ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆವರೆಗೂ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.
ನಿನ್ನೆ ಮಧ್ಯರಾತ್ರಿಯವರೆಗೂ ಮಳೆ ಬರುವ ಯಾವುದೇ ವಾತಾವರಣ ಇರಲಿಲ್ಲ. ಆದರೆ, ನಸುಕಿನ ಜಾವ ಮಳೆರಾಯ ಅಬ್ಬರಿಸಿದ್ದಾನೆ. ನಿದ್ರೆಯಿಂದ ಎಚ್ಚರಗೊಂಡ ಎಷ್ಟೋ ಮಂದಿ ವರುಣ ಅಬ್ಬರ ಕಂಡು ದಂಗಾಗಿದ್ದಾರೆ. ಸುಮಾರು ಮೂರ್ನಾಲ್ಕು ಗಂಟೆ ಮಳೆ ಎಡಬಿಡದೆ ಸುರಿದಿದೆ. ಇದರ ಪರಿಣಾಮ ರಾಜಧಾನಿಯಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ.
ನಾಗಾವಾರ ಜಂಕ್ಷನ್​ ಮತ್ತು ಹೆಬ್ಬಾಳ ನಡುವಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ನೀರು ನಿಂತಿದ್ದು, ಎರಡೂ ಕಡೆ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆಬ್ಬಾಳ ಫ್ಲೈಓವರ್​ನಲ್ಲಿ ಎಸ್ಟೀಮ್​ ಮಾಲ್​ನಿಂದ ಮೇಖ್ರಿ ವೃತ್ತದ ಕಡೆ ವಾಹನ ಸಂಚಾರ ಮಂದಗತಿಯಲ್ಲಿದೆ. ಮಾರತಹಳ್ಳಿಯ ಹೊರವರ್ತುಲ ರಸ್ತೆ, ಕಾರ್ತಿಕ್​ ನಗರ ಮತ್ತು ಕಲ್ಯಾಣ ನಗರ ಜಲಾವೃತಗೊಂಡಿದೆ.
ಪುಟ್ಟೇನಹಳ್ಳಿ, ವರ್ತೂರು ಕೋಡಿ, ಸಕ್ರಾ ಆಸ್ಪತ್ರೆಯಿಂದ ಬೆಳ್ಳಂದೂರುವರೆಗೂ ನೀರು ತುಂಬಿದಿದೆ. ಇದಿಷ್ಟೇ ಅಲ್ಲದೆ, ಮೆಜಿಸ್ಟಿಕ್​, ಓಕಳಿಪುರ, ಶಾಂತಿನಗರ, ಕೋರಮಂಗಲ, ಕಾರ್ಪೊರೇಷನ್​ ಸರ್ಕಲ್​, ಟೌನ್​ಹಾಲ್​, ಮಲ್ಲೇಶ್ವರ, ಯಶವಂತಪುರ, ಜಯನಗರ, ಮೈಸೂರು ರಸ್ತೆ, ನಾಯಂಡಳ್ಳಿ, ಮಾಗಡಿ ರಸ್ತೆ, ಕೆಂಗೇರಿ, ಕೆಆರ್​ಪುರಂ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದೆ.
ಭಾರಿ ಮಳೆಯಿಂದಾಗಿ ಕೆ.ಆರ್​. ಮಾರುಕಟ್ಟೆಯ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಿದೆ. ನಗರದ ಅಲ್ಲಲ್ಲಿ ಭಾರಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ವಾಹನ ಸವಾರರು ಪರದಾಟ ಅನುಭವಿಸುವಂತಾಗಿದೆ. ಬೆಳಗಿನ ಪಾಳಿಗೆ ಕೆಲಸಕ್ಕೆ ಹೋಗುವವರಿಗೂ ವರುಣ ತೊಂದರೆ ಕೊಟ್ಟಿದ್ದಾನೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಂತಿದೆ.
ಕೋಚಿಂಗ್​ ಇಲ್ಲದೆ ಒಂದೇ ವರ್ಷದಲ್ಲಿ 6 ಸರ್ಕಾರಿ ನೌಕರಿ ಗಿಟ್ಟಿಸಿದ ಯುವತಿಯ ಯಶೋಗಾಥೆ ಇದು!

ಶ್ರೀಲಂಕಾ ವಿರುದ್ಧ ಅತ್ಯಂತ ಕೆಟ್ಟ ಪ್ರದರ್ಶನ: ಶಾಕಿಂಗ್​ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − ten =
Remember me
