ಕೊಳ್ಳೇಗಾಲ(ಚಾಮರಾಜನಗರ):ಮನೆಯೊಳಗೆ ಗೋಡೆ ಮೇಲೆ ನೇತು ಹಾಕಿದ್ದ ಪ್ಯಾಂಟ್ ಒಂದನ್ನು ಕಿಟಕಿ ಮೂಲಕವೇ ಖತರ್ನಾಕ್​ ಕಳ್ಳರು ದೋಚಿದ್ದು, ಪ್ಯಾಂಟಿನ ಮಾಲೀಕ 1 ಲಕ್ಷದ 40 ಸಾವಿರ ರೂ. ಕಳೆದುಕೊಂಡಿದ್ದಾರೆ.
ಅರೆ, ಆ ಒಂದು ಪ್ಯಾಂಟು ಕಳ್ಳತನ ಆಗಿದ್ದಕ್ಕೆ 1.4 ಲಕ್ಷ ರೂ. ನಷ್ಟವಾಯ್ತೆ? ಕಾಸ್ಟ್ಲೀ ಪ್ಯಾಂಟೇ ಎಂದೆಲ್ಲ ಅನ್ನಿಸೋದು ಸಹಜ. ಆದರೆ, ಪ್ಯಾಂಟ್​ ಮಾಲೀಕ ಕಳೆದುಕೊಂಡದ್ದು ಪ್ಯಾಂಟಿನ ಜೇಬಿನಲ್ಲಿಟ್ಟ ಹಣವನ್ನ! ಹೌದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನೂರ್​ ಮೊಹಲ್ಲಾದ 6ನೇ ಕ್ರಾಸ್​ ಮನೆಯೊಂದರಲ್ಲಿ ದುಷ್ಕರ್ಮಿಗಳು ಕಿಟಕಿ ಮೂಲಕ ಲಕ್ಷಾಂತರ ರೂ. ಹಣ ಇಟ್ಟಿದ್ದ ಪ್ಯಾಂಟ್​ ಅನ್ನೇ ಎಗರಿಸಿದ್ದಾರೆ.
ಇದನ್ನೂ ಓದಿರಿತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!
ಸೆಕೆಂಡ್​ ಹ್ಯಾಂಡ್​ ದ್ವಿಚಕ್ರ ವಾಹಗಳ ಡೀಲರ್​ ಆಗಿರುವ ಇಲ್ಲಿನ ನಿವಾಸಿ ಅಪ್ಸರ್​ಪಾಷ, ಬುಧವಾರ ರಾತ್ರಿ 1.4 ಲಕ್ಷ ರೂ. ನಗದನ್ನು ತನ್ನ ಪ್ಯಾಂಟ್​ ಜೇಬಿನಲ್ಲಿಟ್ಟು, ಅದನ್ನು ಮನೆಗೋಡೆಯ ಹ್ಯಾಂಗರ್​ನಲ್ಲಿ ನೇತುಹಾಕಿ ಮಲಗಿದ್ದರು. ಗುರುವಾರ ಮುಂಜಾನೆ ದುಷ್ಕರ್ಮಿಗಳು ಕಿಟಕಿ ಮೂಲಕ ಪ್ಯಾಂಟ್​ ಸಮೇತ ಜೇಬಿನಲ್ಲಿದ್ದ ಹಣವನ್ನೂ ಕಳವು ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಹಣ ಕಳವು ಆಗಿರುವುದು ಗೊತ್ತಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದರು.
ಸ್ಥಳಕ್ಕೆ ಡಿವೈಎಸ್ಪಿ ಎನ್​.ನವೀನ್​ಕುಮಾರ್​, ಸರ್ಕಲ್​ ಇನ್ಸ್​ಪೆಕ್ಟರ್​ ಶೇಖರ್​, ಪಿಎಸ್​ಐಗಳಾದ ಅಶೋಕ್​, ವೀರಭದ್ರಪ್ಪ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಯೇ ಹೇರ್​ ಕಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
