ಬೆಂಗಳೂರು: ಚಂದ್ರಯಾನ-3 ಯಶಸ್ವಿಗೆ ದೇಶ-ವಿದೇಶಗಳಿಂದ ಪ್ರಶಂಸೆಯ ಪ್ರವಾಹ ಹರಿದು ಬರುವುದು ನಿಂತಿಲ್ಲ. ಈ ನಡುವೆಯೂ ಕೆಲವರು ಭಾರತದ ಬಡತನ, ಮಲದ ಗುಂಡಿಗೆ ಇಳಿದ ವ್ಯಕ್ತಿ ಬಳಿ ನಿಂತ ಮೋದಿ ವ್ಯಂಗ್ಯಚಿತ್ರ ಹಂಚಿಕೊಂಡು ಟೀಕಿಸಿದವರೂ ಇದ್ದರು. ಅನೇಕ ಟ್ರೋಲಿಗರು ಹಾಗೂ ನೆಟ್ಟಿಗರು ಪ್ರತಿಯಾಗಿ ಚಾಟಿ ಬೀಸಿದ್ದೂ ಇದೆ. ಆದರೆ ಬಡತನ, ಮಲದ ಗುಂಡಿ ಟೀಕಾಕಾರರಿಗೆ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಗುದ್ದು ನೀಡಿ ಗಮನಸೆಳೆದರು.
ಜಗತ್ತು ಕಂಡರಿಯದ ಯಶೋಗಾಥೆ ಬರೆದ ಇಸ್ರೋ ವಿಜ್ಞಾನಿಗಳನ್ನು ಖುದ್ದಾಗಿ ಶನಿವಾರ ಭೇಟಿಯಾದರು. ಪೀಣ್ಯದ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ಹಾಲಿ, ಭವಿಷ್ಯದ ಯೋಜನೆಗಳ ಮಾಹಿತಿ ಪಡೆದರು. ನಂತರ ಮನಸಾರೆ ಹೊಗಳಿದ ಅವರು, ಭಾವನಾತ್ಮಕ ಭಾಷಣದ ಮೂಲಕ ನೆರೆದವರ ಮನ ಗೆದ್ದರು. ಫೋಟೋ ಸೆಷನ್, ಔಪಚಾರಿಕ ಮಾತುಕತೆ ಮೂಲಕ ನಸುಕಿಗೆ ಆಗಮಿಸಿ ಕಾಯುತ್ತಿದ್ದ ವಿಜ್ಞಾನಿಗಳು ಹಾಗೂ ಸಿಬ್ಬಂದಿಯ ಸಂತಸ ಇಮ್ಮಡಿಗೊಳಿಸಿದರು.
ಭಾಷಣದ ವೇಳೆ ಮೂರು ಪ್ರಮುಖ ಘೋಷಣೆಗಳನ್ನೂ ಮಾಡಿದರು. ಬಾಹ್ಯಾಕಾಶ ವಲಯದ ಮಹತ್ವ, ದೇಶದ ಅಭಿವೃದ್ಧಿಯಲ್ಲಿ ಈ ಕ್ಷೇತ್ರದ ಕೊಡುಗೆ ಬಗ್ಗೆ ಉಲ್ಲೇಖಿಸುತ್ತಾ ಟೀಕೆ-ಟಿಪ್ಪಣಿ ಮಾಡಿದವರಿಗೂ ಉತ್ತರ ನೀಡಿ ಚಾಟಿ ಬೀಸಿದರು.
ಭಾರತವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶದಿಂದ ಅನುಷ್ಠಾನಕ್ಕೆ ತಂದಿರುವ ಸ್ವಚ್ಛ ಭಾರತ ಅಭಿಯಾನದ ನಿರ್ವಹಣೆ, ಮೇಲ್ವಿಚಾರಣೆ, ಪರಿಣಾಮಕಾರಿ ಕ್ರಮಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ ಎಂದು ಮೋದಿ ತಿಳಿಸಿದರು.
ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಹಾಗೂ ಕಾರ್ಯತತ್ಪರತೆಗೂ ನೆರವಾಗಿದೆ. ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಶ್ರೇಣಿ ಅಧಿಕಾರಿಗಳು ಹಾಗೂ ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಇಸ್ರೋದ ಕಿರಣ್ ಕುಮಾರ್ ಈ ಕಾರ್ಯಾಗಾರದ ಭಾಗವಾಗಿದ್ದರು. ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಂಡು ಆಡಳಿತದಲ್ಲಿ ಸುಧಾರಣೆ, ಪಾರದರ್ಶಕತೆ ತರುವುದು ಕಾರ್ಯಾಗಾರದ ಉದ್ದೇಶವಾಗಿತ್ತು ಎಂದು ಮೋದಿ ಹೇಳುವ ಮೂಲಕ ಬಾಹ್ಯಾಕಾಶ ವಿಜ್ಞಾನ, ತಂತ್ರಜ಼್ಞಾನದ ಕೊಡುಗೆಯ ಮೇಲೆ ಬೆಳಕು ಚೆಲ್ಲಿದರು.
ಭಾರತಕ್ಕೆ ಹೊರೆಯಲ್ಲ
140 ಕೋಟಿ ಜನಸಂಖ್ಯೆ, ಬಡತನ ರೇಖೆಗಿಂತ ಕೆಳಗಿರುವ ಭಾರತಕ್ಕೆ ದುಬಾರಿ ವೆಚ್ಚದ ಉಪಗ್ರಹ ಉಡಾವಣೆ, ಚಂದ್ರಯಾನ ಅಗತ್ಯವೇನಿತ್ತು ಎಂದು ಪ್ರಶ್ನಿಸಿದವರಿಗೂ ಈ ಭಾಷಣದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಉಪಗ್ರಹಗಳ ಮೂಲಕ ರೈತರು, ಮೀನುಗಾರರು ಹವಾಮಾನದ ಪರಿಸ್ಥಿತಿಯನ್ನು ಅಂಗೈಯಲ್ಲಿರುವ ಮೊಬೈಲ್ ನಿಂದ ತಿಳಿದುಕೊಳ್ಳಲು ಸಾಧ್ಯವಾಗಿದೆ. ಮನು ಕುಲದ ಏಳಿಗೆಗೆ, ಭೂಮಿ ಮೇಲಿನ ಸವಾಲುಗಳಿಗೆ ಪರಿಹಾರದ ನಿರೀಕ್ಷೆ, ವಿಶ್ವಾಸವನ್ನು ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಕಟ್ಟಿಕೊಟ್ಟಿದೆ.
ಭೂಕಂಪ, ಚಂಡಮಾರುತ ಮುಂತಾದ ಪ್ರಕೃತಿ ವಿಪತ್ತುಗಳ ಮುನ್ನೆಚ್ಚರಿಕೆ, ಸಕಾಲಿಕ ಮಾಹಿತಿ ಭಾರಿ ಕಷ್ಟ-ನಷ್ಟವನ್ನು ತಗ್ಗಿಸಲು ನೆರವಾಗಿದೆ. ಚಂಡಮಾರುತ ಸಾಗುವ ದಿಕ್ಕು ಮುಂಚಿತವಾಗಿ ತಿಳಿಯುವುದರಿಂದ ಅದು ಅಪ್ಪಳಿಸುವುದರಿಂದ ನಷ್ಟದ ಒಂದು ಭಾಗವನ್ನಷ್ಟೇ ಉಪಗ್ರಹಗಳ ಉಡಾವಣೆ, ಬಾಹ್ಯಾಕಾಶ ಯೋಜನೆಗಳಿಗೆ ವೆಚ್ಚ ಮಾಡುತ್ತಿದ್ದೇವೆ ಎಂದ ಮೋದಿ, ಚಂದ್ರಯಾನ ಯೋಜನೆಗೆ ಸುರಿದ ನೂರಾರು ಕೋಟಿ ರೂ.ಗಳು ವ್ಯರ್ಥವಲ್ಲ ಎಂದು ಸಮರ್ಥಿಸಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + five =
Remember me
