ಬೆಂಗಳೂರು:ಕರೊನಾ ಕಾರಣದಿಂದ ಶುಭ ಸಮಾರಂಭಗಳಿಗೆ, ಅದರಲ್ಲೂ ಮದುವೆ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ, ತುಳಸಿ ಹಬ್ಬದ ದಿನವಾದ ಗುರುವಾರ ರಾಜ್ಯದಲ್ಲಿ 1 ಸಾವಿರಕ್ಕೂ ಹೆಚ್ಚಿನ ವಿವಾಹ ನೆರವೇರಿದ್ದು, ಕಂಕಣಜಾತ್ರೆಯೇ ನಡೆಯಿತು. ಹಿಂದು ಸಂಪ್ರದಾಯದಲ್ಲಿ ತುಳಸಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಮಹಾವಿಷ್ಣುವನ್ನು ತುಳಸಿ ಮದುವೆಯಾದ ದಿನವೆಂದೇ ಪರಿಗಣಿಸಲಾಗುತ್ತದೆ. ಈ ದಿನದಂದು ವಿವಾಹವಾದರೆ ಶುಭ. ದಾಂಪತ್ಯ ಜೀವನ ಸುಖಕರವಾಗಿರಲಿದೆ ಎನ್ನುವ ನಂಬಿಕೆಯಿದೆ. ಹೀಗಾಗಿ ಗುರುವಾರ ರಾಜ್ಯದೆಲ್ಲೆಡೆ ಸಾವಿರಕ್ಕೂ ಹೆಚ್ಚಿನ ವಿವಾಹ ಜರುಗಿದೆ. ಕರೊನಾದಿಂದ ಈವರೆಗೆ ದೂರವಿದ್ದ ಬಂಧು-ಮಿತ್ರರು ಒಂದೆಡೆ ಸೇರಿ ನೂತನ ದಂಪತಿಗಳಿಗೆ ಶುಭ ಹಾರೈಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಕಲ್ಯಾಣ ಮಂಟಪಗಳು ಹೌಸ್​ಫುಲ್:ಕರೊನಾ ಕಾರಣದಿಂದ 8 ತಿಂಗಳಿನಿಂದ ಖಾಲಿ ಹೊಡೆಯುತ್ತಿದ್ದ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಗುರುವಾರ ಹೌಸ್​ಫುಲ್ ಆಗಿದ್ದವು. ಕಲ್ಯಾಣ ಮಂಟಪ, ಸಮುದಾಯ ಭವನದ ಹೊರಭಾಗದಲ್ಲಿ ವಿವಾಹಕ್ಕೆ ಸ್ವಾಗತ ಕೋರುವ ಫಲಕ ರಾರಾಜಿಸುತ್ತಿದ್ದವು. ಮಂಗಳವಾದ್ಯಗಳ ಸದ್ದು, ಬಗೆಬಗೆಯ ತಿಂಡಿ, ತಿನಿಸು ಘಮಾಯಿಸುತ್ತಿದ್ದವು.

ಕಾರ್ತಿಕ ಮಾಸದಲ್ಲಿ ಮದುವೆಯಾದರೆ ಸೊಸೆ ಮನೆ ಬೆಳಗುತ್ತಾಳೆಂಬ ನಂಬಿಕೆಯಿದೆ. ಉತ್ಥಾನ ದ್ವಾದಶಿ ವಿಷ್ಣು ಮತ್ತು ತುಳಸಿ ವಿವಾಹವಾದ ಸುದಿನ. ಈ ಬಾರಿ ದೇವ ನಕ್ಷತ್ರವಾದ ಅಶ್ವಿನಿ ನಕ್ಷತ್ರ ಬಂದಿದ್ದು, ಗುರುವಾರವೂ ಇದೆ.
|ಅನಂತ ಭಟ್ಅರ್ಚಕರು, ಶ್ರೀ ರಾಜರಾಜೇಶ್ವರಿ ದೇಗುಲ ಚಿತ್ರದುರ್ಗ
ನ.26, ಡಿ.2 ಹಾಗೂ 3ರಂದು ವಿವಾಹಗಳಿಗೆ ಅತ್ಯುತ್ತಮ ದಿನಗಳು. ಡಿ.15ರಿಂದ ಧನುರ್ವಸ, ತದನಂತರ ಪುಷ್ಯ ಮಾಸ. ಧನುರ್ವಸದಲ್ಲಿ ಮಾರ್ಗಶೀರ್ಷ ಮಾಸವೂ ಇರಲಿದ್ದು, ಫೆ.11ರವರೆಗೆ ಉತ್ತಮ ದಿನಗಳಿಲ್ಲ. ಫೆ.12ರಿಂದ ಆರಂಭವಾಗುವ ಮಾಘ ಮಾಸದಲ್ಲಿ ವಿವಾಹ, ಗೃಹಪ್ರವೇಶದಂಥ ಕಾರ್ಯಗಳನ್ನು ನಡೆಸಬಹುದು.
|ವಿಠ್ಠಲ ಭಟ್ಕೆಕ್ಕಾರು ಜ್ಯೋತಿಷಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
