ಬೆಂಗಳೂರು:ಮಾಸ್ಟರ್​ ಆನಂದ್​ ಪುತ್ರಿ ಹಾಗೂ ಬಾಲ ನಟಿ ವಂಶಿಕಾ ಹೆಸರನ್ನು ಬಳಸಿ ಹಲವರಿಗೆ ವಂಚನೆ ಎಸಗಿರುವ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ನಿಶಾ ನರಸಪ್ಪಳ ಕುರಿತಾದ ಒಂದೊಂದೆ ರೋಚಕ ಸಂಗತಿ ಪೊಲೀಸ್​ ತನಿಖೆಯಲ್ಲಿ ಬಯಲಾಗುತ್ತಿದೆ.
ಹೈಫೈ ಶೋಕಿಗೆ ಬಿದ್ದಿದ್ದ ನಿಶಾಳ ವಂಚನೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಈವರೆಗೂ 40 ಲಕ್ಷ ರೂಪಾಯಿ ಮೋಸ ಆಗಿದೆ ಎಂದು ಮಾತ್ರ ದೂರು ದಾಖಲಾಗಿದೆ. ಆದರೆ 2 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿರುವುದು ಇದೀಗ ತನಿಖೆಯಲ್ಲಿ ಪತ್ತೆಯಾಗಿದೆ. ನಿಶಾಳ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿದ ಪೊಲೀಸರೇ ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ:ಗ್ರಾಮ ಒನ್​, ಬಾಪೂಜಿ ಕೇಂದ್ರಗಳಿಗೆ ದಿಢೀರ್​ ಭೇಟಿ ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ ದೂರಿನ ಹಿನ್ನೆಲೆ ಸಿಬ್ಬಂದಿಗೆ ಶಿಸ್ತುಕ್ರಮದ ಎಚ್ಚರಿಕೆ
2 ಕೋಟಿ ರೂಪಾಯಿಗೂ ಅಧಿಕ ಮೋಸ ಮಾಡಿದರೂ ನಿಶಾ ಬ್ಯಾಂಕ್​ ಖಾತೆಯಲ್ಲಿ ಇದ್ದಿದ್ದು ಮಾತ್ರ ಕೇವಲ 8 ಸಾವಿರ ರೂಪಾಯಿ. ಆದ್ರೆ ಬ್ಯಾಂಕ್​ ವಹಿವಾಟು ನಡೆದಿರುವುದು 2 ಕೋಟಿ ರೂಪಾಯಿಗೂ ಅಧಿಕ. ಇದುವರೆಗೂ 40 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ಮಾತ್ರ ದೂರು ದಾಖಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನಿಶಾ ನರಸಪ್ಪ ತುಂಬಾ ಹೈಫೈ ಶೋಕಿಗೆ ಬಿದ್ದಿದ್ದಳು. ಪೋಷಕರನ್ನು ವಂಚಿಸಿ ಹಣ ಕಬಳಿಸಿ, ಬಾರ್, ಪಬ್, ಹೈಫೈ ಹೋಟೇಲ್​​ಗಳಲ್ಲೇ ಪಾರ್ಟಿ ಮಾಡುತ್ತಾ ವಿಲಾಸಿ ಜೀವನವನ್ನು ನಡೆಸುತ್ತಿದ್ದಳು. ಇಷ್ಟೇ ಅಲ್ಲದೇ ಅಧಿಕ ಬಡ್ಡಿಗೆ ಹಣ ಪಡೆದು ಸಾಕಷ್ಟು ಜನರಿಗೆ ವಂಚನೆ ಮಾಡಿರುವ ಆರೋಪವಿದೆ. 20% ಬಡ್ಡಿ ನೀಡುತ್ತೇನೆ ಎಂದು ನಂಬಿಸಿ ಲಕ್ಷ ಲಕ್ಷ ರೂಪಾಯಿ ಪಡೆದು ಪಂಗನಾಮ ಹಾಕಿದ್ದಾಳೆ. ಆದ್ರೆ ಈ ಬಗ್ಗೆ ಯಾವುದೇ ದೂರು ಇದುವರೆಗೂ ದಾಖಲಾಗದಿರುವುದು ಬಹಳ ಅಚ್ಚರಿಗೆ ಕಾರಣವಾಗಿದೆ. ಸದ್ಯ ಸದಾಶಿವನಗರ ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ: ಬೆಳಕಿಗೆ ಬರುತ್ತಿದೆ ನಿಶಾ ನರಸಪ್ಪಳ ಒಂದೊಂದೆ ಮೋಸ

ವಂಶಿಕಾ ಹೆಸರಿನಲ್ಲಿ ವಂಚನೆ; ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನ

ವಂಶಿಕಾ ಹೆಸರಿನಲ್ಲಿ ವಂಚನೆ; ಜೈಲಿನಲ್ಲಿದ್ದರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ನಿಶಾ ನರಸಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 1 =
Remember me
