ಮಂಗಳೂರು:ಬಿಜೆಪಿ ಶಕ್ತಿಕೇಂದ್ರವೆಂದೇ ಕರೆಯಲ್ಪಡುವ ಕರಾವಳಿಯಲ್ಲಿ ಬೃಹತ್ ಸಮಾವೇಶದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ತೆರೆದಿಟ್ಟು, ಡಬಲ್ ಇಂಜಿನ್ ಸರ್ಕಾರ ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸಲು ಸದಾ ಬದ್ಧ ಎಂದು ಘೊಷಿಸಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಈಗಾಗಲೇ ಸಮಾವೇಶಗಳ ಮೂಲಕ ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್​ಗೆ ಈ ಮೂಲಕ ಪ್ರಧಾನಿ ಮೋದಿ ಬಲವಾದ ತಿರುಗೇಟು ನೀಡಿದ್ದಾರೆ. ಎಲ್ಲೂ ಕೂಡಾ ಚುನಾವಣೆ ಅಥವಾ ವಿಪಕ್ಷಗಳ ಬಗ್ಗೆ ಮಾತನಾಡದ ಪ್ರಧಾನಿ ಕೇವಲ ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಯನ್ನಷ್ಟೇ ಜನರ ಮುಂದಿಟ್ಟು ಕಳೆದ 8 ವರ್ಷಗಳಲ್ಲಿ ಮಾಡಿರುವ ಕಾರ್ಯಗಳನ್ನು ತಿಳಿಹೇಳಿದರು. ನಮ್ಮ ಸರ್ಕಾರ ಸದಾ ಜನರ ಜತೆಯಲ್ಲಿ ಇರುತ್ತದೆ ಎನ್ನುವ ಮೂಲಕ ವಿಪಕ್ಷಗಳ ಎಲ್ಲ ಸವಾಲುಗಳಿಗೂ ಉತ್ತರಿಸುವ ಪ್ರಯತ್ನ ಮಾಡಿದರು. ಮುಖ್ಯಮಂತ್ರಿ ಬದಲಾವಣೆ, ಕಮಿಷನ್ ವ್ಯವಹಾರ, ಬಿಜೆಪಿ ಕಾರ್ಯಕರ್ತರ ಕೊಲೆ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ ಮತ್ತಿತರ ವಿಚಾರಗಳು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದ್ದವು. ಅವೆಲ್ಲವನ್ನೂ ಮರೆಸಿ ಹೊಸ ಚೈತನ್ಯ ಮೂಡಿಸುವಲ್ಲಿ ಇಂದಿನ ಬೃಹತ್ ಸಮಾವೇಶ ಯಶಸ್ವಿಯಾಯಿತು.
ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಸಾರ್ವಜನಿಕರಲ್ಲಿ ಮೋದಿ ‘ಮಿಂಚು’ ಹರಿಸುವಲ್ಲೂ ಸಮಾವೇಶ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿರುವುದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತಂದಿದ್ದು ಚುನಾವಣೆಗೆ ಸಿದ್ಧತೆ ನಡೆಸುವಂತೆ ಪರೋಕ್ಷವಾಗಿ ಹುರಿದುಂಬಿಸಿದಂತಾಗಿದೆ. ಪ್ರತಿಪಕ್ಷ ಕಾಂಗ್ರೆಸ್​ಗೂ ಮೋದಿ ಸಮಾವೇಶ ರಣವೀಳ್ಯದ ಸ್ಪಷ್ಟ ಸಂದೇಶವನ್ನೇ ರವಾನಿಸಿದೆ. ಸಮಾವೇಶದ ಬಳಿಕವೂ ರಾಜ್ಯದ ಹಿರಿಯ ನಾಯಕರನ್ನು ಸೇರಿಸಿ ಸಭೆ ನಡೆಸಿದ ಪ್ರಧಾನಿ, ಸೂಕ್ತ ಮಾರ್ಗದರ್ಶನಗಳನ್ನು ನೀಡಿರುವುದು ಚುನಾವಣಾ ತಯಾರಿಗೆ ಚಾಲನೆ ಎನ್ನುವುದು ಸ್ಪಷ್ಟ.
ದೇಶವನ್ನು ನಾಲ್ಕೂ ದಿಕ್ಕಿನಿಂದ ಅಭಿವೃದ್ಧಿಪಡಿಸುವ ದೂರದೃಷ್ಟಿಯ ಪ್ರಧಾನಿ ಮೋದಿ ಆವರಿಂದಾಗಿ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆ ಸಂದಿದೆ. ಕರಾವಳಿ ಅಭಿವೃದ್ಧಿಗೆ ಸುವರ್ಣಾರದಲ್ಲಿ ಬರೆದಿಡಬೇಕಾದ ದಿನವಿದು. ಪ್ರಧಾನಿ ಮಂಗಳೂರಿಗೆ ಬರುವ ದಿನವೇ ಸಿಆರ್​ಜಡ್​ ನಿಯಮ ಸಡಿಲಿಕೆಗೆ ಅನುಮತಿ ಸಿಕ್ಕಿರುವುದು ಅಭಿವೃದ್ಧಿಗೆ ಪೂರಕವಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ರಾಜಕೀಯರಹಿತ ಭಾಷಣ:ಅಂದಾಜು 25 ನಿಮಿಷದ ಭಾಷಣದಲ್ಲಿ ಮೋದಿ ಎಲ್ಲೂ ನೇರವಾಗಿ ರಾಜಕೀಯ ಪ್ರಸ್ತಾಪಿಸಲಿಲ್ಲ. ಆದರೆ, ಪ್ರತಿ ಮಾತಿನಲ್ಲೂ ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರ ಮಾಡಿದ್ದೇನು ಎಂಬುದನ್ನು ಎಳೆಎಳೆಯಾಗಿ ವಿವರಿಸಿದರು. ಸರ್ಕಾರಗಳ ಸಾಧನೆ, ಯೋಜನೆಗಳ ವಿವರ, ಅಂಕಿ-ಅಂಶ, ಅಭಿವೃದ್ಧಿ ವಿಚಾರಗಳೇ ಮಹತ್ವ ಪಡೆದವು. ಎಂದಿನ ಟೀಕೆ- ಟಿಪ್ಪಣಿ, ಕಾಲೆಳೆಯುವ ಚಟಾಕಿಗಳಂಥ ವರಸೆಗಳಿರಲಿಲ್ಲ. ಸರ್ಕಾರಿ ಕಾರ್ಯಕ್ರಮವಾಗಿದ್ದ ಕಾರಣ ರಾಜಕೀಯ ಭಾಷಣ ಇರಲಿಲ್ಲ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರದ ಕೆಲಸ ಜನರಿಗೆ ಮನದಟ್ಟು ಮಾಡಿ:ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಮುಗಿದ ಬಳಿಕ ನವಮಂಗಳೂರು ಬಂದರಿನ ಹೆಲಿಪ್ಯಾಡ್ ಬಳಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರ ಜತೆ ಅನೌಪಚಾರಿಕ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷರ ಮನವಿಗೆ ಓಗೊಟ್ಟು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಸಂಬಂಧಿಸಿದ ಪಕ್ಷದ ಸಭೆ ನಡೆಸಿದರು. ಅಲ್ಲದೆ, ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಬೇಕೆಂಬ ಕೋರ್ ಕಮಿಟಿ ಒತ್ತಾಯಕ್ಕೂ ಮೋದಿ ಒಪ್ಪಿಗೆ ಸೂಚಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಕಾರ್ಯಗಳು, ಸಂಘಟನಾ ಚಟುವಟಿಕೆಗಳ ಪರಾಮರ್ಶೆ ನಡೆಸಿದ ಅವರು, ಅಭಿವೃದ್ಧಿ ಕೆಲಸ ಮತ್ತಷ್ಟು ಚುರುಕುಗೊಳಿಸಲು ಸಲಹೆ ನೀಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ವೃದ್ಧಿ ತಂತ್ರಗಾರಿಕೆ ಅನುಷ್ಠಾನಗೊಳಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಕೇವಲ ಅಂಕಿ- ಅಂಶಗಳಿಗೆ ಸೀಮಿತವಾಗá-ವುದು ಬೇಡ. ಕೇಂದ್ರ, ರಾಜ್ಯದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು, ವ್ಯಾಪಕ ಪ್ರಚಾರ ನೀಡಬೇಕು. ಸರ್ಕಾರದ ಸಾಧನೆ ಏನು ಎಂಬುದು ಜನಸಾಮಾನ್ಯರಿಗೆ ತಿಳಿಯುವಂತಾ ಗಬೇಕು. ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಸರ್ಕಾರಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಮೋದಿ ಸೂಚಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಷಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಡಿ.ವಿ. ಸದಾನಂದ ಗೌಡ, ಅರುಣ್ ಸಿಂಗ್, ಸಿ.ಟಿ. ರವಿ. ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಕೆ.ವಿ. ರಾಜೇಶ್, ಡಿ.ಕೆ. ಅರುಣಾ, ನಿರ್ಮಲ್ ಕುಮಾರ್ ಸುರಾನಾ, ಆರ್. ಅಶೋಕ್ ಇದ್ದರು.
ಮಾಜಿ ಮá-ಖ್ಯಮಂತ್ರಿಯಾಗಿದ್ದರೂ ಬಿ.ಎಸ್. ಯಡಿಯೂರಪ್ಪ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮ ಸಾಕ್ಷಿಯಾಯಿತು. ಇಡೀ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಸನಿಹದಲ್ಲಿ ಕಂಡಾಗಲೆಲ್ಲ ಅಭಿಮಾನಿಗಳು ಜಯಕಾರ ಹಾಕಿದರು. ಮೈದಾನಕ್ಕೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಬಳಿಕ ವೇದಿಕೆ ಮುಂಭಾಗದ ಬೃಹತ್ ಪರದೆಯಲ್ಲಿ ಮೋದಿಯವರನ್ನು ಕಂಡೊಡನೆ ಜೈಕಾರ ಹಾಕá-ತ್ತಿದ್ದ ಕಾರ್ಯಕರ್ತರು, ಯಡಿಯೂರಪ್ಪ ಅವರಿಗೂ ಜೈಕಾರ ಕೂಗುತ್ತಿದ್ದರು. ಮೋದಿ ವೇದಿಕೆಗೆ ಆಗಮಿಸá-ವ ಮುನ್ನ ಹಲವು ನಾಯಕರ ಆಗಮನವಾದರೂ ಸುಮ್ಮನಿದ್ದ ಜನಸ್ತೋಮ, ಯಡಿಯೂರಪ್ಪ ವೇದಿಕೆ ಹತ್ತುತ್ತಿದ್ದಂತೆ ಜಯಘೊಷದ ಸುರಿಮಳೆಯನ್ನೇ ಸುರಿಸಿದರು. ಮೋದಿಯವರ ಬೆನ್ನಿಗೆ ಯಡಿಯೂರಪ್ಪ ಕೂಡ ಕಾರ್ಯಕ್ರಮದಿಂದ ನಿರ್ಗಮಿಸಿದರು. ಈ ವೇಳೆ ಅವರ ವಾಹನ ಕಂಡೊಡನೆ ಜೈ ಯಡಿಯೂರಪ್ಪ ಎಂದು ತಮ್ಮ ಪ್ರೀತ್ಯಭಿಮಾನ ತೋರ್ಪಡಿಸಿದ್ದು ಗಮನ ಸೆಳೆಯಿತು.
ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್​

ಸಂಭಾವನೆ ಪಡೆಯದೆ ಪುಣ್ಯಕೋಟಿ ರಾಯಭಾರಿ ಆದ ಸುದೀಪ್​; ಕಿಚ್ಚನಿಗೆ ಸರ್ಕಾರದಿಂದಲೇ ಬರ್ತ್​ಡೇ ಗಿಫ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
