ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿಯವರ ನಾಮಬಲ, ಸರ್ಕಾರದ ಕಾರ್ಯಕ್ರಮಗಳು- ಸಂಘಟನಾ ಬಲ ಹಾಗೂ ಸಾಮೂಹಿಕ ನಾಯಕತ್ವ ಮುಂಬರುವ ವಿಧಾನಸಭೆ ಚುನಾವಣೆಗೆ ಊರುಗೋಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪಂಚರಾಜ್ಯಗಳ ಚುನಾವಣಾ ಉಸ್ತುವಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 2024ರ ಲೋಕಸಭೆ ಚುನಾವಣೆಯ ಸೆಮಿಫೈನಲ್​ನಲ್ಲಿ ಗೆದ್ದಾಗಿದೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಪಕ್ಷ ನಿಚ್ಚಳ ಬಹುಮತದೊಂದಿಗೆ ಗೆಲ್ಲಲಿದ್ದು, ವಿಧಾನಸೌಧ ಮೂರನೇ ಮಹಡಿಯಲ್ಲಿ ಮತ್ತೆ ಕಮಲ ಅರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಭಿವೃದ್ಧಿ ಮಂತ್ರ, ಒಗ್ಗಟ್ಟು, ಪರಿಶ್ರಮ ಮುಖ್ಯವಾಗಿದ್ದು, ದಿನದ 24 ತಾಸು ದುಡಿಯಲು ಸಜ್ಜಾಗಬೇಕು. ಯೋಜನಾ ಬದ್ಧ, ವ್ಯವಸ್ಥಿತವಾಗಿ ಎಲ್ಲರೂ ಒಟ್ಟಾಗಿ ನಿಂತು, ಚುನಾವಣೆಯಲ್ಲಿ ಗೆಲ್ಲೋಣವೆಂದು ಬೊಮ್ಮಾಯಿ ಸಲಹೆ ನೀಡಿದರು.
ವಿಶ್ವಾಸ ಗಳಿಸಿರಿ:ನಮ್ಮ ನೀತಿ-ವಿಚಾರಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ವಿಶ್ವಾಸ ಗಳಿಸಬೇಕು. ಸರ್ಕಾರ ಮತ್ತು ಪಕ್ಷ ನನ್ನ ಎರಡು ಕಣ್ಣುಗಳಾಗಿದ್ದು, ಸಚಿವರು ಹಾಗೂ ಶಾಸಕರು ಕೂಡ ಕಾರ್ಯಕರ್ತರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಎಂದ ಸಿಎಂ, ರಾಜ್ಯದಲ್ಲಿ ಪಕ್ಷದ ನೆಲೆ ಭದ್ರವಿಲ್ಲದ ಕ್ಷೇತ್ರಗಳಲ್ಲಿ ಗೆಲುವು, ಗಟ್ಟಿಯಾಗಿರುವೆಡೆ ಮತ್ತಷ್ಟು ಹೆಚ್ಚಿನ ಸ್ಥಾನಗಳನ್ನು ಗೆದ್ದು ದೃಢತೆ ಸಾಧಿಸುವ ಅಗತ್ಯವಿದೆ. ಎಲ್ಲರೂ ಒಂದಾಗಿ ಬಿಜೆಪಿ ಗೆಲುವಿಗೆ ಶ್ರಮಿಸೋಣವೆಂದು ಕಿವಿಮಾತು ಹೇಳಿದರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಚಿವರಾದ ವಿ.ಸೋಮಣ್ಣ, ಮುನಿರತ್ನ, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾನಾ, ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಚುನಾವಣೆ ಅಜೆಂಡಾ ಆಗಿದೆ. ಅದರ ಪರಿಣಾಮವಾಗಿ ಬಿಜೆಪಿ ಪರ ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರ ಉತ್ತಮ ಕೆಲಸಗಳನ್ನು ಜನರಿಗೆ ತಲುಪಿಸಿ ಗೆಲುವು ಸಾಧ್ಯವಾಗಿಸಬೇಕು.
|ಪ್ರಲ್ಹಾದ ಜೋಶಿಕೇಂದ್ರ ಕಲ್ಲಿದ್ದಲು, ಗಣಿ ಸಚಿವ
ಉತ್ತರಪ್ರದೇಶದಲ್ಲಿ ಗೂಂಡಾಗಿರಿ ಮುಕ್ತ ಕಾನೂನು ಮತ್ತು ಸುವ್ಯವಸ್ಥೆ, ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಸರಿಯಾಗಿ ತಲುಪಿದ್ದುದೇ ಚುನಾವಣೆ ಕಾರ್ಯಸೂಚಿಯಾಗಿತ್ತು. ಮೋದಿ-ಯೋಗಿ ಜೋಡಿ ತಾಕತ್ತು ಜನರಲ್ಲಿ ವಿಶ್ವಾಸ ತುಂಬಿತು. ಜಾತಿ, ಧರ್ಮ ಮೀರಿ ಮತಗಳು ಬಿಜೆಪಿಗೆ ಲಭಿಸಿವೆ.
|ಶೋಭಾ ಕರಂದ್ಲಾಜೆಕೇಂದ್ರ ಸಚಿವೆ
ನೀತಿ, ನಿಯತ್ತು, ನೇತೃತ್ವದ ಗೆಲುವು ತಂದುಕೊಟ್ಟಿವೆ. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ ನಾವು ಎಲ್ಲ ಕಾಲದಲ್ಲೂ ಹಿಂದುಗಳು. ಬಿಜೆಪಿ ಗೆಲುವಿನಲ್ಲಿ ದೇಶದ ಹಿತ ಅಡಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಸೋತಿದ್ದರೆ ತುಕ್ಡೇ ಗ್ಯಾಂಗ್ ಎದ್ದೇಳುತ್ತಿದ್ದವು. ಮೋದಿ ಯುಗಾಂತ್ಯ ಎನ್ನುತ್ತಿದ್ದವು.
|ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಹುಬ್ಬಳ್ಳಿ:ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಮೇಲೆ ವಿಶ್ವಾಸ ಇಟ್ಟಿರುವುದನ್ನು ನೋಡಿ ಬೆರಗಾಗಿದ್ದೇನೆ. ಮೋದಿ ಉತ್ತರಾಖಂಡಕ್ಕೆ ನಾಲ್ಕು ಬಾರಿ ಭೇಟಿ ಕೊಟ್ಟಿದ್ದರಿಂದ ಗೆಲುವಿಗೆ ಕಾರಣವಾಯಿತು ಎಂದು ಕೇಂದ್ರ ಸಚಿವ ಹಾಗೂ ಉತ್ತರಾಖಂಡ ಚುನಾವಣಾ ಉಸ್ತುವಾರಿ ಪ್ರಲ್ಹಾದ ಜೋಶಿ ಗುಣಗಾನ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣವಲ್ಲ. 80 ಸಾವಿರ ಸಭೆಗಳನ್ನು ಮಾಡಿರುವುದು ಮೈಲುಗಲ್ಲು. ಐದು ವರ್ಷದಲ್ಲಿ ಈ ರಾಜ್ಯ ಅಭಿವೃದ್ಧಿ ಕಂಡಿದೆ. ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ ಎಂದರು. ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುತಿನ್ ಜತೆ ಮಾತುಕತೆ ನಡೆಸಿ 22 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದರು. ಇದು ಮೋದಿ ಅವರ ಗಟ್ಟಿ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ಕಾರ್ ಡೋರ್​ ತೆಗೆಯಲಾಗದೆ ಸಾವು!; ರಕ್ಷಿಸುವಷ್ಟರಲ್ಲಿ ಸ್ಫೋಟ, ಜೀವಂತ ಸುಟ್ಟುಹೋದ ಯುವಕ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − 6 =
Remember me
