ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ, ಪ್ರತಿ ಮನೆಗೆ ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಆರಂಭಗೊಳ್ಳುವ ಮೊದಲೇ ಭರ್ಜರಿ ಸ್ಪಂದನೆ ಸಿಕ್ಕಿದೆ. ಅರ್ಥಾತ್, ಈ ಯೋಜನೆ ಸಲುವಾಗಿ ನೋಂದಣಿ ಆರಂಭವಾಗಿದ್ದು, ಅದು ಈಗ ಅರ್ಧ ಕೋಟಿಗೂ ಅಧಿಕವಾಗಿದೆ.
ಜುಲೈ ತಿಂಗಳ ಬಿಲ್​ಗೆ ಅನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. ಅಂದರೆ, ಆಗಸ್ಟ್​ನಲ್ಲಿ ಬರುವ ಬಿಲ್​ನಲ್ಲಿ 200 ಯುನಿಟ್​ವರೆಗಿನ ವಿದ್ಯುತ್​ಗೆ ಶೂನ್ಯ ಬಿಲ್ ಇರಲಿದೆ. ಈ ಯೋಜನೆಯ ಫಲಾನುಭವಿ ಆಗಲು ನೋಂದಣಿ ಅಗತ್ಯವಾಗಿದ್ದು, ಜೂ. 18ರಂದು ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ:ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು
ಇದೀಗ ಒಂದು ವಾರ ಕಳೆಯುವಷ್ಟರಲ್ಲಿ 51 ಲಕ್ಷಕ್ಕೂ ಅಧಿಕ ಮಂದಿ ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಮನೆ ಮಾಲೀಕರು/ಬಾಡಿಗೆದಾರರು ಸೇರಿ ಎಲ್ಲರೂ ಈ ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕಾಗಿ ಆಧಾರ್​ ನಂಬರ್ ಹಾಗೂ ವಿದ್ಯುತ್​ ಬಿಲ್​ನಲ್ಲಿರುವ ಖಾತೆ ನಂಬರ್ ನಮೂದಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.
ಗೃಹಜ್ಯೋತಿ ಯೋಜನೆಗೆ ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಇಲ್ಲದೇ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಆದರೆ ಆರಂಭದಿಂದಲೇ ಯೋಜನೆಯ ಪ್ರಯೋಜನ ಪಡೆಯಲು ಬಳಕೆದಾರರು ಆದಷ್ಟೂ ಬೇಗ ನೋಂದಣಿ ಮಾಡಿಸಿಕೊಳ್ಳುವುದು ಉತ್ತಮ.
ಹ್ಯಾಕರ್​ಗಳು ಸೇವಾ ಸಿಂಧು ಹೆಸರಿನಲ್ಲಿ ನಕಲಿ ಆ್ಯಪ್​ಗಳನ್ನು ಸೃಷ್ಟಿಸಿದ್ದು, ನೋಂದಣಿ ವೇಳೆ ಎಚ್ಚರಿಕೆ ವಹಿಸಿ. ಸುರಕ್ಷಿತ ನೋಂದಣಿಗಾಗಿ ಅಧಿಕೃತ ಲಿಂಕ್​ ಬಳಸಿ.
https://sevasindhugs.karnataka.gov.in
#ಗೃಹಜ್ಯೋತಿಯೋಜನೆಗೆ ಅರ್ಜಿ ನೋಂದಾಯಿಸಲು, ಯಾವುದೇ ಕೊನೆಯ ‍ದಿನಾಂಕ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಇಲ್ಲದೇ ಅರ್ಜಿ ಸಲ್ಲಿಸಬಹುದು.#gruhajyothi#gruhajyothischeme#register#nolastdate#freepower#electricity#freeelectricity@CMofKarnataka@EnergyDeptGoK@siddaramaiah@thekjgeorge@mdbescompic.twitter.com/Cbyly8qXUo
— Namma BESCOM (ನಮ್ಮ ಬೆಸ್ಕಾಂ) (@NammaBESCOM)June 21, 2023

ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

‘ತಂಗಿಗೆ ಮೆಸೇಜ್ ಮಾಡ್ಬೇಡ’ ಎಂದು ಬುದ್ಧಿಮಾತು ಹೇಳಿದ ಅಣ್ಣನ ಕೊಂದೇಬಿಟ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 7 =
Remember me
