ಆನೇಕಲ್:ದೇವಾಲಯದ ಬಾಗಿಲಿನಲ್ಲೇ ಮಂಗವೊಂದು ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ರಾಮನಾಯಕನಹಳ್ಳಿಯಲ್ಲಿ ನಡೆದಿದೆ.
ವೀರಾಂಜನೇಯ ಸ್ವಾಮಿ ದೇವಾಲಯದ ಮುಖ್ಯ ದ್ವಾರದ ಬಳಿಯೇ ಕೋತಿ ಪ್ರಾಣ ಬಿಟ್ಟಿದೆ. ಈ ಘಟನೆ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಕೊತ್ತೋಲು ಮುನಯ್ಯ ಎಂಬುವವರು ದಾನವಾಗಿ ನೀಡಿದ್ದ ಜಮೀನಿನಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವಿದೆ. ಕೋತಿ, ದಿನನಿತ್ಯ ದೇವಾಲಯದ ಬಳಿಯೇ ಓಡಾಡಿಕೊಂಡಿತ್ತು.
ಇದನ್ನೂ ಓದಿ:ತಾಯಿ ಜೊತೆಗಿದ್ದಾಗಲೇ ಮಗಳ ಅಪಹರಣ; ಸಂಜೆಯ ಸುಮಾರಿಗೆ ಮಹತ್ವದ ತಿರುವು ಪಡೆದ ಪ್ರಕರಣ!
ನಿನ್ನೆ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸಂಜೆ ದೇವಾಲಯದ ಬಾಗಿಲು ಹಾಕಿಕೊಂಡು ಅರ್ಚಕರು ಹೋಗಿದ್ದರು. ಇದೀಗ ಕೋತಿ ದೇವಾಲಯದ ಮುಖ್ಯದ್ವಾರದ ಬಳಿಯೇ ತಲೆ ಇಟ್ಟು ಕೊನೆಯುಸಿರೆಳೆದಿದೆ.
ಈ ವಿಸ್ಮಯಕಾರಿ ಘಟನೆ ತಿಳಿದ ಬಳಿಕ ಗ್ರಾಮಸ್ಥರು ಹಾಗೂ ಸ್ಥಳೀಯ ಜನರು ದೇವಾಲಯದ ಬಳಿ ಜಮಾಯಿಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಮುತ್ತಿನ ರೋಗದ ಬಗ್ಗೆ ನಿಮಗೆಷ್ಟು ಗೊತ್ತು? ಲಕ್ಷಣಗಳೇನು? ಕಾಯಿಲೆಗೆ ಕಾರಣಗಳೇನು? ಇಲ್ಲಿದೆ ಪೂರ್ಣ ಮಾಹಿತಿ…

ಅನಾರೋಗ್ಯಕ್ಕೀಡಾದ ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಸ್ವತಃ ಬಿಎಂಟಿಸಿ ಬಸ್​ ಚಲಾಯಿಸಿದ ಎಸಿಪಿ ರಾಮಚಂದ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
