|ಮೃತ್ಯುಂಜಯ ಕಪಗಲ್ಬೆಂಗಳೂರು
ಅತಿವೃಷ್ಟಿ, ನೆರೆ ಹಾವಳಿ, ಭೂಕುಸಿತ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ರಾಜ್ಯ ಮತ್ತೆ ಬಸವಳಿದು, ಕೇಂದ್ರ ಸರ್ಕಾರದ ಸಹಾಯ ಯಾಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನದ ವೇದಿಕೆ ಮೂಲಕ ರಾಜ್ಯದ ದೈನಂದಿನ ಪರಿಸ್ಥಿತಿ ಕೇಂದ್ರ ಅವಲೋಕಿಸುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಟಲ್​ಗೆ ಪ್ರತಿದಿನದ ಮಾಹಿತಿ ಅಪ್​ಡೇಟ್ ಮಾಡಲಾಗುತ್ತದೆ. ಆದಾಗ್ಯೂ ವಸ್ತುಸ್ಥಿತಿ ಸಾಕ್ಷಾತ್ ಸಮೀಕ್ಷೆಗಾಗಿ ಕೇಂದ್ರ ಅಧ್ಯಯನ ತಂಡ ಇಷ್ಟರಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದು, ವಿಸõತ ನಷ್ಟದ ವರದಿಯೊಂದಿಗೆ ನೆರವಿನ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಿಂದಿನ ಮೂರು ವರ್ಷಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದ ಅಪಾರ ನಷ್ಟ ಅನುಭವಿಸಿದೆ. ಸಂತಸ್ತರಿಗೆ ಬದುಕು ಕಟ್ಟಿಕೊಡಲು ಅಗಾಧ ಪ್ರಮಾಣದ ನೆರವಿಗೆ ಮೊರೆಯಿಟ್ಟಿದ್ದರೆ, ಕೇಂದ್ರ ಸರ್ಕಾರ ನೀಡಿದ ಸಹಾಯ ಮಾತ್ರ ಅತ್ಯಲ್ಪ.
ಕೇಳಿದ್ದು…ಕೊಟ್ಟದ್ದು:ಅಧಿಕೃತ ಅಂಕಿ-ಅಂಶಗಳ ಪ್ರಕಾರ 2019 ರಿಂದ 2022ರವರೆಗೆ ಒಟ್ಟು 78,395 ಕೋಟಿ ರೂ.ಗಳ ನಷ್ಟ ವರದಿ ಸಲ್ಲಿಸಿ, ಉದಾರತೆ ತೋರಬೇಕು ಎಂದು ಮನವಿ ಮಾಡಿಕೊಂಡಿದೆ. ಎನ್​ಡಿಆರ್​ಎಫ್/ ಎಸ್​ಡಿಆರ್​ಎಫ್ ಮಾರ್ಗಸೂಚಿ, ನಿಯಮಾವಳಿಯಂತೆ 75:25 ಅನುಪಾತದ ಅನ್ವಯ ರಾಜ್ಯಕ್ಕೆ ಕೇಂದ್ರದಿಂದ ಹರಿದು ಬಂದ ಮೂರು ವರ್ಷಗಳ ಒಟ್ಟು ಮೊತ್ತ 10,826.48 ಕೋಟಿ ರೂ.ಗಳು.ಕೇಂದ್ರ-ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದೆ. ಬಿಜೆಪಿ ನಾಯಕರು ಹೇಳಿಕೊಂಡಂತೆ ಡಬಲ್ ಇಂಜಿನ್ ಸರ್ಕಾರವಿದ್ದರೂ ಹೆಚ್ಚಿನ ನೆರವು ನಿರೀಕ್ಷೆ ಹುಸಿಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಗುಜರಾತ್, ಮಹಾರಾಷ್ಟ್ರಕ್ಕೆ ನೀಡಿದ ಮೊತ್ತಕ್ಕೆ ತುಲನೆ ಮಾಡಿದರೆ ರಾಜ್ಯಕ್ಕೆ ಕಡಿಮೆ ಪಾಲು ನೀಡಿದೆ ಎಂಬ ಟೀಕೆಗೂ ಗುರಿಯಾಗಿದೆ. ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಮನೆ ಪೂರ್ಣ ಹಾನಿಗೆ ಪರಿಹಾರ ಮೊತ್ತ ನಾಲ್ಕು ಹೆಚ್ಚಿಸಿ, ಐದು ಲಕ್ಷ ರೂ.ಗಳಿಗೆ ಏರಿಸಲಾಯಿತು. ತೀವ್ರ ಹಾನಿಗೆ ಮೂರು ಲಕ್ಷ ರೂ. ಭಾಗಶಃ ಹಾನಿಗೆ 50,000 ರೂ. ನಿಗದಿಪಡಿಸಿದೆ. ಕೇಂದ್ರದಿಂದ ಹೆಚ್ಚಿನ ನೆರವು ಸಿಗದಿದ್ದರೂ ರಾಜ್ಯದ ಬೊಕ್ಕಸದಿಂದ ಈ ಮೊತ್ತ ಭರಿಸಲಾಯಿತು. ಕೇಂದ್ರದ ಮಾರ್ಗಸೂಚಿಯನ್ನು ಮೀರಿ ಮನೆ ಪರಿಹಾರ ನಿಗದಿಪಡಿಸಿದ್ದರ ಬಗ್ಗೆ ಆಡಿಟ್ ವರದಿಯು ಆಕ್ಷೇಪಿಸಿ, ಆರ್ಥಿಕ ಶಿಸ್ತು ತಪ್ಪಿ ಹೋಗುತ್ತದೆ ಎಂಬ ಕಳವಳವನ್ನು ಉಲ್ಲೇಖಿಸಿತ್ತು.
ಬೆಳೆ ಪರಿಹಾರ ದುಪ್ಪಟ್ಟು:ಬಿಎಸ್​ವೈ ಆಡಳಿತಾವಧಿಯ ಮನೆ ಪರಿಹಾರ ಮೊತ್ತವನ್ನು ಬೊಮ್ಮಾಯಿ ಸರ್ಕಾರ ಯಥಾರೀತಿ ಮುಂದುವರಿಸಿ, ಬೆಳೆ ಪರಿಹಾರಧನ ದುಪ್ಪಟ್ಟಾಗಿಸಿದೆ. ಪ್ರತಿ ಹೆಕ್ಟೇರ್​ಗೆ ಮಳೆಯಾಶ್ರಿತ 13,800 ರೂ., ನೀರಾವರಿ 25,500 ರೂ. ಹಾಗೂ ತೋಟಗಾರಿಕೆ 28,000 ರೂ. ನಿಗದಿಪಡಿಸಿ, ಪ್ರಸಕ್ತ ವರ್ಷಕ್ಕೂ ಇದೇ ಮೊತ್ತ ಅನ್ವಯಿಸಿದೆ. ಸಂತ್ರಸ್ತರು ನೆಮ್ಮದಿ ಬದುಕು ಕಟ್ಟಿಕೊಳ್ಳಲು ಆಸರೆ, ಬಾಧಿತ ರೈತರಿಗೆ ಸಕಾಲಕ್ಕೆ ಪರಿಹಾರ ಮೊತ್ತ ಪಾವತಿಸಿ ಆತ್ಮಸ್ಥೈರ್ಯ ತುಂಬಿದ ಸರ್ಕಾರಕ್ಕೆ ಮೂಲ ಸವಲತ್ತು ಸುಧಾರಣೆ ಸವಾಲಾಗಿದೆ. ತಾತ್ಕಾಲಿಕ ದುರಸ್ತಿ ಕೈಗೊಂಡು ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿದ್ದು, ಶಾಶ್ವತ ಪರಿಹಾರ ಕಾಮಗಾರಿಗಳ ಬೇಡಿಕೆ ಮೊತ್ತ ಏರುತ್ತಲೇ ಸಾಗಿರುವುದು ಸಮಸ್ಯೆಯಾಗಿದೆ.
ಮರುಕಳಿಸಿದ ನಷ್ಟದ ಹೊರೆ:ಹಿಂದಿನ ಮೂರು ವರ್ಷಗಳ ಕಷ್ಟ-ಕೋಟಲೆಗಳಿಂದ ಹೊರ ಬರುವ ಮುನ್ನ ಅತಿವೃಷ್ಟಿ, ಪ್ರವಾಹ ಅಪ್ಪಳಿಸಿದ್ದು, ಆಗಸ್ಟ್ ಮೊದಲ ವಾರದ ಪ್ರಕಾರ 14 ಜಿಲ್ಲೆಗಳು ಬಾಧಿತವಾಗಿವೆ. ಕೃಷ್ಣಾ ಮತ್ತದರ ಉಪ ನದಿಗಳು ಉಕ್ಕಿ ಹರಿಯುತ್ತಿದ್ದು, ನಷ್ಟದ ಪಟ್ಟಿಗೆ ಇನ್ನಷ್ಟು ಜಿಲ್ಲೆಗಳು ಸೇರುವ ಸಾಧ್ಯತೆಗಳಿವೆ. ಆ.7ರವರೆಗಿನ ಅಂಕಿ-ಅಂಶಗಳ ಪ್ರಕಾರ 73 ಜನರು ಮೃತಪಟ್ಟು, 509 ಜಾನುವಾರು ಬಲಿಯಾಗಿವೆ. 1.38 ಲಕ್ಷ ಹೆಕ್ಟೇರ್ ಬೆಳೆ ಹಾನಿ, 20,000ಕ್ಕೂ ಹೆಚ್ಚು ಮನೆಗಳು ಪೂರ್ಣ ಮತ್ತು ಭಾಗಶಃ ಹಾನಿಗೀಡಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಕಂಬಗಳು ಸೇರಿ ಸಾರ್ವಜನಿಕ ಆಸ್ತಿಪಾಸ್ತಿ ಅಪಾರವಾಗಿ ನಷ್ಟವಾಗಿದ್ದು, ತುರ್ತ, ತಾತ್ಕಾಲಿಕ ಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರ 255 ಕೋಟಿ ರೂ. ಬಿಡುಗಡೆ ಮಾಡಿದೆ.
ಪರಿಷ್ಕರಣೆಯಾಗದ ನಿಯಮಾವಳಿ:ಈಶಾನ್ಯ ಭಾರತದ ರಾಜ್ಯಗಳಿಗೆ 90:10, ಉಳಿದ ರಾಜ್ಯಗಳಿಗೆ 75:25 ಅನುಪಾತದಂತೆ ನೆರವು ಸಿಗುತ್ತಿದ್ದು, 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ನಿಯಮಾವಳಿ ಪರಿಷ್ಕರಿಸಬೇಕಾಗಿದೆ. ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ಮಾರ್ಗಸೂಚಿ ಮತ್ತು ನಿಯಮಾವಳಿ ರಚನೆಗೆ ಸಚಿವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿ ವರ್ಷವೇ ಕಳೆದಿದೆ. ಕಳೆದ ಬಾರಿ ರಾಜ್ಯಕ್ಕೆ ಬಂದಿದ್ದ ಕೇಂದ್ರ ಅಧ್ಯಯನ ತಂಡದ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ಪ್ರಸ್ತಾಪಿಸಿ, ಗಮನಸೆಳೆದಿದ್ದರು. ಕರೊನಾ ಕಾರಣಕ್ಕೆ ನಿಯಮಾವಳಿ ಪರಿಷ್ಕರಣೆ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಮಾತ್ರವಲ್ಲ ಉಳಿದ ರಾಜ್ಯಗಳ ಬೇಡಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸಲಿದೆ ಎಂಬ ವಿಶ್ವಾಸವನ್ನು ಕಂದಾಯ ಸಚಿವ ಆರ್.ಅಶೋಕ್ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ:ನಿರಂತರ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು, ಯುವಕರು ಪ್ರವಾಹ ಲೆಕ್ಕಿಸದೆ ನದಿಗೆ ಹಾರಿ ಹುಚ್ಚಾಟ ಮೆರೆಯುತ್ತಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಸೇತುವೆ ಮೇಲಿಂದ ಜಂಪ್ ಮಾಡಿ ಜಲಸಾಹಸ ಮಾಡುತ್ತಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಚ್ಚಿ ಹೋದ ಯುವಕ:ಬಾಗಲಕೋಟೆ ಜಿಲ್ಲೆ ಚಿಕ್ಕಾಲಗುಂಡಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ಪಂಪ್​ಸೆಟ್ ಹಾಳಾಗಬಾರದೆಂದು ಅದರ ಸಂರಕ್ಷಣೆಗೆ ಘಟಪ್ರಭಾ ನದಿಯತ್ತ ಹೋಗಿದ್ದ ಬಸಪ್ಪ ಇರಕಣ್ಣವರ(38) ನೀರಿನ ಸೆಳೆತಕ್ಕೆ ಈಜಲಾಗದೆ ಕೊಚ್ಚಿ ಹೋಗಿದ್ದಾನೆ.
ಹಿಮಪಾತಕ್ಕೆ ಸಿಲುಕಿದ್ದ ಯೋಧನ ಅವಶೇಷ 38 ವರ್ಷಗಳ ಬಳಿಕ ಪತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 3 =
Remember me
