆಷ್ಟು ಉನ್ನತ ಸ್ಥಾನಕ್ಕೂ ಏರಿ, ವ್ಯಾಪಕ ಜನಮನ್ನಣೆಗೂ ಪಾತ್ರರಾಗಬಹುದೆಂಬ ಅತಿ ವಿಸ್ಮಯಕಾರಿ ಅಂಶಗಳನ್ನು ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ.
ಪಿ.ವಿ.ಸಿಂಧು, ಜೈಶಂಕರ್, ನಂದನ್ ನಿಲೇಕಣಿ, ಸುಧಾಮೂರ್ತಿ, ಡಾ.ದೇವಿ ಶೆಟ್ಟಿ, ಸದ್ಗುರು, ಅಜಿತ್ ದೋವಲ್, ಅನುಪಮ್ ಖೇರ್.. ಇನ್ನೂ ದೊಡ್ಡ ದೊಡ್ಡ ಸಾಧಕರು ಕೃತಿಗೆ ಲೇಖನಗಳನ್ನು ಬರೆದಿದ್ದು, ಕನ್ನಡದ ಶ್ರೇಷ್ಠ ಅನುವಾದಕ ಜಯಪ್ರಕಾಶ ನಾರಾಯಣ ಇಂಗ್ಲಿಷ್​ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಾಹಿತ್ಯ ಪ್ರಕಾಶನದವರು ಕೃತಿ ಹೊರತಂದಿದ್ದಾರೆ. ಪ್ರಕಟಣಾ ಪೂರ್ವ ಬೆಲೆ 575 ರೂ. ಮಾತ್ರ! ಮೇ 10ರವರೆಗೆ ಈ ರಿಯಾಯಿತಿ ಸಿಗಲಿದೆ.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ‘ಮೋದಿ@20’ ಕನಸೆಲ್ಲ ನನಸು ಕೃತಿಯ ಮೊದಲ ಪ್ರತಿಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಹಸ್ತಾಂತರಿಸಿದರು.
ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

ನಟ ಶರತ್​ಬಾಬು ಕುರಿತು ಏನಿದು ವದಂತಿ?: ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಮಲಹಾಸನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
