ಕಲಬುರಗಿ:ಕಲಬುರಗಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಒಂದರಲ್ಲಿ ಮುಸ್ಲಿಂ ಸಮಾಜದ ಮಜರ್​ಅನ್ನು (ಗೋರಿ) ಇಡಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.
ಎರಡು ತಿಂಗಳ ಹಿಂದೆಯೇ ಗ್ರಾಮದ ಮೋಹರಂ ಆಚರಣೆ ಸಮಿತಿಯವರೇ ಮುಂದಾಗಿ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಮಜರ ಇಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಈ ಘಟನ ನಡೆದಿದೆ. ಅವರು ಶಾಲೆಯ ಗೇಟ್ ಬೀಗ ಮುರಿದು ಅತಿಕ್ರಮಣ ಮಾಡಿ ಕೊಠಡಿಯಲ್ಲಿ ಮಜರ್ ಇಟ್ಟಿದ್ದಾರೆ.
ಈ ಮೊದಲು ಗ್ರಾಮದ ಸಂತೆ ಜಾಗದಲ್ಲಿ ಲಾಲ್ ಸಾಹೇಬ್ ನೈಯಿಲೆ ಹೈದರಿ ದರ್ಗಾದ ಮಜರ್ ಇತ್ತು. ಆದರೆ ಗ್ರಾಮ ಪಂಚಾಯತ್ ಸಿಬ್ಬಂದಿ ಸಂತೆ ಜಾಗದಲ್ಲಿದ್ದ ದೇವಸ್ಥಾನ ಮತ್ತು ಮಜರ್​ಅನ್ನು ತೆರವುಗೊಳಿಸಿದ್ದರು. ನಂತರ ಗ್ರಾಮದ ಕೆಲ ಮುಸ್ಲಿಮರು ಸೇರಿಕೊಂಡು ಶಾಲಾ ಕೊಠಡಿಯಲ್ಲಿ ಮಜರ್ ಇಟ್ಟಿದ್ದಾರೆ. ಈ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಅದೇ ಕೊಠಡಿಯಲ್ಲಿ ಈ ಗ್ರಾಮಸ್ಥರು ಬಾಡೂಟ ಕೂಡಾ ಮಾಡಿದ್ದಾರೆ. ಸದ್ಯಕ್ಕೆ ಸರ್ಕಾರಿ ಶಾಲಾ ಕೊಠಡಿಗೆ ಸಿಬ್ಬಂದಿಗಳು ಬೀಗ ಹಾಕಿದ್ದಾರೆ. ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಕೂಡಲೇ ಮಜರ್ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಸೋಮವಾರದೊಳಗಾಗಿ ತೆರವುಗೊಳಿಸದಿದ್ದರೆ ನವಂಬರ್ 29 ರಂದು ಚಲೋ ಬಂದರವಾಡ ನಡೆಸೋ ಎಚ್ಚರಿಕೆ ಕೂಡ ಸ್ವಾಮೀಜಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − five =
Remember me
