ವಿಜಯಪುರ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ನಿನ್ನೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಮಾವೇಶ ಮುಗಿಸಿಕೊಂಡು ವಾಪಸ್ ತೆರಳುವಾಗ ರಸ್ತೆ ಬದಿ ನಿಂತಿದ್ದ ಯುವಕರು ಕಾರ್ ಎದುರು ಮೋದಿ ಮೋದಿ, ಜೈ ಶ್ರೀರಾಮ್ ಘೋಷಣೆ ಕೂಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.
ರಸ್ತೆ ಬದಿ ನಿಂತಿದ್ದ ಯುವಕರು ಸಿದ್ದರಾಮಯ್ಯ ಕಾರ್ ಬರುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆದರೆ ವಾಹನ ದಟ್ಟಣೆ ಇರುವುದರಿಂದ ಸಿದ್ದರಾಮಯ್ಯ ಅವರು ಗಮನಿಸದೆ ಸುಮ್ಮನೆ ತೆರಳಿದ್ದಾರೆ. ನಿನ್ನೆ ರಾತ್ರಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ:2 ಕೋಟಿ ರೂ. ಇನ್ಶೂರೆನ್ಸ್​ ಹಣಕ್ಕಾಗಿ ತಾಯಿ,ಮಗನ ಮಾಸ್ಟರ್​ ಪ್ಲ್ಯಾನ್
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸಾಲಮನ್ನಾ ಮಾಡಿ ಎಂದು ಯಡಿಯೂರಪ್ಪಗೆ ಹೇಳಿದ್ದೆ, ರೈತರ ಸಾಲ‌ಮನ್ನಾ ಮಾಡೋಕಾಗಲ್ಲಾ, ನಮ್ಮ ಹತ್ತಿರ ನೋಟ್ ಪ್ರಿಂಟ್ ಮಾಡೋ ಮಶೀನ್ ಇಲ್ಲಾ ಎಂದು ಹೇಳಿದ್ದರು. ಮನಮೋಹನ ಸಿಂಗ್ ಅವರು 72 ಸಾವಿರ ಕೋಟಿ ರೈತರ ಸಾಲ‌ಮನ್ನಾ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಸೊಸೈಟಿಗಳಲ್ಲಿ ಪಡೆದಿದ್ದ 50 ಸಾವಿರ ರೂಪಾಯಿ ವರೆಗೆ  22 ಲಕ್ಷದ 27 ಸಾವಿರ ರೈತರಿಗೆ 8162 ಕೋಟಿ ಸಾಲ ಮನ್ನಾ ಮಾಡಿದೆ‌. ರೈತರ ಸಾಲ‌ಮನ್ನಾ ಮಾಡಲು ಬಿಜೆಪಿ ಅವರಿಗೆ ಏನು ಬಂದಿದೆ? ಅವರು ಅಂಬಾನಿ, ಅದಾನಿ ಸೇರಿದಂತೆ 700 ಕಾರ್ಪೊರೇಟ್​ಗಳ ಸಾಲ‌ ಮನ್ನಾ ಮಾಡಿದ್ದಾರೆ. ಜೆಡಿಎಸ್ ಅವರು ಅವಕಾಶವಾದಿಗಳು. ನಾವು ಗೆದ್ರೆ ನಮ್ಮ ಜೊತೆ ಬರುತ್ತಾರೆ. ಬಿಜೆಪಿ ಗೆದ್ದರೆ ಅವರ ಜೊತೆ ಹೋಗ್ತಾರೆಂದು ಕಿಡಿಕಾರಿದ್ದಾರೆ.
ಈ‌ ಚುನಾವಣೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಎರಡೂ ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ಮತ ಹಾಕಿಸಬೇಕು. ಎಂ‌ಬಿ‌ ಪಾಟೀಲ್ ಗೆ ಓಟ್ ಹಾಕಿದ್ರೆ ಸಿದ್ದರಾಮಯ್ಯಗೆ ಹಾಕಿದಂಗೆ. ನಿಮ್ಮನ್ನು ನೋಡಿದರೆ 50 ಸಾವಿರ ಅಂತರದಿಂದ ಗದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಸಿಎಂ ಯೋಗಿ ವಿರುದ್ಧ ಪದೇ ಪದೇ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್; ಏನಿದು ಪ್ರಕರಣ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
