ಚಿಕ್ಕಮಗಳೂರು:ಒಂದೇ ಜಾಗದಲ್ಲಿ ನೂರಾರು ಕುರಿಗಳು ಸತ್ತು ಬಿದ್ದಿರುವುದು ಕುತೂಹಲ ಕೆರಳಿಸುವ ಜತೆಗೆ ಆತಂಕವನ್ನೂ ಮೂಡಿಸಿದೆ. ಮತ್ತೊಂದೆಡೆ ಸಾಯುತ್ತಿರುವ ಕುರಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಸ್ಥಳೀಯರಲ್ಲಿ ಚಿಂತೆಯನ್ನು ಉಂಟು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಒಂದೇ ಜಾಗದಲ್ಲಿ 120 ಕುರಿಗಳು ಸಾವಿಗೀಡಾಗಿವೆ. ಈ ನಡುವೆ ಮತ್ತಷ್ಟು ಕುರಿಗಳು ಸಾವಿಗೀಡಾಗುತ್ತಿವೆ. ಶಿರಾ-ಹಿರಿಯೂರಿನಿಂದ ಬಂದಿರುವ ಈ ಕುರಿಗಳ ಹಿಂಡು ನಿನ್ನೆ ಸಂಜೆಯ ಮಳೆಯಲ್ಲಿ ನೆನೆದು ಅಸ್ವಸ್ಥಗೊಂಡು ಸಾವಿಗೀಡಾಗಿವೆ ಎಂಬ ಶಂಕಿಸಲಾಗಿದ್ದರೂ ಇವುಗಳ ಸಾವಿನ ಕುರಿತ ಕಾರಣವಿನ್ನೂ ನಿಗೂಢವಾಗಿಯೇ ಇದೆ.
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಶುವೈದ್ಯರ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸತ್ತ ಕುರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿರುವ ಅಧಿಕಾರಿಗಳು ಸಾವಿಗೆ ಕಾರಣ ಕಂಡುಕೊಳ್ಳಲು ಮುಂದಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಖರ ಕಾರಣ ತಿಳಿಯುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ ಎನ್ನಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಸಂಸದ: ದಾಖಲಾಯ್ತು ಕೇಸ್​

ಉದ್ಯೋಗಿಗಳಿಗೆ ಗುಡ್​ ನ್ಯೂಸ್​! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲಿದೆ ವೇತನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
