ಬೆಂಗಳೂರು:ಗಾಂಧಿನಗರ ಕ್ಷೇತ್ರದಲ್ಲಿ ನೂರಾರು ಯುವಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಿಕ್ಕಪೇಟೆ ವಾರ್ಡ್ 9ರ ಪ್ರಮುಖರಾದ ದಿನೇಶ್ ಕುಮಾರ್, ರಾಮಯ್ಯ ಜತೆಗೆ 300ಕ್ಕೂ ಹೆಚ್ಚಿನ ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಈ ಎಲ್ಲರನ್ನೂ ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಆತ್ಮೀಯವಾಗಿ ಬರಮಾಡಿಕೊಂಡರು. ಬಿಬಿಎಂಪಿ ಮಾಜಿ ಸದಸ್ಯ ಬಿಟಿಎಸ್ ನಾಗರಾಜ್, ಬೆಂಗಳೂರು ಮಹಾನಗರ ಒಬಿಸಿ ಮೋರ್ಚಾದ ಅಧ್ಯಕ್ಷ ಮನೋಜ್ ರಾವ್ ಸಿಂಧಿ ಇನ್ನಿತರರು ಹಾಜರಿದ್ದರು.
ಇನ್ನು ಸಪ್ತಗಿರಿಗೌಡ ಭಾನುವಾರ ಕ್ಷೇತ್ರದ ವಿವಿಧೆಡೆ ಹಲವಾರು ಮುಖಂಡರು ಹಾಗೂ ಯುವಕರ ಜತೆಗೂಡಿ ಬಿರುಸಿನ ಮತಯಾಚನೆ ಮಾಡಿದರು. ಗಿರಿಜಾ ಗಾರ್ಡನ್, ಮಂತ್ರಿ ಸ್ಟೋರ್ ಮುಂತಾದೆಡೆ ಮತಯಾಚಿಸಿ, ಈ ಬಾರಿ ತಮಗೆ ಅವಕಾಶ ನೀಡಿದರೆ ಜನರ ಆಶೋತ್ತರ ಈಡೇರಿಸಿಕೊಡುವ ಆಶ್ವಾಸನೆ ನೀಡಿದರು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಗುಜರಾತ್ ಲೋಕಸಭಾ ಸದಸ್ಯ ಸುನಿಲ್ ಸಿಂಘ್ವಿ, ಬಿಬಿಎಂಪಿ ಮಾಜಿ ಸದಸ್ಯ ಬಿ.ಟಿ.ಎಸ್. ನಾಗರಾಜ್, ಪಳನಿ ಹಾಗೂ ಪಕ್ಷದ ಅನೇಕರು ಸಪ್ತಗಿರಿಗೌಡ ಅವರೊಂದಿಗೆ ಕೈಜೋಡಿಸಿ ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
