ಗದಗ:ಆಭರಣ ಮಳಿಗೆಗೆ ಯುವಕ-ಯುವತಿ ಬಂದದ್ದು ಬಂಗಾರದ ಮೂಗುತಿ ಖರೀದಿಸಲು. ಆದರೆ, ಅಲ್ಲಿ ನಡೆದದ್ದೇ ಬೇರೆ. ಅಂಗಡಿ ಮಾಲೀಕನನ್ನೇ ಯಾಮಾರಿಸಿದ ಚಾಲಾಕಿ ಜೋಡಿ ಹಣ ಎಗರಿಸಿ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೋಣ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜುವೆಲ್ಲರಿ ಮಳಿಗೆಗೆ ವಿದೇಶಿಗರ ಸೋಗಿನಲ್ಲಿ ನಿನ್ನೆ(ಬುಧವಾರ)
ದ ಯುವಕ-ಯುವತಿ ಮಳಿಗೆ ಮಾಲೀಕನನ್ನೇ ಯಾಮಾರಿಸಿದ್ದಾರೆ. ಮೂಗುತಿ ಬೇಕೆಂದು ಬಂದ ಅವರು ನಾವು ವಿದೇಶಿಗರು. ನಮ್ಮ ಬಳಿ ವಿದೇಶಿ ಕರೆನ್ಸಿ ಇವೆ ಎಂದಿದ್ದಾರೆ. ಇದೇ ವೇಳೆ ಇಂಡಿಯನ್‌ ಕರೆನ್ಸಿ ಹೇಗೆ ಇರುತ್ತವೆ ಎಂದೂ ಕುತೂಹಲದಿಂದ ಪ್ರಶ್ನಿಸಿದ್ದಾರೆ. ಇವರ ಮಾತಿಗೆ ಮರುಳಾದ ಮಾಲೀಕ ಕೃಷ್ಣಾ, ತನ್ನ ಬಳಿಯಿದ್ದ 2,000 ಸಾವಿರ ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ತೋರಿಸಿದ್ದಾರೆ. ಸುಮಾರು ಹೊತ್ತು ಇಂಡಿಯನ್ ಕರೆನ್ಸಿ ನೋಡುವ ನೆಪದಲ್ಲಿ ಅಲ್ಲೇ ಇದ್ದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
ಇದನ್ನೂ ಓದಿರಿಕೋವಿಡ್ ಆಸ್ಪತ್ರೆಗೆ ಹೋದ ದಿನವೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್​
ಜುವೆಲ್ಲರಿ ಶಾಪ್​ಗೆ ಬಂದ ಯುವಕ-ಯುವತಿಗೆ ಮಾಲೀಕ ಕೃಷ್ಣ, ಇಂಡಿಯನ್​ ಕರೆನ್ಸಿ ತೋರಿಸುತ್ತ ತಮಗರಿವಿಲ್ಲದಂತೆ 18 ಸಾವಿರ ರೂ. ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗಿದ್ದೇನೆಂದು ಅವರಿಗೆ ಗೊತ್ತಾಗಿದ್ದೇ ಯುವಕ-ಯುವತಿ ಅಂಗಡಿಯಿಂದ ಹೊರ ಹೋದ ಬಳಿಕ. ಹಣವನ್ನು ಲೆಕ್ಕ ಮಾಡಿದಾಗ 18 ಸಾವಿರ ರೂ. ಕಡಿಮೆ ಬಂದಿದೆ. ರೋಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾಲಾಕಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
https://www.facebook.com/VVani4U/videos/295170721827175/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
