ಕುಣಿಗಲ್:ಏನೋ ಮಾಡಲು ಹೋಗಿ ಮತ್ತೇನೋ ಆಯ್ತು, ಅಂದುಕೊಂಡದ್ದೇ ಒಂದು ಆದದ್ದೇ ಬೇರೆ, ಕೆಲವೊಮ್ಮೆ ನಿರೀಕ್ಷೆಗೂ ಮೀರಿ ಲಕ್​ ಖುಲಾಯಿಸುತ್ತೆ… ಎಂಬ ಮಾತು ಅಕ್ಷರಶಃ ಈ ಘಟನೆ ಅನ್ವಯಿಸುತ್ತೆ.
ಹೌದು, ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ಸಂಭವಿಸಿದೆ. ಮುಂಗುಸಿ ಕಾಟ ತಾಳಲಾರದೆ ಅದನ್ನು ಹಿಡಿಯಲೆಂದು ಗ್ರಾಮಸ್ಥರೊಬ್ಬರು ಬೋನು ಇಟ್ಟಿದ್ದರು. ನಿರೀಕ್ಷೆಯಂತೆ ಅದರಲ್ಲಿ ಮುಂಗುಸಿ ಬೀಳಬೇಕಿತ್ತು. ಆದರೆ, ಸರೆಯಾಗಿದ್ದು ಮಾತ್ರ ಚಿರತೆ!ಇದನ್ನೂ ಓದಿರಿ2023ರಲ್ಲಿ ವಿಧಾನಸಭೆ ಎಲೆಕ್ಷನ್: ಮಂಡ್ಯದಲ್ಲಿ ಟಿಕೆಟ್​ಗಾಗಿ ಹಾಲಿ ಶಾಸಕ- ಮಾಜಿ ಸಂಸದರ ಫೈಟ್​
ಬಸವನಪುರ ಗ್ರಾಮದಲ್ಲಿ ಮುಂಗುಸಿಗಳ ಕಾಟ ಹೆಚ್ಚಾಗಿದೆ. ಎಷ್ಟೇ ಎಚ್ಚರ ವಹಿಸುತ್ತಿದ್ದರೂ ನೋಡನೋಡುತ್ತಿದ್ದಂತೆಯೇ ಕೋಳಿಗಳನ್ನು ಮುಂಗಿಸಿ ಹಿಡಿದುಕೊಂಡು ಮರೆಯಾಗುತ್ತಿತ್ತು. ಕೋಳಿಗಳನ್ನು ಉಳಿಯಬೇಕಿದ್ದರೆ ಮುಂಗಿಸಿಯನ್ನ ಸರೆ ಹಿಡಿದು ಬೇರೆಡೆಗೆ ಬಿಡುವ ಯೋಜನೆ ರೂಪಿಸಿದ ಗ್ರಾಮದ ಕುಮಾರ ಎಂಬಾತ, ಬೋನು ಇಟ್ಟಿದ್ದರು.
ಆದರೆ, ಸೋಮವಾರ ರಾತ್ರಿ ಮುಂಗುಸಿ ಬದಲು ಒಂದು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಸುಮಾರು 8 ಗಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಭಯಗೊಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆರ್​ಎಫ್ಒ ಮಂಜುನಾಥ್ ನೇತೃತ್ವದ ಸಿಬ್ಬಂದಿ ಚಿರತೆಯನ್ನ ಹಿಡಿದುಕೊಂಡು ಹೋದರು.
ಇನ್ನು ಇಪ್ಪಾಡಿ ಅರಣ್ಯ ವಲಯದ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಮೂರ್ನಾಲ್ಕು ತಿಂಗಳ ಹಿಂದಷ್ಟೇ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹೊತ್ತೊಯ್ದು ಕೊಂದುಹಾಕಿದ್ದ ಕಹಿಘಟನೆ ಇನ್ನೂ ಹಸಿಯಾಗೇ ಇದೆ. ಸದ್ಯ ಮುಂಗುಸಿ ಹಿಡಿಯುವ ನೆಪದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.
ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ವಿಧಾನಪರಿಷತ್​ಗೆ ಹೊಸ ಚೇರ್ಮನ್ ಬಸವರಾಜ ಹೊರಟ್ಟಿ! ಕಾಂಗ್ರೆಸ್​ ಫುಲ್​ ಸೈಲೆಂಟ್​

ಸಿಎಂ ಯಡಿಯೂರಪ್ಪರ ಮನೆಗೆ ಸಂತರ ದಂಡು! 40 ಸ್ವಾಮೀಜಿಗಳ ಬೇಡಿಕೆ ಏನು?

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
