ಕೆ.ಎನ್​.ರಾಘವೇಂದ್ರಮಂಡ್ಯ:ಇನ್ಮುಂದೆ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಅಥವಾ ಹುಂಡಿ ಭರ್ತಿಯಾದ ಕೂಡಲೇ ತೆರೆದು ಕಾಣಿಕೆ ಹಣ ಎಣಿಸುವ ಪ್ರಕ್ರಿಯೆ ನಡೆಯಲಿದೆ. ಮಂಡ್ಯ ಹೊರವಲಯದ ಅರ್ಕೆಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದಿದ್ದ ಮೂವರ ಬರ್ಬರ ಕೊಲೆ ಪ್ರಕರಣದಿಂದಾಗಿ ಎಚ್ಚೆತ್ತುಕೊಂಡಿರುವ ಮುಜರಾಯಿ ಇಲಾಖೆ, ಎಲ್ಲ ದೇಗುಲಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ. ಈ ಸಂಬಂಧ ಶನಿವಾರ ಮಂಡ್ಯದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೌಖಿಕವಾಗಿ ಆದೇಶ ನೀಡಿದ್ದಾರೆ.
ತಿಂಗಳಿಗೆ ಒಮ್ಮೆ ಅಥವಾ ಹುಂಡಿ ತುಂಬಿದ ನಂತರ ಹಣ ತೆಗೆಯುವಂತೆ ಸೂಚಿಸಲಾಗಿದೆ. ಎ ದರ್ಜೆ ದೇವಸ್ಥಾನದಲ್ಲಿ ಉಪವಿಭಾಗಾಧಿಕಾರಿ ಸಮ್ಮುಖ, ಬಿ ದರ್ಜೆ ದೇವಸ್ಥಾನದಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ಹಣದ ಲೆಕ್ಕಾಚಾರ ಮಾಡುವಂತೆ ನಿರ್ದೇಶನ ನೀಡಲಾಗಿದೆ.| ಕೋಟ ಶ್ರೀನಿವಾಸ ಪೂಜಾರಿಸಚಿವ
ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸುಮಾರು 34 ಸಾವಿರ ದೇವಸ್ಥಾನ ಸೇರಿವೆ. ಮಂಡ್ಯ ಜಿಲ್ಲೆಯಲ್ಲಿ ಇಲಾಖೆಗೆ ಸೇರಿದ 1,860 ದೇವಸ್ಥಾನಗಳಿವೆ. ಈ ಪೈಕಿ 225 ಎ ದರ್ಜೆಗೆ ಸೇರಿದ್ದು, ಇವುಗಳಲ್ಲಿ ಹೆಚ್ಚಿನ ಆದಾಯವಿದೆ. ಅಂತೆಯೇ ಮಂಡ್ಯದ ಅರ್ಕೆಶ್ವರಸ್ವಾಮಿ ದೇವಸ್ಥಾನದಿಂದ ವಾರ್ಷಿಕ 25 ಲಕ್ಷ ರೂ. ವರಮಾನವಿದ್ದು, ಬಿ ಗ್ರೇಡ್​ನಲ್ಲಿದೆ. ಇದನ್ನು ಎ ಗ್ರೇಡ್​ಗೆ ಸೇರಿಸಲು ಪ್ರಸ್ತಾವನೆ ಹೋಗಿದೆ.
ಇದನ್ನೂ ಓದಿ:ಮಹಿಳೆಯರ ರಕ್ಷಣೆಗೆ ಕೋರ್ಟ್‌ಗಳು ಕೃಷ್ಣನಂತಾಗಬೇಕು ಎಂದ ಹೈಕೋರ್ಟ್
ಮೂವರ ಹತ್ಯೆ ದುರ್ಘಟನೆಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯೇ ಕಾರಣ ಎನ್ನುವುದು ಸ್ಪಷ್ಟವಾಗುತ್ತಿದೆ. ಸುಮಾರು ಎಂಟು ತಿಂಗಳಿನಿಂದ ಹುಂಡಿ ತೆರೆಯದ ಕಾರಣ ಹಣದಿಂದ ಭರ್ತಿಯಾಗಿತ್ತು. ಈ ವಿಚಾರ ಜನರಿಂದ ಜನರಿಗೆ ಹರಡಿತ್ತು ಎನ್ನಲಾಗುತ್ತಿದೆ. ಇದನ್ನರಿತು ದುಷ್ಟರ ತಂಡ ಮೂವರನ್ನು ಕೊಂದು ವ್ಯವಸ್ಥಿತವಾಗಿ ದರೋಡೆ ಮಾಡಿದೆ. ಇದಲ್ಲದೆ, ಬಹುತೇಕ ದೇವಸ್ಥಾನದಲ್ಲಿ ಸೂಕ್ತ ಭದ್ರತಾ ಸೌಲಭ್ಯವಿಲ್ಲ.
ಇದನ್ನೂ ಓದಿ:50 ಕೋಟಿ ರೂಪಾಯಿ ಪಿಡಿಎಸ್ ಹಗರಣ
ವಾರ್ಷಿಕ ಲಕ್ಷಾಂತರ ರೂ. ಆದಾಯ ಹೊಂದಿರುವ ಹಾಗೂ ಪುರಾಣ ಪ್ರಸಿದಟಛಿ ಅರ್ಕೆಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ಭದ್ರತೆಗೂ ಸರ್ಕಾರ ಆದ್ಯತೆ ನೀಡಬೇಕಿದೆ. ಸಿಸಿ ಕ್ಯಾಮರಾ, ಗನ್​ವ್ಯಾನ್, ಸೈರನ್​ಗಳನ್ನು ಅಳವಡಿಸಲು ಗಮನಹರಿಸಬೇಕಿದೆ. ಕಡಿಮೆ ವೇತನಕ್ಕೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಅರ್ಚಕರಿಗೂ ಹೆಚ್ಚಿನ ವೇತನದ ಜತೆಗೆ ಒಂದಿಷ್ಟು ಸೌಲಭ್ಯ ನೀಡಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅರ್ಚಕರೊಬ್ಬರು.
ಇದನ್ನೂ ಓದಿ:ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧ ಮತ್ತು ಇಬ್ಬರು ಬಾಲಕಿಯರು ಪೊಲೀಸ್ ವಶಕ್ಕೆ
ಇಒ ಅಮಾನತುಮೃತರ ಕುಟುಂಬಕ್ಕೆ ಪರಿಹಾರ ವಿತರಿಸಲು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ದೇಗುಲದ ಇಒ ಅರವಿಂದ ಬಾಬು ವಿರುದ್ಧ ಸ್ಥಳೀಯರು ಹಾಗೂ ಅರ್ಚಕರು ದೂರಿನ ಸುರಿಮಳೆಗರೆದರು. ಇಒ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಹುಂಡಿ ತೆರೆಯಲು ತಡ ಮಾಡಿದ್ದು, ಸಿಸಿ ಕ್ಯಾಮರಾ ದುರಸ್ತಿ ಮಾಡಿಸಿಲ್ಲ, ಸಿಬ್ಬಂದಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಸಚಿವರು ಬಂದರೂ ಅಧಿಕಾರಿ ಸ್ಥಳಕ್ಕೆ ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಚಿವರು ಸಮಗ್ರ ತನಿಖೆಗೆ ಆದೇಶಿಸಿದರು. ಅರವಿಂದ ಬಾಬು ಅವರನ್ನು ಅಮಾನತುಗೊಳಿಸಲಾಗುವುದು ಎಂದು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಹೇಳಿದರು.
ವಿದೇಶಕ್ಕೆ ತೆರಳಿದ್ರು ಸೋನಿಯಾ, ರಾಹುಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
