ಬೆಂಗಳೂರು:ಜೇನ್ನೊಣ ಮಕರಂದ ಹೀರಿ ಮಧು ಸಂಗ್ರಹಿಸಿ ಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಸಾಲಿಗೆ ಸೇರಿದವರು. ಆದರೆ, ಸಾಮಾನ್ಯ ನೊಣಗಳು ಕೊಳಕಿನಲ್ಲಿ ಬಿದ್ದೆದ್ದು ವೈರಸ್ ಹರಡುತ್ತವೆ, ಅಂಥ ಸಾಲಿಗೆ ಕೆಲ ರಾಜಕೀಯ ಪಕ್ಷಗಳು ಸೇರುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾಂಗ್ರೆಸ್ ಅನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ರಾಜ್ಯದಲ್ಲಿ 1 ತಿಂಗಳ ಕಾಲ ನಡೆದ ಮೋದಿ 2.0 ಒಂದು ವರ್ಷ ಅಭಿಯಾನದ ಸಮಾರೋಪದಲ್ಲಿ ಸೋಮವಾರ ವಿಡಿಯೋ ಸಂವಾದದ ಮೂಲಕ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕಳೆದ 6 ವರ್ಷಗಳಲ್ಲಿ ವ್ಯವಸ್ಥೆಗಳನ್ನು ಬದಲಾಯಿಸಿ ಹೊಸ ಪರಂಪರೆಗೆ ನಾಂದಿ ಹಾಡಿರುವ ಮೋದಿ ಅವರು ಬಡತನಮುಕ್ತ ಹಾಗೂ ಸಶಕ್ತ ದೇಶ ಕಟ್ಟುವ ಸಂಕಲ್ಪ ಮಾಡಿದ್ದು, ಆ ದಿಸೆಯಲ್ಲಿ ಆತ್ಮನಿರ್ಭರ ಭಾರತದ ಸ್ಪಷ್ಟ ಗುರಿ ಇಟ್ಟುಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ಲಾಕ್​ಡೌನ್ ವೇಳೆ ಸಂಕಷ್ಟಕ್ಕೆ ನೆರವಾಗಲೆಂದು ಮಹಿಳೆಯರ 39 ಕೋಟಿ ಜನಧನ್ ಖಾತೆಗೆ 65,000 ಕೋಟಿ ರೂ. ವರ್ಗಾವಣೆ ಮಾಡಿದ್ದು ಒಂದು ಪೈಸೆ ಸೋರಿಕೆ ಅಥವಾ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲ ಎಂದ ಅವರು, ಸೋಂಕು ನಿಯಂತ್ರಿಸಲು ಬಿಗಿ ಕ್ರಮಗಳ ಜತೆಗೆ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಗತ್ಯ ಕ್ರಮವಹಿಸಿವೆ ಎಂದರು.
ಲೇಹ್ ಸಮೀಪದ ನಿಮು ಕಣಿವೆಯಲ್ಲಿ ನಿಂತು ಗರ್ಜಿಸಿದ ಮೋದಿ, ನೆರೆಯ ಚೀನಾಕ್ಕೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದರು. ನೆಹರು, ಕೃಷ್ಣಮೆನನ್ ಕಾಲದ ಭಾರತವಲ್ಲ, ಭಾರತ ಬದಲಾಗಿದೆ ಎಂದರಿತ ಚೀನಾ ಗಲ್ವಾನ್ ವಾಸ್ತವಿಕ ಗಡಿರೇಖೆ ಆಚೆಯಿಂದ ಹಿಂದೆ ಸರಿಯಲಾರಂಭಿಸಿದೆ ಎಂದು ಹೇಳಿದರು.
ರಾಹುಲ್ ಗಾಂಧಿಗೆ ಪ್ರಶ್ನಿಸಿ:ಕಲ್ಪಿತ ವಿಡಿಯೋಗಳನ್ನು ಮಾರುಕಟ್ಟೆಗೆ ಬಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ರಾಹುಲ್ ಗಾಂಧಿಗೆ 11 ಸಲ ನಡೆದ ರಕ್ಷಣಾ ಸ್ಥಾಯಿ ಸಮಿತಿ ಸಭೆಗೆ ಒಮ್ಮೆಯೂ ಹಾಜರಾಗಿಲ್ಲವೇಕೆ? ಈ ಸಮಿತಿ ದೇಶದ ಗಡಿಗೆ ಭೇಟಿ ಕೊಟ್ಟಾಗ ಭಾಗವಹಿಸಲಿಲ್ಲವೇಕೆ? ಎಂದು ಅವರ ಫೋಟೋ ದೊಡ್ಡದಾಗಿ ಇಟ್ಟುಕೊಂಡು ಓಡಾಡುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ಪ್ರಶ್ನಿಸಬೇಕು ಎಂದು ಬಿ.ಎಲ್. ಸಂತೋಷ್ ಕುಟುಕಿದರು. ವಿದೇಶಿ ಪಕ್ಷ, ವಿದೇಶಿ ಅಧ್ಯಕ್ಷೆ, ವಿದೇಶದವರೇ ಅರ್ಧಕ್ಕಿಂತ ಹೆಚ್ಚು ತುಂಬಿರುವ ಪಕ್ಷದವರಿಗೆ ವೀರ ಸಾರ್ವಕರ್ ಜೀವನ, ಸಾಧನೆ, ತ್ಯಾಗ ಹೇಗೆ ಗೊತ್ತಾಗಬೇಕು. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ವಿರೋಧಿಸುವವರು ಇತಿಹಾಸದ ಕಸದ ಬುಟ್ಟಿಗೆ ಸೇರಲಿದ್ದಾರೆ ಎಂದರು.
ಸಂತೋಷ್ ಭಾಷಣ ಮೆಚ್ಚಿದ ಬಿಎಸ್​ವೈ:ಬಿಜೆಪಿ ಸೋಮವಾರ ಸಂಜೆ ಆಯೋಜಿಸಿದ್ದ ಜನ ಸಂವಾದ ರ್ಯಾಲಿಯ ಸಮಾರೋಪವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಜತೆ ವೀಕ್ಷಿಸಿದರು. ಮೋದಿ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮುಂದೆ ಸಾಗುತ್ತಿರುವ ಸಮಯದಲ್ಲಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಸಲುವಾಗಿ ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮುಖ್ಯಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಮಾತುಗಳ ಕುರಿತು ಸಿಎಂ ಪ್ರಶಂಸೆ ವ್ಯಕ್ತಪಡಿಸಿದರು. ಮೋದಿ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಕರೋನಾ ತುರ್ತು ಸಮಯದ ನಿರ್ವಹಣೆ, ಸಂಕಷ್ಟದ ಸಮಯದಲ್ಲಿ ಸರ್ಕಾರಗಳು ಹಾಗೂ ಪಕ್ಷ ಕೈಗೊಂಡ ಕಾರ್ಯಗಳ ಕುರಿತು ಸವಿವರವಾಗಿ ಜನತೆಯ ಮುಂದಿಟ್ಟ ಬಿ.ಎಲ್ ಸಂತೋಷ್ ಅವರನ್ನು ಅಭಿನಂದಿಸಿದರು.
ಮಾಂಸ ತಿನ್ನಬೇಡಿ; ಬಂದಿದೆ ಮತ್ತೊಂದು ಮಹಾಮಾರಿ; ಚಿಕಿತ್ಸೆ ಲಭಿಸದಿದ್ದಲ್ಲಿ 24 ತಾಸಿನಲ್ಲಿ ಸಾವು; ಚೀನಾ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
