ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಪ್ರವಾಹದಿಂದ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ಮಧ್ಯದ ಮರದ ಮೇಲೆ ಸಿಲುಕಿದ್ದ ಸುಮಾರು 70 ಮಂಗಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸೇರಿ ರಕ್ಷಣೆ ಮಾಡಿದ್ದರು.ಕಳೆದ ಮೂರು ದಿನಗಳ ಹಿಂದೆಯೇ ಈ ಮುಷ್ಯಗಳು ನದಿ ಮಧ್ಯ ಸಿಲುಕಿವೆ. ನದಿ ಮಧ್ಯೆ ಇರುವ ಮರಗಳ ಮೇಲೆ ಕುಳಿತಿದ್ದ ಮುಷ್ಯಗಳು ಅಲ್ಲಿಂದ ಬರಲಾಗದೆ ಸಂಕಷ್ಟಕ್ಕೀಡಾಗಿದ್ದವು.
ಅದನ್ನು ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ಸೇರಿ ಆಪರೇಷನ್​ ಮುಷ್ಯ ಕಾರ್ಯಾಚರಣೆಯಡಿ ಅವುಗಳನ್ನು ರಕ್ಷಿಸಿದ್ದಾರೆ. ಹಗ್ಗ ಹಾಗೂ ಮರದ ತುಂಡಿನ ತೂಗು ಸೇತುವೆಯನ್ನು ಮಂಗಗಳು ಕುಳಿತಿದ್ದ ಮರದಿಂದ ಈಚೆ ದಡದಲ್ಲಿದ್ದ ಮರಕ್ಕೆ ಕಟ್ಟಿ, ಅವುಗಳ ಮೂಲಕ ಮುಷ್ಯಗಳು ಪಾರಾಗುವಂತೆ ಮಾಡಿದ್ದಾರೆ.ಮೂರು ದಿನಗಳಿಂದಲೂ ಈ ಕಾರ್ಯ ನಡೆಯುತ್ತಿದ್ದು, ಇಂದು ಎಲ್ಲ ಮಂಗಗಳೂ ಯಶಸ್ವಿಯಾಗಿ ದಡ ಸೇರಿವೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೋರ್ವರು ತಿಳಿಸಿದ್ದಾರೆ.ಇದನ್ನೂ ಓದಿ:ಚಿತ್ರದುರ್ಗದ ಬಳಿಕ, ಶಿವಮೊಗ್ಗ ಜಿಲ್ಲೆಯ ನಾಲ್ಕು ಶಾಲೆ ದತ್ತು ಪಡೆದ ಕಿಚ್ಚ ಸುದೀಪ್​!
ಅಷ್ಟೇ ಅಲ್ಲ, ರಕ್ಷಣಾ ಸಿಬ್ಬಂದಿ ಪ್ರವಾಹದ ಮಧ್ಯ ಈಜಿಕೊಂಡು ಹೋಗಿ, ಮುಷ್ಯಗಳು ಇದ್ದ ಮರಕ್ಕೆ ಹಗ್ಗವನ್ನು ಕಟ್ಟಿದ್ದು ಶ್ಲಾಘನೀಯವಾಗಿದೆ.
ಹಾಗೇ, ಮುಷ್ಯಗಳಿಗೂ ಅದನ್ನು ಅರ್ಥ ಮಾಡಿಸಿದ್ದೂ ದೊಡ್ಡ ಸಾಧನೆಯೇ ಸರಿ ಎಂದು ಸ್ಥಳೀಯರು ಹೊಗಳುತ್ತಿದ್ದಾರೆ.ಹಗ್ಗ ಹಾಗೂ ಮರದ ತುಂಡಿನಿಂದ ಕಟ್ಟಿದ ಸೇತುವೆ ಮೇಲೆ ಮಂಗಗಳು ಒಂದೊಂದಾಗಿ ವಾಪಸ್ ದಡಕ್ಕೆ ಬರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕಂದನ ನೋಡುವ ಮೊದಲೇ ಪೈಲಟ್‌ ದುರ್ಮರಣ: ಸಾವಿನ ಅರಿವಿಲ್ಲದ ತುಂಬುಗರ್ಭಿಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
