ನವದೆಹಲಿ:ಚೀನಾದ ವುಹಾನ್​ನಲ್ಲಿ ಜೀವ ಪಡೆದು ವಿಶ್ವಾದ್ಯಂತ 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಿಸಿ ಅಟ್ಟಹಾಸ ಮೆರೆಯುತ್ತಿರುವ ಕರೊನಾ ಮಹಾಮಾರಿಗೆ ಜೀವ ಬಿಟ್ಟವರ ಸಂಖ್ಯೆ ಒಂದು ಲಕ್ಷ ದಾಟಿದೆ. ಕರೊನಾ ತವರು ಚೀನಾದಲ್ಲಿ 3,300 ಜನರು ಮೃತಪಟ್ಟರೆ, ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಚೀನಾಗಿಂತ 2-3 ಪಟ್ಟು ಹೆಚ್ಚಳವಾಗಿದೆ. ಇತ್ತ ಭಾರತದಲ್ಲೂ ಮರಣಮೃದಂಗ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ 40 ಸಾವು ಸೇರಿ ಈವರೆಗೆ 246 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ.
ಇಟಲಿಯಲ್ಲಿ 18,000, ಅಮೆರಿಕ 17,000, ಸ್ಪೇನ್ 15,000, ಫ್ರಾನ್ಸ್ 12,000, ಬ್ರಿಟನ್​ನಲ್ಲಿ 8 ಸಾವಿರ ಜನರು ಕರೊನಾಗೆ ಬಲಿಯಾಗಿದ್ದಾರೆ. ಬೆಲ್ಜಿಯಂನಲ್ಲಿ ಕಳೆದ 24 ತಾಸಿನಲ್ಲಿ 496 ಜನ ಸಾವನ್ನಪ್ಪಿದ್ದು, ಇದು ಈವರೆಗಿನ ಒಂದು ದಿನದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ. ಕಳೆದ 24 ತಾಸಿನಲ್ಲಿ ವಿಶ್ವಾದ್ಯಂತ 4,464 ಜನರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 1,00,156ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಕೂಡ ವೇಗವಾಗಿ ಏರುತ್ತಿದ್ದು, 16 ಲಕ್ಷದ ಗಡಿ ದಾಟಿದೆ. ಕಳೆದ 24 ತಾಸಿನಲ್ಲಿ 36,111 ಹೊಸ ಪ್ರಕರಣ ವರದಿಯಾಗಿವೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 16,39,763ಕ್ಕೆ ಏರಿಕೆಯಾಗಿದೆ. ಅಮೆರಿಕವೊಂದರಲ್ಲೇ 4.76 ಲಕ್ಷ ಸೋಂಕು ಪ್ರಕರಣ ವರದಿಯಾಗಿವೆ. ಸ್ಪೇನ್​ನಲ್ಲಿ 1.57 ಲಕ್ಷ, ಇಟಲಿ 1.43 ಲಕ್ಷ, ಜರ್ಮನಿ 1.18 ಹಾಗೂ ಫ್ರಾನ್ಸ್​ನಲ್ಲಿ 1.17 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಚೀನಾದಲ್ಲಿ ಈವರೆಗೆ 81 ಸಾವಿರ ಜನರಿಗೆ ಸೋಂಕು ತಗುಲಿದ್ದು, ಸದ್ಯ ಒಂದು ಸಾವಿರ ಸಕ್ರಿಯ ಪ್ರಕರಣಗಳಷ್ಟೇ ಉಳಿದಿವೆ.
ಭಾರತದಲ್ಲಿ 7000 ಸೋಂಕಿತರು:ಭಾರತದಲ್ಲೇ ಕಳೆದ 24 ತಾಸಿನಲ್ಲಿ 618 ಹೊಸ ಪ್ರಕರಣ ಬೆಳಕಿಗೆ ಬಂದಿವೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 7,347ಕ್ಕೆ ಏರಿಕೆಯಾಗಿದೆ. ಜತೆಗೆ ಹೊಸದಾಗಿ 40 ಜನ ಮೃತಪಟ್ಟಿರುವ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 246ಕ್ಕೆ ತಲುಪಿದೆ. ದೇಶದಲ್ಲಿ ಸದ್ಯ 6,404 ಪ್ರಕರಣಗಳು ಸಕ್ರಿಯವಾಗಿದ್ದು, 697 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 11 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 108ಕ್ಕೆ ಏರಿದೆ. ಮಧ್ಯಪ್ರದೇಶದಲ್ಲಿ ಮೂವರು, ಗುಜರಾತ್, ಪಂಜಾಬ್, ತಮಿಳುನಾಡಿನಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 1364 ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನಗಳಲ್ಲಿ ತಮಿಳುನಾಡು, ದೆಹಲಿ, ತೆಲಂಗಾಣ ಇವೆ.
ಕಠಿಣ ಕ್ರಮಕ್ಕೆ ಕೇಂದ್ರ ಸೂಚನೆ:ಏಪ್ರಿಲ್​ನಲ್ಲಿ ಹಲವು ಹಬ್ಬಗಳ ಆಚರಣೆ ಇರುವುದರಿಂದ ಕರೊನಾ ಪಸರಿಸುವಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಯಾವುದೇ ಸಾಮಾಜಿಕ, ಧಾರ್ವಿುಕ ಕಾರ್ಯಕ್ರಮಗಳಿಗೆ ಜನರು ಗುಂಪು ಸೇರುವುದನ್ನು ತಡೆಯುವ ಜತೆಯಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರದ ಪ್ರಸರಣದ ವಿರುದ್ಧ ಎಚ್ಚರ ವಹಿಸುವಂತೆ ನಿರ್ದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + four =
Remember me
