ಬೆಂಗಳೂರು:ನೈಋತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಆಗಮಿಸಿ ಒಂದು ತಿಂಗಳು ಕಳೆಯುತ್ತ ಬಂದಿದ್ದು, ರಾಜ್ಯಾದ್ಯಂತ ವಾಡಿಕೆಯಂತೆ 190 ಮಿಮೀ ಮಳೆಯಾಗಬೇಕಿತ್ತು. ಆದರೆ, 145 ಮಿಮೀ ಮಳೆಯಾಗಿದ್ದು, ಶೇ.24 ಮಳೆ ಕುಂಠಿತವಾಗಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 64 ಮಿಮೀ ಮಳೆ ಆಗಬೇಕಿತ್ತು. 118 ಮಿಮೀ ಮಳೆಯಾಗಿದ್ದು, ಶೇ. 84 ಹೆಚ್ಚು ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ 100 ಮಿಮೀ ಮಳೆ ಬದಲಾಗಿ 86 ಮಿಮೀ ಮಳೆಯಾಗಿದ್ದು, ಶೇ.14 ಮಳೆ ಕುಂಠಿತವಾಗಿದೆ. ಮಲೆನಾಡು ಭಾಗಗಳಲ್ಲಿ 343 ಮಿಮೀ ಮಳೆಯಾಗಬೇಕಿತ್ತು. 175 ಮಿಮೀ ಮಳೆಯಾಗಿದ್ದು, ಶೇ.49 ಮಳೆ ಮಳೆ ಕ್ಷೀಣಿಸಿದೆ. ಕರಾವಳಿ ಜಿಲ್ಲೆಗಳಲ್ಲಿ 790 ಮಿಮೀ ಮಳೆ ಬದಲಾಗಿ 464 ಮಿಮೀ ಮಳೆಯಾಗಿದ್ದು, ಶೇ.41 ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ.
ಕರಾವಳಿಯಲ್ಲಿ ಮುಂದುವರಿಕೆ:ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಕರಾವಳಿಯಲ್ಲಿ ಮುಂದುವರಿಯಲಿದೆ. ಬುಧವಾರ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 70 ಮಿಮೀ ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 30ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ.
ಅಲ್ಲದೆ, ಜು 1ರಿಂದ ಜು 3ರವರೆಗೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ಈ ಕಾರು ಕಾಣಿಸಿದ್ರೆ ಕೂಡಲೇ ತಿಳಿಸಿ; ವಂಚಕರ ಪತ್ತೆಗಿಳಿದ ಪೊಲೀಸರು..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + eleven =
Remember me
