ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಬಿರುಸು ಪಡೆಯುತ್ತಲೇ ಇದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಜು.21ರಂದು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನ ಘಟ್ಟ ಪ್ರದೇಶ ಹಾಗೂ ಶರಾವತಿ ಕೊಳ್ಳದಲ್ಲಿ ವರ್ಷಧಾರೆಯಾಗಿದೆ. ಉಳಿದೆಡೆ ಚದುರಿದಂತೆ ಮಳೆಯಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 12,159 ಕ್ಯೂಸೆಕ್, ಲಕ್ಕವಳ್ಳಿ ಭದ್ರಾ ಡ್ಯಾಂಗೆ 8,093 ಕ್ಯೂಸೆಕ್, ಗಾಜನೂರು ತುಂಗಾ ಜಲಾಶಯಕ್ಕೆ 14,030 ಕ್ಯೂಸೆಕ್ ನೀರು ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.
ದಾವಣಗೆರೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಹರಪನಹಳ್ಳಿ ತಾಲೂಕಿನಲ್ಲಿ 50ಕ್ಕೂ ಹೆಚ್ಚು ಎಕರೆ ಬೆಳೆ ಹಾನಿಯಾಗಿದೆ. ಹರಪನಹಳ್ಳಿ ತಾಲೂಕಿನ ಮಾಡ್ಲಿಗೆರೆ ವೃತ್ತದಲ್ಲಿ 15 ಎಕರೆ ಮೆಕ್ಕೆಜೋಳ, 8 ಎಕರೆ ಚಂಡು ಹೂವು, ಕೂಲಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 20 ಎಕರೆ ಮೆಕ್ಕೆಜೋಳ ಹಾಗೂ ರಾಗಿ, 5 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹುಲಿಕಟ್ಟೆ ವೃತ್ತದಲ್ಲಿ ಈಶಾಪುರ ಮತ್ತು ಚನ್ನಹಳ್ಳಿ ಗ್ರಾಮಗಳಲ್ಲಿ ಚಂಡು ಹೂವು ಮತ್ತು ಮೆಕ್ಕೆಜೋಳ ಗಾಳಿ ಹಾಗೂ ಮಳೆಯಿಂದ ನೆಲಕ್ಕುರುಳಿದೆ. ಈಶಾಪುರ ಗ್ರಾಮದಲ್ಲಿ 8 ಮನೆಗಳು ಹಾಗೂ 2 ದನದ ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ಸಂಪೂರ್ಣ ಕ್ಷೀಣವಾಗಿದ್ದು, ಸೋಮವಾರವೂ ದಿನವಿಡೀ ಉತ್ತಮ ಬಿಸಿಲಿತ್ತು. ಮಳೆ ಕಡಿಮೆಯಾದರೂ ಸಮುದ್ರದಲ್ಲಿ ಅಲೆಗಳ ಅಬ್ಬರ ಮುಂದುವರಿದಿದೆ. ಬೃಹತ್ ತೆರೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಉಳ್ಳಾಲದ ಭಾಗದಲ್ಲಿ ಕಡಲು ಕೊರೆತದಿಂದಾಗಿ ಸೋಮೇಶ್ವರ-ತಲಪಾಡಿ ಸಂಪರ್ಕ ರಸ್ತೆ ಸಮುದ್ರಪಾಲಾಗಿದೆ. ಹಲವು ಮನೆಗಳು ಅಪಾಯದಲ್ಲಿವೆ.
ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
