ನವದೆಹಲಿ:ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜೊತೆಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಈ ವೇಳೆ ಸೈನಿಕರು ವಾದ್ಯಗಳೊಂದಿಗೆ ವಂದೇ ಮಾತರಂ ಹಾಡುವಾಗ, ನರೇಂದ್ರ ಮೋದಿ ಪಾಲ್ಗೊಂಡು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
ವಿಡಿಯೋದಲ್ಲಿ ಯೋಧರ ತಂಡದ ವಂದೇ ಮಾತರಂ ಗಾಯನದ ವೇಳೆ ಮೋದಿ ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು. ಈ ವೇಳೆ ಮೋದಿ ಹಾಡನ್ನು ಗುನುಗುತ್ತಾ, ತಲೆದೂಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಸಶಸ್ತ್ರ ಪಡೆಗಳ ಸೈನಿಕರು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದ್ದಾರೆ. ಪ್ರಧಾನಿ ಮೋದಿ ಸೈನಿಕರಿಗೆ ಶುಭಾಶಯ ತಿಳಿಸುವ ಸಂದರ್ಭದಲ್ಲಿ ರೈಫಲ್‌ ಹಿಡಿದು ಫೋಸ್ ನೀಡಿದರು.
ದೀಪಾವಳಿ ಹಿನ್ನೆಲೆಯಲ್ಲಿ ಲಡಾಖ್​ನ​ ಕಾರ್ಗಿಲ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಯೋಧರನ್ನು ಉದ್ದೇಶಿಸಿ, ನಿಮ್ಮೊಂದಿಗೆ ಇರದೇ ನಾನು ಉತ್ತಮ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ಮೋದಿ ಅವರು ವಿವಿಧ ಮಿಲಿಟರಿ ಬೇಸ್​ನಲ್ಲಿ ಪ್ರತಿವರ್ಷ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ವರ್ಷ ಅವರು ಕಾರ್ಗಿಲ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಯೋಧರಿಗೆ ಸಿಹಿ ಹಂಚಿ, ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
A spirited Diwali in Kargil!pic.twitter.com/qtIGesk98x— Narendra Modi (@narendramodi)October 24, 2022
A spirited Diwali in Kargil!pic.twitter.com/qtIGesk98x
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × five =
Remember me
