ಬೆಂಗಳೂರು:ರಾಜಧಾನಿಯಲ್ಲಿ ನೂರಾರು ಕೆರೆಗಳನ್ನು ಕಬಳಿಸಿರುವ ಭೂಗಳ್ಳರು, ಅಕ್ರಮವಾಗಿ ಸಾವಿರಾರು ಎಕರೆ ಸರ್ಕಾರಿ ಜಾಗವನ್ನೂ ನುಂಗಿದ್ದಾರೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ ಪ್ರದೇಶದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಸರ್ಕಾರಿ ಜಮೀನಿನ ಒಟ್ಟು ಮೌಲ್ಯ 5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಆಲದ ಮರದಂತೆ ಬಲಾಢ್ಯವಾಗಿ ಬೆಳೆದಿರುವ ಭೂಮಾಫಿಯಾವನ್ನು ಸದೆಬಡಿಯಲು ಸರ್ಕಾರಕ್ಕೂ ಇಚ್ಛಾಶಕ್ತಿ ಇಲ್ಲದಂತಾಗಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಮರಳಿ ವಶಕ್ಕೆ ಪಡೆಯಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಹಲವರು ತಿವಿದರೂ ಕಾರ್ಯರೂಪ ಮಾತ್ರ ಶೂನ್ಯ. ರಾಜ್ಯದಲ್ಲಿ ಆಡಳಿತ ನಡೆಸಿದ್ದ ಹಿಂದಿನ ಸರ್ಕಾರಗಳ ಮನಸ್ಥಿತಿಯೂ ಇದೇ ರೀತಿಯಾಗಿತ್ತು.ನಗರದಲ್ಲಿ ಮತ್ತು ನಗರದ ಸುತ್ತಮುತ್ತ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಅಂದಾಜು 38,947 ಎಕರೆ ಸರ್ಕಾರಿ ಜಾಗವನ್ನು ಬೇನಾಮಿ ಹೆಸರಿನಲ್ಲಿ ರಾಜಕೀಯ ನಾಯಕರು, ಖಾಸಗಿಯವರು ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಭೂಕಬಳಿಕೆ ಪ್ರಕರಣ ಸಂಬಂಧ ಬೆಂಗಳೂರು ದಕ್ಷಿಣದಲ್ಲಿ 6,759 ಕೇಸ್, ಬೆಂ.ಪೂರ್ವ 4,762, ಆನೇಕಲ್ 1,226, ಯಲಹಂಕ 1,253, ಬೆಂ. ಉತ್ತರ ತಾಲೂಕಿನಲ್ಲಿ 660 ಸೇರಿ ಒಟ್ಟು 14,660 ಪ್ರಕರಣ ದಾಖಲಾಗಿವೆ.
ಕಾಗದದಲ್ಲೇ ಉಳಿದ ಆದೇಶ:ಸರ್ಕಾರಿ ಭೂಮಿ ಒತ್ತುವರಿ ತೆರವು ಪ್ರಕ್ರಿಯೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಬಾಕಿ ಇರುವ ಪ್ರಕರಣಗಳು, ಸ್ವೀಕೃತವಾಗಿರುವ ದೂರುಗಳನ್ನು 15 ದಿನ ಅವಧಿಯೊಳಗೆ ಸಂಪೂರ್ಣವಾಗಿ ಪರಾಮರ್ಶಿಸುವುದು, ನಗರ ಪ್ರದೇಶ, ವಾಣಿಜ್ಯ, ಕೈಗಾರಿಕೆ ಸೇರಿ ಇತರ ಉದ್ದಿಮೆಗಳಿಗೆ ಅನಧಿಕೃತವಾಗಿ ಸರ್ಕಾರಿ ಜಮೀನು ಬಳಸಿರುವ ಒತ್ತುವರಿ ಕೇಸ್‌ಗಳನ್ನು ಅತಿ ಗಂಭೀರ ಎಂದು ಪರಿಗಣಿಸಿ ಒತ್ತುವರಿದಾರರ ವಿರುದ್ಧ ಕ್ರಮ ಜರಗಿಸುವುದು, ಒತ್ತುವರಿ ತೆರವುಗೊಳಿಸಲು ವಿಲವಾದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಡಿಸಿ ಅವರಿಗೆ ಅಧಿಕಾರ ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳು ಒತ್ತುವರಿ ತೆರವು ಬಗ್ಗೆ ತಿಂಗಳಿಗೊಮ್ಮೆ ತಪ್ಪದೆ ಪರಾಮರ್ಶಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಆದರೂ, ಒತ್ತುವರಿ ತೆರವು ವಿಚಾರದಲ್ಲಿ ಹೊರಡಿಸಿರುವ ಆದೇಶ ಪತ್ರ ಕಾಗದದಲ್ಲೇ ಉಳಿದಿದೆ.
ಇದನ್ನೂ ಓದಿ:ಇವಿಷ್ಟು ಜನರ ಖಾತೆಗಳಿಗೆ ಶೀಘ್ರ ಗೃಹ ಲಕ್ಷ್ಮೀ ಹಣ
587 ಎಕರೆ ಅರಣ್ಯ ಕಬಳಿಕೆ:ಬೆಂಗಳೂರು ನಗರ ವಿಭಾಗದಲ್ಲಿ ಒಟ್ಟು 16,988 ಎಕರೆ ಅರಣ್ಯ ಪ್ರದೇಶವಿದ್ದು, 587 ಎಕರೆ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಸಂಬಂಧ 1,051 ಕೇಸ್‌ಗಳು ದಾಖಲಾಗಿವೆ. 1978ರ ಪೂರ್ವದಲ್ಲಿ ಬೆಂಗಳೂರು ನಗರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಯಾವುದೇ ಒತ್ತುವರಿ ಕೇಸ್‌ಗಳು ದಾಖಲಾಗಿರಲಿಲ್ಲ. ಆದರೆ, 1978ರ ನಂತರ ಅರಣ್ಯ ಭೂಕಬಳಿಸುವ ಪ್ರಕ್ರಿಯೆ ಜಾಸ್ತಿಯಾಗುತ್ತಿದೆ. ಇಲಾಖೆಯ ಅಧಿಕಾರಿಗಳ ಶಾಮೀಲಾಗಿರುವ ಭೂಮಾಫಿಯಾ ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಸರ್ಕಾರಿ ಭೂಮಿ ಒತ್ತುವರಿ ವಿವರತಾಲೂಕು ವಿಸ್ತೀರ್ಣ (ಎಕರೆ)ಯಲಹಂಕ 12,764ಆನೇಕಲ್ 10,531ಬೆಂಗಳೂರು ದಕ್ಷಿಣ 8,090ಬೆಂ. ಪೂರ್ವ 4,475ಬೆಂ. ಉತ್ತರ 3,086
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
