ಬೆಂಗಳೂರು:ಮೂರೂವರೆ ತಿಂಗಳ ಬಳಿಕ ಅಂದರೆ ಈ ವರ್ಷದ ಮೊದಲ ದಿನ ಮತ್ತೆ ಒಂದು ಸಾವಿರವನ್ನು ದಾಟಿದ್ದ ಕರೊನಾ ದೈನಿಕ ಪ್ರಕರಣಗಳ ಸಂಖ್ಯೆ ಇಂದು ಅರ್ಧ ಲಕ್ಷವನ್ನು ದಾಟಿದೆ.
ರಾಜ್ಯದಲ್ಲಿ ಇಂದು ದಾಖಲಾದ ದೈನಂದಿನ ಕರೊನಾ ಪ್ರಕರಣಗಳ ಸಂಖ್ಯೆ ಬರೋಬ್ಬರಿ ಅರ್ಧ ಲಕ್ಷ. ಆ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ ಅರ್ಧಕ್ಕರ್ಧದಷ್ಟು ಪ್ರಕರಣಗಳು ವರದಿಯಾಗಿವೆ.
ಅಂದರೆ ರಾಜ್ಯದಲ್ಲಿ ಇಂದು ಹೊಸದಾಗಿ 50,210 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದರೆ, ಆ ಪೈಕಿ ಬೆಂಗಳೂರಿನಲ್ಲೇ 26,299 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ಕರ್ನಾಟಕ ಈ ವಿಷಯದಲ್ಲೀಗ ದೇಶದಲ್ಲೇ ಪ್ರಥಮ: ಇದಕ್ಕಾಗಿ ತಗುಲಿದ ದಿನಗಳೆಷ್ಟು ಗೊತ್ತೇ?
ಮತ್ತೊಂದೆಡೆ ಸೋಂಕಿನ ಪ್ರಮಾಣ ಕೂಡ ಹೆಚ್ಚಳಗೊಂಡಿದೆ. ನಿನ್ನೆ ಶೇ. 19.33 ಇದ್ದ ಪಾಸಿಟಿವಿಟಿ ದರ ಇಂದು ಶೇ. 22.77ಕ್ಕೆ ತಲುಪಿದೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,57,796ಕ್ಕೆ ಏರಿದ್ದು, ಅದರಲ್ಲಿ ಬೆಂಗಳೂರಿನಲ್ಲಿನ ಪ್ರಕರಣಗಳ ಸಂಖ್ಯೆ 2.31 ಲಕ್ಷ. ಅಲ್ಲದೆ ಇಂದು ರಾಜ್ಯದಲ್ಲಿ ಬೆಂಗಳೂರಿನ 8 ಸೇರಿ ಒಟ್ಟು 19 ಮಂದಿ ಕರೊನಾಗೆ ಬಲಿಯಾಗಿದ್ದಾರೆ.
ಬೈಕ್‌‌ಗೆ ಲಾರಿ ಡಿಕ್ಕಿ: ಹಿರಿಯ ಪತ್ರಕರ್ತ ಗಂಗಾಧರಮೂರ್ತಿ ವಿಧಿವಶ
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:four × 3 =
Remember me
