ಬೆಂಗಳೂರು:ಐದು ವರ್ಷ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. 2019ರಿಂದ 2023ರ ಜೂ 1ರಿಂದ ಜೂ 10ರ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. 2024ರ ಜೂ 1ರಿಂದ ಜೂ 10ರವರೆಗೆ 51 ಮಿಮೀ ಮಳೆಯಾಗಬೇಕಿತ್ತು. 91 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.78 ಅಧಿಕ ವರ್ಷಧಾರೆಯಾಗಿದೆ. ಐದು ವರ್ಷದಿಂದ ಮಾನ್ಸೂನ್​ ದುರ್ಬಲ ಸೇರಿ ಇತರೆ ಕಾರಣಗಳಿಂದ ಆರಂಭದಲ್ಲಿ ಉತ್ತಮ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿತ್ತು.
ಈ ವರ್ಷ ಮುಂಗಾರು ಉತ್ತಮವಾಗಿದ್ದು, ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ಹೇಳಿದೆ. ಈ ವರ್ಷ “ಎಲ್​ ನಿನೋ’ ದುರ್ಬಲಗೊಂಡು “ಲಾ-ನಿನಾ’ ಉಂಟಾಗುವುದರಿಂದ ರಾಜ್ಯದಲ್ಲಿ ಈ ಬಾರಿ ಮುಂಗಾರು ಆಶಾದಾಯಕವಾಗಿದೆ. ಜೂ 2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ. ಅಂದಿನಿಂದ ಈವರೆಗೆ ಉತ್ತಮ ವರ್ಷಧಾರೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗುವಂತಾಗಿದೆ.
2018ರ ಜೂ 1ರಿಂದ ಜೂ 10ರವರೆಗೆ 51 ಮಿಮೀ ಮಳೆ ಬೀಳುವ ಬದಲು 92 ಮಿಮೀ ಮಳೆಯಾಗಿತ್ತು. ವಾಡಿಕೆಗಿಂತ ಶೇ.80 ಹೆಚ್ಚು ಸುರಿದಿತ್ತು. ಇದಾದ ಬಳಿಕ ಕಳೆದ ಐದು ವರ್ಷದಲ್ಲಿ ಜೂ 1ರಿಂದ ಜೂ 10ರ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಆರಂಭದಲ್ಲೇ ಮುಂಗಾರು ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿ ಆಹಾರ ಉತ್ಪಾದನೆ ಕುಸಿತವಾಗಿತ್ತು. ಐದು ವರ್ಷಗಳ ಅಂಕಿ ಅಂಶ ಗಮನಿಸಿದರೆ ಮಳೆ ಅವಧಿಯ ದಿನಗಳು ಬದಲಾಗುತ್ತಿವೆ. ಜೂನ್​ನಲ್ಲಿ ಬೀಳುತ್ತಿರುವ ಮಳೆ ಜುಲೈನಲ್ಲಿ, ಆಗಸ್ಟ್​ನಲ್ಲಿ ಬೀಳುತ್ತಿರುವ ಮಳೆ ಜುಲೈನಲ್ಲಿ, ಸೆಪ್ಟೆಂಬರ್​ನಲ್ಲಿ ಬೀಳುವ ಮಳೆ ಆಗಸ್ಟ್​ನಲ್ಲಿ ಸುರಿಯುತ್ತಿದೆ. ಅಲ್ಲದೆ, ಒಂದು ದಿನದಲ್ಲಿ ಸುರಿಯುವ ಮಳೆ ಒಂದೇ ಗಂಟೆಯಲ್ಲಿ, ಒಂದು ವಾರದಷ್ಟು ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿಯುತ್ತಿದೆ. ಹೀಗಾಗಿ, ಹವಾಮಾನ ವೈಪರಿತ್ಯದಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ.
ಜನರ ವಿಶ್ವಾಸವೇ ನ್ಯಾಯಾಂಗ ಕ್ಷೇತ್ರದ ಶಕ್ತಿ; ನ್ಯಾ.ಶಿವರಾಜ ಪಾಟೀಲ್ ಅಭಿಮತ
ಮಲೆನಾಡು,ಕರಾವಳಿಯಲ್ಲಿ ಕುಂಠಿತಐದು ವರ್ಷದಲ್ಲಿ ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಆದರೆ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ವಾಡಿಕೆಯಷ್ಟೇ ಅಥವಾ ವಾಡಿಕೆಗಿಂತ ತುಸು ಕಡಿಮೆ ಮಳೆಯಾಗುತ್ತಿದೆ. ಇದಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎದುರಾಗುವ ಹವಾಮಾನ ವೈಪರಿತ್ಯ ಸಮಸ್ಯೆ ಬಗೆಹರಿಸಲು ಸರ್ಕಾರವೇ ಈಗಿಂದಲ್ಲೇ ತಯಾರಿ ನಡೆಸುಬೇಕಿದೆ.
ಮುಂದುವರಿದ ವರುಣಾರ್ಭಟರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಜೂ 11ರಿಂದ ಜೂ 12ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್​ ಅರ್ಲಟ್​ ಘೋಷಿಸಿದೆ. ದಣ ಕನ್ನಡ, ಉಡುಪಿ, ರಾಯಚೂರು, ವಿಜಯಪುರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅರ್ಲಟ್​ ಇರಲಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ವರ್ಷಧಾರೆಯಾಗಲಿದೆ.
ಮಳೆ ಅವಧಿ ವಿವರವರ್ಷ         ತಿಂಗಳು                           ವಾಡಿಕೆ(ಮಿಮೀ)      ಬಿದ್ದಿರುವುದು(ಮಿಮೀ)        ಪ್ರಮಾಣ2024       ಜೂ 1ರಿಂದ 10ರವರೆಗೆ             51                     91                       ಶೇ.782023       ಜೂ 1ರಿಂದ 10ರವರೆಗೆ             51                     14                      -ಶೇ.722022       ಜೂ 1ರಿಂದ 10ರವರೆಗೆ             51                     42                      -ಶೇ.192021       ಜೂ 1ರಿಂದ 10ರವರೆಗೆ             51                     51                      ಶೇ.002020       ಜೂ 1ರಿಂದ 10ರವರೆಗೆ             51                     45                     -ಶೇ.122019       ಜೂ 1ರಿಂದ 10ರವರೆಗೆ             51                     41                       -ಶೇ.20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
