ಗುಜರಾತ್​​ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತೀ ಅಧಿಕ ಮತಗಳ ಅಂತರದಲ್ಲಿ ಗೆಲುವ ಪಡೆದುಕೊಂಡಿದ್ದಾರೆ. ಅದರಲ್ಲೂ ಗುಜರಾತನ್ನ ಬಿಜೆಪಿಯ ಭದ್ರಕೋಟೆ ಅಂತಲೇ ಕರೆಯಲಾಗುತ್ತೆ. ಪ್ರಭಾವಿ ನಾಯಕರು ಮತ್ತು ಭಾರತದ ಪ್ರದಾನಿ ನರೇಂದ್ರ ಮೋದಿ ಇದೇ ಕ್ಷೇತ್ರದಿಂದ ಗೆದ್ದು ಬೀಗಿ ಹೆಸರು ಮಾಡಿದಂತವರು.
ಇದೀಗ ಅವರ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೋಟಾ ಮತಗಳನ್ನು ಜನರು ಹಾಕಿದ್ದಾರೆ.
ಗುಜರಾತ್‌ನಲ್ಲಿ ನೋಟಾಗೆ ಒಟ್ಟು 4,60,341 ಮತಗಳು ಚಲಾವಣೆಯಾಗಿದ್ದು, ಒಟ್ಟು ಮತಗಳ ಶೇಕಡ 1.60 ರಷ್ಟಿದ್ದರೆ, ಸ್ವತಂತ್ರರು ಶೇಕಡ 1.89 ಪಡೆದಿದ್ದಾರೆ. ಅಮಿತ್ ಶಾ ಕ್ಷೇತ್ರವಾದ ಗಾಂಧಿನಗರದಲ್ಲಿ ಸುಮಾರು 22,005 ನೋಟಾ ಮತ ಚಲಾವಣೆಯಾಗಿದೆ. ಸಿ.ಆರ್.ಪಾಟೀಲ ಕ್ಷೇತ್ರವಾದ ನವಸಾರಿಯಲ್ಲಿ 20,462 ನೋಟಾ ಮತಗಳು ದಾಖಲಾಗಿವೆ.
ಅಂಕಿ ಅಂಶಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಟ್ಟು 10,10,972 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ 2,66,256 ಮತಗಳನ್ನು ಗಳಿಸಿದ್ದಾರೆ. ಅಮಿತ್ ಶಾ ಅವರು ಪಟೇಲ್ ಅವರನ್ನು 7,44,716 ಮತಗಳ ಅಂತರದಿಂದ ಸೋಲಿಸಿದ್ದಾರೆ.
ದಾಹೋದ್ ಕ್ಷೇತ್ರದಲ್ಲಿ ಅತಿ ಹೆಚ್ಚು ನೋಟಾ ಮತಗಳು (34,938) ದಾಖಲಾಗಿದ್ದರೆ, ಅಹಮದಾಬಾದ್ ಪೂರ್ವದಲ್ಲಿ ಕಡಿಮೆ ನೋಟಾ ಮತಗಳು (10,503) ಹಾಕಲಾಗಿದೆ. ಅಹಮದಾಬಾದ್ ಪಶ್ಚಿಮದಲ್ಲಿ 14,007 ನೋಟಾ ಮತಗಳು, ರಾಜ್‌ಕೋಟ್‌ನಲ್ಲಿ 15,922 ಮತ್ತು ವಡೋದರಾದಲ್ಲಿ 18,388 ನೋಟಾ ಮತ ಚಲಾವಣೆ ಮಾಡಲಾಗಿದೆ.
ಛೋಟಾ ಉದೇಪುರ್ 29655, ಬಾರ್ಡೋಲಿ 25542, ಭರೂಚ್ 23283, ಬನಸ್ಕಾಂತ 22167 ಮತ್ತು ಸಬರ್ಕಾಂತ 21076, ಪಂಚಮಹಲ್ ಕ್ಷೇತ್ರದಲ್ಲಿ 20103, ಭಾವನಗರದಲ್ಲಿ 18765, ಕಛ್‌ನಲ್ಲಿ 18742, ಖೇಡಾದಲ್ಲಿ 18824, ವಲ್ಸಾದ್‌ನಲ್ಲಿ 18373, ಪಟಾನ್‌ನಲ್ಲಿ 16722, ಆನಂದ್‌ನಲ್ಲಿ 15930, ಜುನಾಗಢದಲ್ಲಿ 14013, ಪೋರಬಂದರ್‌ನಲ್ಲಿ 13563, ಸುರೇಂದ್ರನಗರದಲ್ಲಿ 13299, ಮೆಹ್ಸಾನಾದಲ್ಲಿ 11626, ಅಮ್ರೇಲಿಯಲ್ಲಿ 11349 ಮತ್ತು ಜಾಮ್‌ನಗರದಲ್ಲಿ 11084 ಮತಗಳ ಚಲಾವಣೆಯಾಗಿದೆ.
ಅಂಚೆ ಮತಪತ್ರದಲ್ಲಿಯೂ ನೋಟಾ
ಮುಖ್ಯವಾಗಿ, ಅಂಚೆ ಮತಪತ್ರದ ಮತದಾನದಲ್ಲಿಯೂ ನೋಟಾ ಮತಗಳು ಚಲಾವಣೆಯಾಗಿದ್ದು, 11,089 ಚುನಾವಣಾ ಕಾರ್ಯಕರ್ತರು ನೋಟಾ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಭಾವನಗರ ಕ್ಷೇತ್ರದಲ್ಲಿ ಅಂಚೆ ಮತಪತ್ರಗಳಲ್ಲಿ ಅತಿ ಹೆಚ್ಚು ನೋಟಾ ಮತಗಳು ದಾಖಲಾಗಿದ್ದು, 1,048 ಮಂದಿ ನೋಟಾಗೆ ಮತ ಹಾಕಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 1 =
Remember me
