ಬೆಂಗಳೂರು:ಕರೊನಾ ಆತಂಕದ ನಡುವೆ ಸೋಮವಾರದಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಸುಗ್ರೀವಾಜ್ಞೆ ತಂದಂತಹ ಮಹತ್ವದ ತೀರ್ವನಗಳಿಗೆ ಹೇಗಾದರೂ ಶಾಸನ ಸಭೆಯ ಒಪ್ಪಿಗೆ ಪಡೆಯುವ ಧಾವಂತದಲ್ಲಿ ಸರ್ಕಾರವಿದ್ದರೆ, ವ್ಯವಸ್ಥಿತವಾಗಿ ಸರ್ಕಾರವನ್ನು ಹಣಿಯಲು ಪ್ರತಿಪಕ್ಷ ಕಾಂಗ್ರೆಸ್ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಆದರೆ, ಕರೊನಾ ಕಲಾಪವನ್ನು ಆಪೋಶನ ತೆಗೆದುಕೊಳ್ಳುವ ಆತಂಕವೂ ಕಾಡುತ್ತಿದೆ.
ಅಧಿವೇಶನದಲ್ಲಿ ಪಾಲ್ಗೊಳ್ಳುವ ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದವರಿಗೆ ಕರೊನಾ ಟೆಸ್ಟ್ ಕಡ್ಡಾಯ ಮಾಡಿದ್ದು, ಟೆಸ್ಟ್ ಮಾಡಿಸಿಕೊಂಡ 1800 ಜನರಲ್ಲಿ 70 ಜನರಿಗೆ ಸೋಂಕು ತಗುಲಿದೆ. ಅಲ್ಲದೆ ರಾಜ್ಯದಲ್ಲಿ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಲೇ ಇರುವ ಕಾರಣ ಮೂರು ದಿನದಲ್ಲೇ ಕಲಾಪ ಮುಗಿಸಬೇಕೆಂಬ ಚಿಂತನೆಯೂ ನಡೆದಿದ್ದು, ಸೋಮವಾರ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ.
ಕರೊನಾ ನೆಪದಲ್ಲಿ ಮೂರು ದಿನದಲ್ಲಿ ಕಲಾಪವನ್ನು ಮುಗಿಸಲು ನಾವು ಸಿದ್ಧವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ. ಕಲಾಪದ ಆರಂಭದ ದಿನಗಳಲ್ಲೇ ವಿಧೇಯಕಗಳನ್ನು ಮಂಡಿಸಲು ಹೊರಟಿರುವ ಸರ್ಕಾರ, ಪ್ರಮುಖ ವಿಧೇಯಕದ ಬಗ್ಗೆ ಗಮನಹರಿಸಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಹೇಗಾದರೂ ಒಪ್ಪಿಗೆ ಪಡೆದುಕೊಳ್ಳಬೇಕೆಂದು ಆ ಬಗ್ಗೆಯೇ ಗಮನ ಹರಿಸಿದೆ. ಕಾಂಗ್ರೆಸ್, ಜೆಡಿಎಸ್ ವಿಧೇಯಕಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.
ಸಿಎಂ ಕರೆ ಮಾಡಿದ್ದು ತಪ್ಪು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಹಾಗೂ ಪ್ರತಿಪಕ್ಷ ನಾಯಕರಿಗೆ ದೂರವಾಣಿ ಕರೆ ಮಾಡಿದ್ದರು. ಕರೊನಾ ಆರ್ಭಟ ಹಿನ್ನೆಲೆ ಸದನದವನ್ನು 3 ದಿನಕ್ಕೆ ಮೊಟಕು ಮಾಡುತ್ತಿದ್ದೇವೆ, ಸಹಕಾರ ಕೊಡಬೇಕು ಅಂತ ಕೇಳಿದರು. ಆದರೆ, ನಾವು ಕಲಾಪವನ್ನು ಮುಂಚಿತವಾಗಿ ಮಗಿಸಲು ಬಿಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಇದನ್ನೂ ಓದಿ:21 ರಾಜ್ಯಗಳ ಆಯ್ಕೆ 1, ಯಾರಿಗೂ ಬೇಕಿಲ್ವಾ ಆಯ್ಕೆ 2?
ಇಂದಿನ ಕಾರ್ಯಕಲಾಪ:ಸಿಎಜಿ ವರದಿ ಮಂಡನೆ, ಬಿಬಿಎಂಪಿ ವಿಧೇಯಕ ಕುರಿತು ಜಂಟಿ ಪರಿಶೀಲನಾ ಸಮಿತಿ ವರದಿ ಮಂಡನೆ, 10 ಸದನ ಸಮಿತಿಗಳಿಗೆ ಸದಸ್ಯರನ್ನು ನೇಮಿಸಲು ಪ್ರಸ್ತಾವ, 9 ವಿಧೇಯಕಗಳ ಮಂಡನೆ, 4 ವಿಧೇಯಕಗಳ ಪರ್ಯಾಲೋಚನೆ ಪ್ರಕ್ರಿಯೆ ನಡೆಸಬೇಕೆಂದು ವೇಳಾಪಟ್ಟಿ ಸಿದ್ಧವಾಗಿದೆ.
ದೂರ ಉಳಿವವರು ಯಾರು?:ಡಿಸಿಎಂ ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆಹಾರ ಸಚಿವ ಕೆ.ಗೋಪಾಲಯ್ಯ ಅವರಿಗೆ ಕರೊನಾ ಸೋಂಕು ತಗುಲಿರುವ ಕಾರಣ ಕಲಾಪದಿಂದ ದೂರ ಉಳಿಯಲಿದ್ದಾರೆ. ಇವರನ್ನು ಹೊರತುಪಡಿಸಿ ಮೂವರು ಶಾಸಕರೂ ಕ್ವಾರಂಟೈನ್​ನಲ್ಲಿದ್ದಾರೆ.
https://www.vijayavani.net/covid-19-tension-to-sanjana/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
