ಬೆಂಗಳೂರು:ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್. ಇವರನ್ನ ನಂಬಿದ ಜನರೀಗ ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಗಿರಿನಗರ ಠಾಣಾ ವ್ಯಾಪ್ತಿ‌ಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಬರೋಬ್ಬರಿ 900 ಜನರಿಗೆ ಪಂಗನಾಮ ಸುಮಾರು 20 ಕೋಟಿ‌ ರೂಪಾಯಿ ವಂಚಿಸಿರುವ ಆರೋಪ ಖತರ್ನಾಕ್​ ದಂಪತಿ ಮೇಲಿದೆ. ಈ ಆರೋಪಿಗಳ ಹೆಸರು ಜ್ಞಾನೇಶ್-ಲೀಲಾವತಿ. ಈ ದಂಪತಿ ಸೇರಿದಂತೆ ಮಗ ಮನೋಜ್​ನನ್ನೂ ಪೊಲೀಸರು ಬಂಧಿಸಿದ್ದಾರೆ. ಹೆಚ್ಚುವರಿ ಬಡ್ಡಿ ಆಸೆಗೆ‌ ಬೀದಿಗೆ ಬಿದ್ದ ಹೂಡಿಕೆದಾರರು, ಪ್ರತಿಭಟನೆ ಮೂಲಕ‌ ಕಣ್ಣೀರಿಡುತ್ತಿದ್ದಾರೆ. ಜ್ಞಾನೇಶ್​ ಮತ್ತು ಲೀಲಾವತಿ ಅವರ ಮಗಳು‌ ಮೇಘನಾ ಹಾಗೂ ಅಳಿಯ ರವಿಕುಮಾರ್‌ ಕೂಡ ವಂಚನೆಯಲ್ಲಿ‌ ಭಾಗವಹಿಸಿದ್ದಾರೆ. ಅವರನ್ನೂ ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆ ರೈಟರ್ ಆಗಿರುವ ಅಳಿಯ ರವಿಕುಮಾರ್‌, ಈ ವಂಚನೆ ಕೇಸ್​ ಮೇಲೆ ಪ್ರಭಾವ ಬೀರುವ ಆತಂಕ ಸಂತ್ರಸ್ತರಲ್ಲಿ ದಟ್ಟವಾಗಿದೆ.ಇದನ್ನೂ ಓದಿರಿಪ್ಲೀಸ್​… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?
ಜನರಿಗೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಯಾಮಾರಿಸುತ್ತಿದ್ದ ಜ್ಞಾನೇಶ್​ ಮತ್ತು ಲೀಲಾವತಿ ದಂಪತಿ, ಪತ್ನಿಗೆ ಹೇಳದಂತೆ ಪತಿಯಿಂದ, ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಇವರನ್ನು ನಂಬಿದ ಮಂಜುಳಾ ಎಂಬಾಕೆ ಬರೋಬ್ಬರಿ 20 ಲಕ್ಷ ಹಣ ಕೊಟ್ಟಿದ್ದರು. ಇದೀಗ ಹಣ ವಾಪಸ್​ ಬಾರದೆ ಕಂಗಾಲಾಗಿರುವ ಆಕೆ, ಮಗಳ ಮದುವೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಅದೇ ರೀತಿ ನಿವೃತ್ತ ಕೆಎಸ್​ಆರ್​ಟಿಸಿ ಚಾಲಕ ನಾರಾಯಣ್​ಗೂ ಮೋಸ ಮಾಡಲಾಗಿದೆ. ಮನೆ ಖರೀದಿ ಆಸೆಯಲ್ಲಿ ಒಟ್ಟು 50 ಲಕ್ಷ ಹಣ ಹೂಡಿಕೆ ಮಾಡಿದ್ದರು. ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜ್ಞಾನೇಶ್​ ಮತ್ತು ಲೀಲಾವತಿ ದಂಪತಿಯ ಅಳಿಯ ರವಿಕುಮಾರ್​ ಮತ್ತು ಮಗಳು ಮೇಘನಾರನ್ನು ಬಂಧಿಸಿ. ಅವರಿಬ್ಬರೂ ತನಿಖೆ ಮೇಲೆ‌ ಪ್ರಭಾವ ಬೀರುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು. ಕೂಡಲೇ ಈ ಕೇಸ್ ಅನ್ನು ಸಿಐಡಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fifteen =
Remember me
