ಗಜೇಂದ್ರಗಡ (ಗದಗ):ರಾಷ್ಟ್ರೀಯ ಹೆದ್ದಾರಿ 367ರ ನಿರ್ಮಾಣಕ್ಕಾಗಿ ತಾಲೂಕಿನ ಬೇವಿನಕಟ್ಟಿ ಕ್ರಾಸ್‌ನಿಂದ ಸರ್ಜಾಪುರದವರೆಗೆ ಒಟ್ಟು 1440 ವಿವಿಧ ಜಾತಿಯ ಮರಗಳನ್ನು ಬಲಿ ಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನಿರ್ಣಯಿಸಿದೆ.
ಕೊಪ್ಪಳ ಜಿಲ್ಲೆಯ ಬಾನಾಪೂರದಿಂದ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ವರೆಗೂ ರಾಷ್ಟ್ರೀಯ ಹೆದ್ದಾರಿ 367ರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ತಾಲೂಕಿನ ರಾಂಪೂರ ಹತ್ತಿರ ನಿರ್ಮಾಣವಾಗುತ್ತಿರುವ ಹೆದ್ದಾರಿ ಕಾಮಗಾರಿಗೆ 52ಕ್ಕೂ ಹೆಚ್ಚು ದೊಡ್ಡ ದೊಡ್ಡ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ನಿರ್ಧರಿಸಿತ್ತು. ಆಗ ಶಾಸಕ ಕಳಕಪ್ಪ ಬಂಡಿ ಕಾಳಜಿ ವಹಿಸಿ ಅರಣ್ಯ ಇಲಾಖೆಯಿಂದ ಗಜೇಂದ್ರಗಡ ಕೆರೆಗೆ ಸ್ಥಳಾಂತರಿಸಿ ಮತ್ತೆ ನಳನಳಿಸುವಂತೆ ಮಾಡಿದ್ದಾರೆ.
ರಸ್ತೆ ಅಭಿವೃದ್ಧಿ ದೃಷ್ಟಿಕೋನದಿಂದ ಮಾತ್ರ ಮರಗಳನ್ನು ಕಡಿಯುತ್ತಿದ್ದೇವೆ. ಒಂದು ಮರ ಕಡಿದರೆ 10 ಗಿಡ ನೆಡಲು ಅರಣ್ಯ ಇಲಾಖೆಗೆ ನಮ್ಮ ಪ್ರಾಧಿಕಾರದ ವತಿಯಿಂದ ಹಣ ತುಂಬುತ್ತೇವೆ.
|ಗಿರೀಶ ಮುಂಡದ, ಪ್ರಭಾರಿ ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಆದರೆ, ಈಗ ಅದೇ ಮುಂದುವರಿದ ಹೆದ್ದಾರಿ ನಿರ್ಮಾಣಕ್ಕಾಗಿ ಬೇವಿನಕಟ್ಟಿ ಕ್ರಾಸ್‌ನಿಂದ ಸರ್ಜಾಪುರದವರೆಗೂ ರಸ್ತೆ ಪಕ್ಕದ 10 ಮೀ. ಒಳಗಿರುವ 1440 ನಾನಾ ಜಾತಿಯ ಮರಗಳನ್ನು ಕಡಿಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಣಯಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ತಾಲೂಕಿನ ಮುಶಿಗೇರಿಯಲ್ಲಿ ಸಭೆ ಕರೆದಾಗ ಯಾರೊಬ್ಬರೂ ತಕರಾರು ಎತ್ತಲಿಲ್ಲ. ಹೀಗಾಗಿ ಮರಗಳನ್ನು ಬಲಿ ಕೊಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ.
ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

ತುಂಡಾದ ವಿದ್ಯುತ್ ತಂತಿ ತುಳಿದು ರೈತರಿಬ್ಬರ ದುರ್ಮರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 18 =
Remember me
