ಬೆಂಗಳೂರು:ರಾಜ್ಯದಲ್ಲಿ ಕರೊನಾ ಕಗ್ಗಂಟು ಕೈಮೀರಿ ಹೋಗುತ್ತಿದ್ದು, ಇವತ್ತೊಂದೇ ದಿನ 217 ಮಂದಿ ಸಾವಿಗೀಡಾಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ಒಟ್ಟು 48,296 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ.‌
ಈ ಮೂಲಕ ರಾಜ್ಯದಲ್ಲಿನ ಈ ವರೆಗಿನ ಒಟ್ಟು ಕರೊನಾ ಸೋಂಕಿನ ಪ್ರಮಾಣ 15,23,142 ತಲುಪಿದ್ದರೂ, ಈ ವರೆಗೆ 11,24,909 ಮಂದಿ ಗುಣವಾಗಿ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಿಂದ ಬಿಡುಗಡೆ ಆಗಿದ್ದಾರೆ. ಇವತ್ತೊಂದೇ ದಿನ 14,884 ಮಂದಿ ಆಸ್ಪತ್ರೆ-ಕೋವಿಡ್‌ ಕೇರ್‌ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಅದಾಗ್ಯೂ ರಾಜ್ಯದಲ್ಲಿ 3,82,690 ಸಕ್ರಿಯ ಪ್ರಕರಣಗಳಿದ್ದು, ಇಂದು 217 ಮಂದಿ ಕರೊನಾದಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ಕರೊನಾಗೆ ಬಲಿಯಾದವರ ಸಂಖ್ಯೆ 15,523ಕ್ಕೆ ತಲುಪಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದೆ ಹೀಗೇ ಮುಂದುರಿದರೆ ದಿನವೊಂದಕ್ಕೆ ಅರ್ಧ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಆತಂಕ ಎದುರಾಗಿದೆ. ನಿನ್ನೆಯ ಕರೊನಾ ಬುಲೆಟಿನ್‌ ಪ್ರಕಾರ ಗುರುವಾರ 270 ಮಂದಿ ಕರೊನಾಗೆ ಬಲಿಯಾಗಿದ್ದು, ನಿನ್ನೆಯೊಂದೇ ದಿನ 35,024 ಕರೊನಾ ಕೇಸ್‌ಗಳು ವರದಿಯಾಗಿದ್ದವು. ಇಂದು 24 ಗಂಟೆಗಳಲ್ಲಿ ಅದಕ್ಕಿಂತಲೂ 13 ಸಾವಿರ ಹೆಚ್ಚು ಎಂದರೆ 48 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗಿವೆ. ಇದೀಗ ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರೂ ಹೆಚ್ಚು ಜವಾಬ್ದಾರಿಯುತವಾಗಿ ಹಾಗೂ ಮುನ್ನೆಚ್ಚರಿಕೆ ವಹಿಸಬೇಕಾದ ಅತ್ಯಗತ್ಯ ಎದುರಾಗಿದೆ.
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ; ‘ನೆಮ್ಮದಿಯಾಗಿ ನಿದ್ರಿಸಿ’ ಎಂದವರು ಚಿರನಿದ್ರೆಗೆ…

ಎರಡು ವಾಹನಗಳ ಮಧ್ಯೆ ಅಪ್ಪಚ್ಚಿಯಾಗಿ ಧಗಧಗ ಉರಿದ ಆಂಬುಲೆನ್ಸ್;‌ ಒಳಗಿದ್ದವರು ಹೊರಟಿದ್ದು ನಿಮ್ಹಾನ್ಸ್‌ಗೆ, ಸೇರಿದ್ದು ವಿಕ್ಟೋರಿಯಾಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + two =
Remember me
