ಬೆಂಗಳೂರು:ಚೀನಾ ಲೋನ್ ಆ್ಯಪ್‌ಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು ಆ್ಯಪ್‌ಗಳ ‘ಮಾರ್ಫಿಂಗ್’ ಕಿರುಕುಳದಿಂದ ನಲುಗುತ್ತಿರುವ ಸಾರ್ವಜನಿಕರಿಗೆ ರಕ್ಷಣೆಯ ಅಭಯ ನೀಡಿದ್ದಾರೆ.ಇದನ್ನೂ ಓದಿ:ಪ್ರಧಾನಿ ಮೋದಿಗೆ ಫ್ರಾನ್ಸ್​​ನಲ್ಲಿ ಭವ್ಯ ಸ್ವಾಗತ: ಬಾಸ್ಟಿಲ್ ಡೇ ಪಥಸಂಚಲನದಲ್ಲಿ ಭಾಗಿ, ದ್ವಿಪಕ್ಷೀಯ ರಕ್ಷಣಾ ಸಂಬಂಧದ ಬಗ್ಗೆ ಮಾತುಕತೆಜಾಲಹಳ್ಳಿ ಬಳಿಯ ಎಚ್‌ಎಂಟಿ ಲೇಔಟ್‌ನಲ್ಲಿ ತೇಜಸ್ ನಾಯರ್(೨೨) ಎಂಬ ವಿದ್ಯಾರ್ಥಿ ಲೋನ್ ಆ್ಯಪ್‌ನ ಕಿರುಕುಳದಿಂದ ಬೇಸತ್ತು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೆ ಲೋನ್ ಆ್ಯಪ್‌ಗಳ ಬಗ್ಗೆ ಎಚ್ಚರ ವಹಿಸುವಂತೆ ಜನರಿಗೆ ತಿಳಿಸಿರುವ ಪೊಲೀಸರು ಸೂಚಿಸಿದ್ದಾರೆ.ಆ್ಯಪ್‌ಗಳಿಂದ ಕಿರುಕುಳ ಎದುರಿಸುತ್ತಿರುವ ಸಂತ್ರಸ್ತರು ಎದೆಗುಂದದೆ ನಿರ್ಭೀತಿಯಿಂದ ದೂರು ದಾಖಲಿಸಬೇಕು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಶರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಹಣದ ಅಗತ್ಯವಿರುವವರಿಗೆ ಸುಲಭವಾಗಿ ಸಾಲ ಕೊಟ್ಟು ವಸೂಲಾತಿ ನೆಪದಲ್ಲಿ ಕಿರುಕುಳ ನೀಡುತ್ತಿರುವ ಲೋನ್ ಆ್ಯಪ್‌ಗಳ ವಿರುದ್ಧ ವ್ಯಾಪಕ ದೂರು ಕೇಳಿಬರುತ್ತಿವೆ. ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್ ಕಾರ್ಡ್‌ನ ವಿವರ ಆಧರಿಸಿ ಅವರ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಕದ್ದು, ಅಶ್ಲೀಲ ರೂಪಕ್ಕೆ ತಿರುಚಿ (ಮಾರ್ಫಿಂಗ್) ಬ್ಲ್ಯಾಕ್‌ಮೇಲ್ ಮಾಡುವ ಜಾಲ ರಾಜಧಾನಿಯಲ್ಲಿ ಸಕ್ರಿಯವಾಗಿದೆ.ಸಾಲ ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್ ಕಂಪನಿಗಳು ಗ್ರಾಹಕರಿಗೆ ಗೊತ್ತಾಗದಂತೆ ಅವರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿವೆ. ಸಾಲ ಮರುಪಾವತಿಸಲು ವಿಫಲವಾದರೆ ಕಂಪನಿಗಳು ಗ್ರಾಹಕರನ್ನು ಪೀಡಿಸಲು ಆ ಮಾಹಿತಿಗಳನ್ನು ಬಳಸುತ್ತಿವೆ. ಪ್ರತಿನಿತ್ಯ ನೂರಾರು ಜನರು ಲೋನ್ ಆ್ಯಪ್‌ಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಸಾಲಗಾರರು ಬಡ್ಡಿ ಸಮೇತ ಸಾಲದ ಹಣ ಕಟ್ಟಿದ್ದರೂ ಲೋನ್ ಆ್ಯಪ್ ಕಂಪನಿಗಳು ಮಾರ್ಫಿಂಗ್ ಫೋಟೋಗಳ ಸಹಾಯದಿಂದ ಸಾಲಗಾರರನ್ನು ಬೆದರಿಸಿ ಸುಲಿಗೆ ಮಾಡುತ್ತಿವೆ. ಅಮಾಯಕ ಸಾಲಗಾರರು ಮಾನಕ್ಕೆ ಅಂಜಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ.ಇದನ್ನೂ ಓದಿ:VIDEO | ಲಿಫ್ಟ್​​​ ನಿಂತಿದ್ದಕ್ಕೆ ವಾಚ್​ಮನ್​​ಗೆ ಪೊರಕೆಯಿಂದ ಥಳಿಸಿದ ತಾಯಿ, ಮಗನಿಂದ ಕೊಲೆ ಬೆದರಿಕೆಈ ಲೋನ್ ಆ್ಯಪ್‌ಗಳು ವಿಷ ವರ್ತುಲದಂತೆ ಎಂದು ಜನರು ತಿಳಿದಿರಬೇಕು. ಜನರು ಈ ಆ್ಯಪ್‌ಗಳಿಗೆ ಬಲಿಯಾಗಬಾರದು. ಆ್ಯಪ್‌ಗಳು ಅನುಕೂಲಕರ ಮರುಪಾವತಿ ಆಯ್ಕೆಯೊಂದಿಗೆ ಸಣ್ಣ ಸಾಲದ ಮೊತ್ತ ನೀಡುವ ಮೂಲಕ ಜನರನ್ನು ಆಕರ್ಷಿಸುತ್ತಿವೆ. ಜತೆಗೆ, ಯಾವುದೇ ದಾಖಲೆಪತ್ರಗಳಿಲ್ಲದೆ ಸುಲಭವಾಗಿ ಸಾಲ ನೀಡುವುದರಿಂದ ಜನರು ಈ ಆ್ಯಪ್‌ಗಳ ಬಲೆಗೆ ಬೀಳುತ್ತಾರೆ. ನಗರದಲ್ಲಿ ಈ ಹಿಂದೆಯೂ ಇಂತಹ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಆದರೆ, ಹೊಸ ಹೆಸರಿನಲ್ಲಿ ಆ್ಯಪ್‌ಗಳು ಬರುತ್ತಲೇ ಇವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.350ಕ್ಕೂ ಹೆಚ್ಚು ಆ್ಯಪ್‌ಗೆ ನಿರ್ಬಂಧ:ಜನರಿಗೆ ಸಾಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (ಆರ್‌ಬಿಐ) ಲೈಸನ್ಸ್ ಪಡೆಯುವುದು ಲೋನ್ ಆ್ಯಪ್‌ಗಳಿಗೆ ಕಡ್ಡಾಯವಾಗಿದೆ. ಪ್ಲೇ ಸ್ಟೋರ್ ನೀತಿ ಉಲ್ಲಂಘಿಸಿದ್ದಕ್ಕಾಗಿ ಗೂಗಲ್ ೨೦೨೨ ರಲ್ಲಿ ೩,೫೦೦ಕ್ಕೂ ಹೆಚ್ಚು ಲೋನ್ ಆ್ಯಪ್‌ಗಳ ವಿರುದ್ಧ ಕ್ರಮ ತೆಗೆದುಕೊಂಡಿತ್ತು. ದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ೩೫೦ಕ್ಕೂ ಹೆಚ್ಚು ಲೋನ್ ಅಪ್ಲಿಕೇಶನ್‌ಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ನಿರ್ಬಂಧ ವಿಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಕೇಂದ್ರವು ಗೂಗಲ್ ಪ್ಲೇ ಸ್ಟೋರ್‌ನಿಂದ ೩೫೦ಕ್ಕೂ ಹೆಚ್ಚು ಲೋನ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ ಎಂದು ಶರಣಪ್ಪ ತಿಳಿಸಿದ್ದಾರೆ.ಲೋನ್ ಆ್ಯಪ್‌ಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬ್ಯಾಂಕ್‌ಗಳು ಮತ್ತು ಇತರೆ ಆಯ್ಕೆಗಳಿವೆ. ಇಂತಹ ಲೋನ್ ಆ್ಯಪ್‌ಗಳಿಂದ ಸಾಲ ಪಡೆದು ಕಿರುಕುಳ ಅನುಭವಿಸುತ್ತಿರುವವರು ಧೈರ್ಯವಾಗಿ ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು. ಸಾಲ ವಸೂಲಾತಿ ಸೋಗಿನಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವ ಲೋನ್ ಆ್ಯಪ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಹೇಳಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
