ಬೆಂಗಳೂರು:ಇಂದು ರಾಜ್ಯ ರಾಜಧಾನಿಯಲ್ಲಿ ಸುರಿದ ಧಾರಕಾರ ಮಳೆಗೆ ನಗರದ ಹಲವೆಡೆ ಬೃಹತ್​ ಮರಗಳು ಧರೆಗೆ ಉರುಳಿದ್ದು, ರಸ್ತೆ ಸಂಚಾರಕ್ಕೆ ಭಾರೀ ಅಡಚಣೆ ಉಂಟುಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತತ್ತರಿಸಿರುವ ಬೆಂಗಳೂರಿಗರು, ಮನೆಯಿಂದ ಹೊರಬರಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಚುನಾವಣೆ ಅಂತ್ಯ, ಮುಂದುವರಿಯದ ನಿರೀಕ್ಷಣಾ ಜಾಮೀನು ಅವಧಿ; ಪಕ್ಷದ ಕಾರ್ಯಕರ್ತರಿಗೆ ದೆಹಲಿ ಸಿಎಂ ಹೇಳಿದ್ದಿಷ್ಟು
ಇಂದು (ಜೂ.02) ಸಂಜೆ 7 ಗಂಟೆಗೆ ಆರಂಭಗೊಂಡ ಮಳೆ ನಿರಂತರವಾಗಿ ಸುರಿದಿದ್ದು, ನಗರದ ಪ್ರಮುಖ ರಸ್ತೆಗಳಿಗೆ ನೀರು ನುಗ್ಗಿ, ಸಂಚಾರದಲ್ಲಿ ತೊಡಕು ಉಂಟಾಗುವಂತೆ ಮಾಡಿದೆ. ಇನ್ನು ಹಲವೆಡೆ ಬೃಹತ್ ಮರಗಳು ಬಿರುಗಾಳಿ ಮಳೆಗೆ ಧರೆಗೆ ಉರುಳಿದ್ದು, ವಾಹನ ಸವಾರರು ಮನೆ ಸೇರಲು ಹರಸಾಹಸ ಪಡುವಂತಾಗಿದೆ. ಮಳೆಯ ಅಬ್ಬರಕ್ಕೆ ಸಂಜೆಯಿಂದ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ ಎಂದು ವರದಿಯಾಗಿದೆ.
ಗಾಳಿಯ ರಭಸಕ್ಕೆ ಟ್ರಿನಿಟಿ ಮೆಟ್ರೋ ರೈಲು ಹಳಿಯ ಮೇಲೆ ಉರುಳಿಬಿದ್ದ ದೈತ್ಯ ಮರದ ರೆಂಬೆ, ಕೊಂಬೆಗಳು ಕೆಲ ಸಮಯ ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯಕ್ಕೆ ಕಾರಣವಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
