ನನಗೆ ಈಗ 48 ವರ್ಷ. ಸರ್ಕಾರಿ ಅನುದಾನಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ತಿಂಗಳ ಸಂಬಳ ರೂ. 60,854. ವಾರ್ಷಿಕ ಉಳಿತಾಯ ವಿವಿಧ ಇನ್ಶೂರೆನ್ಸ್ ಸೇರಿ ರೂ. 1,07,508 ಇದೆ. 2017ರ ಸೆಪ್ಟೆಂಬರ್​ನಲ್ಲಿ ಎಸ್​ಬಿಐನಿಂದ 240 ತಿಂಗಳಿಗೆ ರೂ. 32 ಲಕ್ಷ ಗೃಹಸಾಲ ಪಡೆದಿದ್ದೇನೆ. ಪ್ರತಿ ತಿಂಗಳು ಅದರ ಕಂತು ರೂ. 31,500. ಈಗ ಗೃಹಸಾಲ (2020ರ ಆಗಸ್ಟ್​ಗೆ ಸರಿಯಾಗಿ) ರೂ. 29 ಲಕ್ಷ ಇದೆ. ನನಗೆ ಒಂದು ಕಾರು ಕೊಳ್ಳುವ ಇಂಗಿತ ಇದೆ. ಇದರ ಜತೆಗೆ ಮನೆಯ ಇಂಟೀರಿಯರ್ ಮಾಡಿಸಬೇಕಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಹೋಮ್ ಲೋನ್ ಟಾಪ್ ಅಪ್ ರೂ. 10 ಲಕ್ಷಕ್ಕೂ ಹೆಚ್ಚು ಸಾಲ ಕೊಡುವುದಾಗಿ ಹೇಳಿದ್ದಾರೆ. ಈಗ ಇರುವ ಸಾಲ ರೂ. 29 ಲಕ್ಷ, ಹೊಸದಾಗಿ ರೂ. 10 ಲಕ್ಷ ಸಾಲ ಪಡೆದರೆ ಒಟ್ಟು ಸಾಲ ರೂ. 39 ಲಕ್ಷ ಆಗುತ್ತದೆ. ಇದನ್ನು ಯೋಚಿಸಿದರೆ ಭಯವಾಗುತ್ತದೆ. ನನ್ನ ಮಡದಿ ಶಿಕ್ಷಕಿಯಾಗಿದ್ದಾರೆ. ವಯಸ್ಸು 38 ವರ್ಷ. ತಿಂಗಳಿಗೆ ರೂ. 42,000 ಸಂಬಳ ಇದೆ. ವಾರ್ಷಿಕ ಉಳಿತಾಯ ರೂ. 1,12,000. ಇವರಿಗೆ ಖಔ ಲೋನ್ ಮತ್ತು ಓಎಐಈ ಲೋನ್ ಸೇರಿ ಮೂರು ವರ್ಷದ ಅವಧಿಗೆ ರೂ. 4.5 ಲಕ್ಷ ಸಾಲ ಇದ್ದು, ಒಂದು ವರ್ಷ ಪೂರ್ತಿಯಾಗಿದೆ. ನಾನು 2000ನೇ ಇಸವಿಯಲ್ಲಿ ಒಂದು ಪಾಲಿಸಿ ಮಾಡಿಸಿದ್ದೆ. ಈಗ ಅದರ ರೂ. ಒಂದು ಲಕ್ಷ ಬಂದಿದೆ. ಇದೆಲ್ಲವನ್ನೂ ತಾವು ಗಮನಿಸಿ ನಾನು ರೂ. 10 ಲಕ್ಷ ಸಾಲ ಪಡೆದು ಕಾರು ಹಾಗು ಮನೆಯ ಇಂಟೀರಿಯರ್ ಇವೆರಡನ್ನೂ ಪಡೆಯಬಹುದಾ ಎಂದು ತಿಳಿಸಿ.
| ಮಲ್ಲಿಕಾರ್ಜುನ ಚಿತ್ರದುರ್ಗ
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ಮಾತಿದೆ. ಹಣಕಾಸು ನಿರ್ವಹಣೆಯಲ್ಲಿ ನಾವು ಈ ಮಾತನ್ನು ಅಳವಡಿಸಿಕೊಳ್ಳಬೇಕು. ಸಾಲದಲ್ಲಿ ಎರಡು ವಿಂಗಡಣೆ ಮಾಡಬಹುದು. ಒಂದನೆಯದ್ದು ಉತ್ಪಾದಕ ಸಾಲ, ಮತ್ತೊಂದು ಅನುತ್ಪಾದಕ ಸಾಲ. ಮನೆ ಖರೀದಿ, ಸೈಟ್ ಖರೀದಿ, ಕೃಷಿ ಭೂಮಿ ಖರೀದಿಗೆ ಮಾಡುವ ಸಾಲಗಳನ್ನು ಉತ್ಪಾದಕ ಸಾಲ ಎನ್ನಬಹುದು. ಯಾಕೆಂದರೆ ಇಲ್ಲಿ ಆಸ್ತಿಯ ಮೌಲ್ಯ ವೃದ್ಧಿಸುತ್ತದೆ. ಉದಾಹರಣೆಗೆ ನೀವು ಐದು ವರ್ಷಗಳ ಹಿಂದೆ ರೂ. ಐದು ಲಕ್ಷಕ್ಕೆ ಪಡೆದಿದ್ದ 34ಗಿ40 ವಿಸ್ತೀರ್ಣದ ಸೈಟಿನ ಬೆಲೆ ಈಗ ರೂ. 12 ಲಕ್ಷ ಆಗಿದೆ ಅಂದರೆ ನೀವು ಮಾಡಿದ ಸಾಲದಿಂದ ನೀವು ಹೆಚ್ಚಿನದ್ದನ್ನು ಗಳಿಸಿಕೊಂಡಿದ್ದೀರಿ ಎಂದರ್ಥ. ಆದರೆ ಕಾರ್ ಖರೀದಿ ಅಥವಾ ಇಂಟೀರಿಯರ್ ಮಾಡಿಸಲು ನಾವು ಮಾಡುವ ಸಾಲ ಅನುತ್ಪಾದಕ ಸಾಲ. ಈ ಸಾಲದಿಂದ ಖರೀದಿಸಿದ ವಸ್ತುವಿನ ಮೌಲ್ಯ ವೃದ್ಧಿಸುವುದಿಲ್ಲ. ರೂ. 10 ಲಕ್ಷ ಕೊಟ್ಟು ಖರೀದಿಸುವ ಕಾರಿನ ಬೆಲೆ ಒಂದೆರಡು ವರ್ಷ ಕಳೆದು ನೀವು ಮಾರಾಟ ಮಾಡಬೇಕು ಅಂದರೆ ರೂ. ಐದು ಲಕ್ಷಕ್ಕೆ ಬಂದಿರುತ್ತದೆ. ಹಾಗಾಗಿ ಅನುತ್ಪಾದಕ ಕಾರಣಗಳಿಗೆ ಸಾಲ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇದರ ಅರ್ಥ ಕಾರು ಖರೀದಿಸಬಾರದು ಅಥವಾ ಇಂಟೀರಿಯರ್ ಮಾಡಿಸಬಾರದು ಎಂದಲ್ಲ. ಆದರೆ ಈಗಾಗಲೇ ಸಾಲದ ಜವಾಬ್ದಾರಿ ಇರುವುದರಿಂದ ಮತ್ತಷ್ಟು ಸಾಲದ ಹೊರೆ ಹೊರುವುದು ಎಷ್ಟು ಸರಿ ಯೋಚಿಸಿ.ಇದನ್ನೂ ಓದಿ:ಮನಿಮಾತು| ಅಕ್ಕನ ವೇತನ ಆರು ಲಕ್ಷ ರೂಪಾಯಿ ಇದ್ದು, ಆದಾಯ ತೆರಿಗೆ ಪಾವತಿಸಬೇಕೆ?
ಸಾಲದ ಲೆಕ್ಕಾಚಾರ ಹೀಗಿರಲಿ:ನಿಮ್ಮ ಎಲ್ಲ ಸಾಲಗಳ ಮಾಸಿಕ ಕಂತಿನ ಮೊತ್ತ (ಇಎಂಐ) ನಿಮ್ಮ ತಿಂಗಳ ಆದಾಯದ ಶೇ. 50ಕ್ಕಿಂತ ಹೆಚ್ಚಿಗೆ ಇರಬಾರದು. ಅಂದರೆ ನಿಮ್ಮ ಸಂಬಳ ರೂ. ಒಂದು ಲಕ್ಷ ಇದ್ದರೆ ನಿಮ್ಮ ಎಲ್ಲ ಸಾಲಗಳ ಒಟ್ಟು ಮಾಸಿಕ ಕಂತಿನ (ಇಎಂಐ) ಮೊತ್ತ ರೂ. 50 ಸಾವಿರ ಮೀರಬಾರದು.
ಗೃಹಸಾಲ ನಿಯಮ:ನಿಮ್ಮ ವಾರ್ಷಿಕ ಆದಾಯದ ಐದು ಪಟ್ಟು ಮಾತ್ರ ನಿಮ್ಮ ಮನೆಯ ಮೌಲ್ಯ ಇರಬೇಕು. ಇನ್ನು ಸಾಲ ಕೊಳ್ಳುವಾಗ ಕನಿಷ್ಠ ಶೇ. 25ರಷ್ಟು ಡೌನ್ ಪೇಮೆಂಟ್ ಮಾಡಿದರೆ ಒಳಿತು. ನಿಮ್ಮ ಮಾಸಿಕ ಆದಾಯದ ಶೇ. 30ರಷ್ಟು ಮಾತ್ರ ನಿಮ್ಮ ಗೃಹಸಾಲದ ಮಾಸಿಕ ಕಂತು (ಇಎಂಐ) ಆಗಿರಬೇಕು. ಗರಿಷ್ಠ 20 ವರ್ಷಕ್ಕಿಂತ ಹೆಚ್ಚು ಅವಧಿಗೆ ಸಾಲ ಕೊಳ್ಳಬಾರದು. ಸಾಧ್ಯವಾದಾಗ ಅವಧಿಗೆ ಮುನ್ನ ಸಾಲ ಮರುಪಾವತಿಗೆ ಮುಂದಾಗಬೇಕು.
ವಾಹನ ಸಾಲ ನಿಯಮ:ವಾಹನ ಸಾಲ ಪಡೆಯುವಾಗ ಕನಿಷ್ಠ 20 ಪರ್ಸೆಂಟ್ ಡೌನ್ ಪೇಮೆಂಟ್ ಮಾಡಿ. ಗರಿಷ್ಠ ನಾಲ್ಕು ವರ್ಷಕ್ಕೆ ಸಾಲ ಪಡೆಯಿರಿ. ನಿಮ್ಮ ಮಾಸಿಕ ಆದಾಯದ ಶೇ. 10ರಷ್ಟು ಮಾತ್ರ ಸಾಲದ ಮಾಸಿಕ ಕಂತು (ಇಎಂಐ) ಆಗಿರಬೇಕು.ಇದನ್ನೂ ಓದಿ:ಮನಿಮಾತು| ಉಳಿತಾಯ ಓಕೆ, ಹೂಡಿಕೆ ಇಲ್ಲ ಯಾಕೆ?
ವಯಸ್ಸು 24. ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ರೂ. 22-25 ಸಾವಿರ ಸಂಬಳ ಪಡೆಯುತ್ತೇನೆ. ಸಂಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಪದವಿ ಬಳಿಕ ಬೇರೆ ಕಂಪನಿಯಲ್ಲಿ ಕೆಲಸ ಪಡೆಯುವ ಗುರಿಯಿದ್ದು, ಈಗಿರುವ ಸಂಬಳದಲ್ಲಿ ಖರ್ಚುಗಳೆಲ್ಲ ಕಳೆದು ತಿಂಗಳಿಗೆ ರೂ. 10-13 ಸಾವಿರ ಉಳಿತಾಯವಿದೆ. ಅದನ್ನು ಪಿ.ಪಿ.ಎಫ್.ನಲ್ಲಿ 15 ವರ್ಷಗಳ ಅವಧಿಗೆ ಹೂಡಿಕೆ ಮಾಡುವ ಬಯಕೆ ಹೊಂದಿದ್ದು, ತುರ್ತು ಸಂದರ್ಭದಲ್ಲಿ ಹೂಡಿಕೆಯ ಹಣವನ್ನು ಹಿಂಪಡೆಯಬಹುದು ಎಂದು ತಮ್ಮ ಆಪ್ ಮೂಲಕ ತಿಳಿದುಕೊಂಡಿದ್ದೇನೆ. ಇದರ ಬಗ್ಗೆ ವಿವರವಾಗಿ ತಿಳಿಸಿ.
| ಅರುಣ್ ಕುಮಾರ್
ಪಿಪಿಎಫ್ ಎಂಬುದು 15 ವರ್ಷಗಳ ಠೇವಣಿ ಖಾತೆಯಾಗಿದ್ದು ಇದನ್ನು ಆಯ್ದ ಕೆಲವು ಬ್ಯಾಂಕ್​ಗಳು ಅಥವಾ ಅಂಚೆ ಕಚೇರಿಯಲ್ಲಿ ಆರಂಭಿಸಬಹುದು. ಪಿಪಿಎಫ್ ಖಾತೆದಾರ ಅಥವಾ ಅವಲಂಬಿತರು ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅಥವಾ ಗಂಭೀರ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು ಹಣದ ಅಗತ್ಯವಿದ್ದರೆ ಐದು ವರ್ಷಗಳು ಪೂರ್ಣಗೊಂಡ ನಂತರ ಹಣ ಹಿಂಪಡೆದುಕೊಂಡು ಖಾತೆ ಮುಚ್ಚಬಹುದು. ಇದಲ್ಲದೆ ಪಿಪಿಎಫ್ ಖಾತೆದಾರನ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ಅಗತ್ಯವಿದ್ದಲ್ಲಿ ಪಿಪಿಎಫ್ ಹಣವನ್ನು ಅವಧಿಗೆ ಮುನ್ನ ಅಂದರೆ ಐದು ವರ್ಷಗಳ ನಂತರ ಹಿಂಪಡೆಯಬಹುದು. ಆದರೆ, ಇಂತಹ ಸಂದರ್ಭದಲ್ಲಿ ಹೂಡಿಕೆ ಹಣ ಹಿಂಪಡೆದರೆ ಠೇವಣಿ ಹಣಕ್ಕೆ ಪಾವತಿಸಬೇಕಾದ ಒಟ್ಟು ಬಡ್ಡಿಯಲ್ಲಿ ಶೇ. 1ರಷ್ಟನ್ನು ಕಡಿತಗೊಳಿಸಲಾಗುತ್ತದೆ. ಉದಾಹರಣೆಗೆ ಪಿಪಿಎಫ್​ನ ಖಾತೆದಾರನಿಗೆ ಶೇ. 7.1ರ ಬಡ್ಡಿ ದರ ಸಿಗುತ್ತಿದ್ದು, ಅವಧಿಗೆ ಮುನ್ನ ಹಿಂಪಡೆದರೆ ಶೇ. 6.1ರ ಬಡ್ಡಿ ದರ ಸಿಗಲಿದೆ. ಇದಲ್ಲದೆ ಖಾತೆ ಆರಂಭಿಸಿದ ಐದು ವರ್ಷಗಳ ನಂತರ ವರ್ಷಕ್ಕೆ ಒಮ್ಮೆ ಪಿಪಿಎಫ್ ಹಣವನ್ನು ಹಿಂತೆಗೆದುಕೊಳ್ಳಬಹುದು. ಆದರೆ, ಗರಿಷ್ಠ ನಾಲ್ಕನೇ ವರ್ಷದ ಕೊನೆಯಲ್ಲಿರುವ ಬಾಕಿ ಮೊತ್ತದ ಶೇ. 50ರಷ್ಟು ಹಣವನ್ನು ಮಾತ್ರ ಹಿಂಪಡೆಯಬಹುದು. ಪಿಪಿಎಫ್​ನಿಂದ ಹಿಂಪಡೆಯುವ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
‘ಇಂಡಿಯನ್ ಮನಿ ಡಾಟ್ ಕಾಂ’ನ ಸಿಇಒ ಸಿ.ಎಸ್. ಸುಧೀರ್ ಸಾರಥ್ಯದಲ್ಲಿ ಫೈನಾನ್ಶಿಯಲ್ ಫ್ರೀಡಂ ಆಪ್ ಆರಂಭಿಸಲಾಗಿದೆ. ಹಣಕಾಸು ನಿರ್ವಹಣೆ, ಬಿಜಿನೆಸ್ ಆರಂಭಿಸುವುದು, ಕೃಷಿಯಲ್ಲಿ ಯಶಸ್ವಿಯಾಗುವುದು, ಉಪಕಸುಬುಗಳ ಮೂಲಕ ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವುದು, ಒಂದು ಎಕರೆ ಜಮೀನಿನಲ್ಲಿ ಒಂದು ಲಕ್ಷ ಗಳಿಸುವುದು, ವೃತ್ತಿಜೀವನದಲ್ಲಿ ಯಶಸ್ವಿಯಾಗುವುದು ಸೇರಿದಂತೆ ಹತ್ತು ಹಲವು ಕೋರ್ಸ್​ಗಳು ಈ ಆಪ್​ನಲ್ಲಿವೆ. ಕೂಡಲೇ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್​ನಿಂದ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ.
ಅಂಕಣ, ಮನಿ ಮಾತು; ಪಿಎಂಎವೈ ಸಬ್ಸಿಡಿ, ಗೊಂದಲ ಬೇಡ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + sixteen =
Remember me
