ಬೆಂಗಳೂರು:ಕರೊನಾ ಎರಡನೇ ಅಲೆ ಆರ್ಭಟದಿಂದಾಗಿ ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವಜನರೇ ಅಧಿಕ ಎಂಬ ವಿಚಾರ ಮತ್ತಷ್ಟು ಆತಂಕ ಸೃಷ್ಟಿಸಿದೆ. ರಾಜ್ಯದ ಒಟ್ಟಾರೆ ಸೋಂಕಿತರ ಪೈಕಿ ಶೇ. 36 ಯುವಜನರಿದ್ದಾರೆ. ಸಾವಿನ ಪ್ರಮಾಣ ವಯಸ್ಸಾದವರಲ್ಲಿ ಹೆಚ್ಚು ಎಂದು ಕೋವಿಡ್ ವಾರ್ ರೂಂ ವರದಿ ಹೇಳಿದೆ.
ರಾಜ್ಯದಲ್ಲಿ ಈವರೆಗೆ 12 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 4.34 ಲಕ್ಷ ಜನರು (ಶೇ.36) 20 ರಿಂದ 39 ವಯೋಮಾನದವರು. ಕರೊನಾ ಹೆಚ್ಚಾಗಿ ವೃದ್ಧರನ್ನು ಬಾಧಿಸುತ್ತದೆ; ಯುವಪೀಳಿಗೆಗೆ ಅಷ್ಟು ತೊಂದರೆ ನೀಡಲ್ಲ ಎಂಬ ನಿರ್ಲಕ್ಷ್ಯ ಧೋರಣೆ ಸೋಂಕು ಹರಡಲು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ವೃತ್ತಿ ಜೀವನ, ಕಾಲೇಜು, ಉದ್ಯಮ ಹೀಗೆ ಹಲವು ಕಾರಣಗಳಿಂದ ಯುವಜನರು ಮನೆಯಿಂದ ಹೊರಬರುವುದು ಅನಿವಾರ್ಯವಾಗಿದೆ. ಹೀಗಾಗಿ ಕರೋನಾ ಸೋಂಕು ಸುಲಭವಾಗಿ ಹರಡುತ್ತಿದೆ. ಸ್ವಲ್ಪ ಸಮಾಧಾನದ ಸಂಗತಿಯೆಂದರೆ, ಯುವಜನರಲ್ಲಿ ಕರೊನಾ ಮರಣಪ್ರಮಾಣ ಶೇ.6 ಇದೆ. ಈವರೆಗೆ, 10 ರಿಂದ 19 ವರ್ಷದ ವಯಸ್ಸಿನ 73,846 ಮಂದಿಗೆ ಸೋಂಕು ತಗುಲಿದ್ದು, 46 ಮಂದಿ ಮೃತಪಟ್ಟಿದ್ದಾರೆ. 20-29 ವಯೋಮಾನದ 2,12,246 ಮಂದಿಗೆ ಸೋಂಕು ತಗುಲಿದೆ. 235 ಜನ ಕೊನೆಯುಸಿರೆಳೆದಿದ್ದಾರೆ. 30-39 ವಯಸ್ಸಿನ 2,22,327 ಜನರು ಕರೊನಾ ಪೀಡಿತರಾಗಿದ್ದು, 602 ಮಂದಿ ಅಸುನೀಗಿದ್ದಾರೆ. ಸಾವಿನ ಪ್ರಮಾಣದಲ್ಲಿ ವೃದ್ಧರು ಹೆಚ್ಚಿದ್ದು, 50 ರಿಂದ 80 ವಯೋಮಾನದ 10,802 ಮಂದಿ ಕರೊನಾಗೆ ಬಲಿಯಾಗಿದ್ದಾರೆ.
ಒಬ್ಬರಿಂದ 16 ಜನಕ್ಕೆ ಹರಡುತ್ತೆ!: ಕೋವಿಡ್ ಮೊದಲ ಅಲೆಯ ಸೋಂಕಿಗೆ ಯುವಜನರು ತುತ್ತಾಗಿದ್ದರೂ, ಪ್ರಾಣಕ್ಕೆ ಅಷ್ಟು ಅಪಾಯ ಇರಲಿಲ್ಲ. ಆದರೆ, ಎರಡನೇ ಅಲೆ ಸೋಂಕು ರೂಪಾಂತರ ಹೊಂದಿರುವ ಹಿನ್ನೆಲೆಯಲ್ಲಿ ಯುವಜನರ ಜೀವಕ್ಕೆ ಹಾನಿ ಉಂಟುಮಾಡುತ್ತಿದೆ. ಕೋವಿಡ್ ಎರಡನೇ ಅಲೆ ಒಬ್ಬ ವ್ಯಕ್ತಿಯಿಂದ ಕನಿಷ್ಠ 16 ಜನರಿಗೆ ಹರಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದರಂತೆ, ಸೋಂಕು ಒಬ್ಬರಿಂದ ಇಡೀ ಕುಟುಂಬ ಮತ್ತು ನೆರೆಹೊರೆಯವರಿಗೆ ಹರಡಬಹುದು. ಯುವ ಜನರಲ್ಲಿ ಮೈ-ಕೈ ನೋವು, ಗಂಟಲು ನೋವು, ಕೆಮ್ಮು, ತೀವ್ರ ಜ್ವರ ಇತ್ಯಾದಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಕೋಟ್
ವಿದ್ಯಾಭ್ಯಾಸ, ಕೆಲಸ ಇನ್ನಿತರ ಕಾರಣಗಳಿಂದ ಯುವಜನರು ಹೆಚ್ಚು ಹೊರಗೆ ತೆರೆದುಕೊಳ್ಳುತ್ತಾರೆ. ಹೀಗಾಗಿ ಸೋಂಕಿಗೆ ಒಳಗಾಗುವವರಲ್ಲಿ ಅವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅಲ್ಲದೆ ಯುವಜನರಲ್ಲಿ ಕೋವಿಡ್ ನಿಯಮ ಉದಾಸೀನತೆ ತೋರುವವರು ಹೆಚ್ಚು. ಸಿನಿಮಾ, ಪಾರ್ಟಿ, ಸ್ನೇಹಿತರ ಹೆಸರಿನಲ್ಲಿ ಗುಂಪು ಸೇರುವುದರಿಂದ ಸೋಂಕು ಯುವಜನರಲ್ಲಿ ಹೆಚ್ಚು ಪಸರಿಸುತ್ತಿದೆ. ಜತೆಗೆ ಮನೆಯ ಹಿರಿಯರು ಹಾಗೂ ಕಿರಿಯರಿಗೂ ಸೋಂಕು ಹರಡುತ್ತಾರೆ. ಹಾಗಾಗಿ ಯುವಜನರು ಹೆಚ್ಚು ಜಾಗರೂಕತೆ ವಹಿಸುವ ಹಾಗೂ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವ ಅಗತ್ಯವಿದೆ.
| ಡಾ. ಸಿ.ಎನ್. ಮಂಜುನಾಥ
ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಸದಸ್ಯರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
