ಬೆಂಗಳೂರು:ಸ್ಯಾಂಡಲ್‌ವುಡ್‌ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಡಿಸೈನರ್ ರಮೇಶ್ ದೆಂಬಲ್‌ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು, ಸೆಲೆಬ್ರಿಟಿಗಳ ಡ್ರಗ್ಸ್ ಪಾರ್ಟಿಗಳ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಶನಿವಾರ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾದ ರಮೇಶ್ ಅವರನ್ನು ಎಸಿಪಿ ಗೌತಮ್, ಇನ್‌ಸ್ಪೆಕ್ಟರ್ ಪುನೀತ್, ಆರೋಪಿ ವಿರೇನ್ ಖನ್ನಾ ಜತೆ ಕೂರಿಸಿ 10 ಗಂಟೆ ವಿಚಾರಣೆ ನಡೆಸಿದ್ದಾರೆ.
ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿ ಹಲವು ಭಾಷೆಗಳ ಸಿನಿಮಾಗಳಲ್ಲಿ ವಸ್ತ್ರ ವಿನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನದೇ ವಸ್ತ್ರ ವಿನ್ಯಾಸದ ಸಂಸ್ಥೆ ಇದೆ. ಬೆಂಗಳೂರು ಫ್ಯಾಷನ್ ಶೋ ಸೇರಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತೇನೆ. ವಿರೇನ್ ಖನ್ನಾ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದ ಕೆಲ ಪಾರ್ಟಿಗಳಲ್ಲಿ ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದೇನೆ. ಅಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಹಾಗೂ ಪಾರ್ಟಿಗಳಲ್ಲಿ ಸಿಕ್ಕಾಗ ಮಾತನಾಡಿದ್ದೇವೆ. ಫೋಟೋ ತೆಗೆಸಿಕೊಂಡಿದ್ದೇವೆ ಅಷ್ಟೇ ಎಂದು ಹೇಳಿಕೆ ನೀಡಿದ್ದಾರೆ. ಮತ್ತೊಮ್ಮೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.
ನನಗೆ ನೋಟಿಸ್ ಕೊಟ್ಟಿದ್ದೇಕೆ?:ಸಿಸಿಬಿ ಕಚೇರಿಗೆ ಬಂದ ಕೂಡಲೇ ಪೊಲೀಸ್ ಅಧಿಕಾರಿ ಬಳಿ ಹೋಗಿದ್ದ ರಮೇಶ್, ನನಗೆ ಏಕೆ ನೋಟಿಸ್ ನೀಡಿದ್ದೀರಾ? ಎಂದು ಪ್ರಶ್ನಿಸಿ ಕೆಲಹೊತ್ತು ವಾದಿಸಿದ್ದರು. ಬಳಿಕ ಮೊಬೈಲ್ ನೀಡುವಂತೆ ಕೇಳುತ್ತಿದ್ದಂತೆ ಮತ್ತೆ ವಾದಕ್ಕೆ ಇಳಿದ ರಮೇಶ್, ನನ್ನ ಮೊಬೈಲ್ ಏಕೆ ಎಂದು ಪ್ರಶ್ನಿಸಿದರು. ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ ನಂತರವೇ ಮೊಬೈಲ್ ಹಸ್ತಾಂತರಿಸಿದರು. ಅಲ್ಲದೆ, ಪಾಸ್‌ವರ್ಡ್ ತಿಳಿಸಲೂ ಸತಾಯಿಸಿದರು.
ಫೋಟೋ ವೈರಲ್:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರಚಿತಾ ರಾಮ್, ಮೇಘನಾ ಗಾಂವ್ಕರ್, ನಿಧಿ ಸುಬ್ಬಯ್ಯ ಹಾಗೂ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಪನ್ನಗ ಭರಣ, ನಿರೂಪಕ ಅಕುಲ್ ಬಾಲಾಜಿ ಸೇರಿ ಹಲವರು ರಮೇಶ್ ಜತೆಗೆ ಇರುವ ಪಾರ್ಟಿ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.
ಸಿಸಿಬಿ ಪೊಲೀಸರು ಬಂಧಿಸಿರುವ ಬಹುತೇಕರ ಪರಿಚಯವಿದೆ. ಅವರೆಲ್ಲ ನನ್ನ ಸ್ನೇಹಿತರು. ಹೀಗಾಗಿ ಪೊಲೀಸರು ವಿಚಾರಣೆಗೆ ಕರೆದಿರಬಹುದು. ಅವರ ಪ್ರಶ್ನೆಗಳಿಗೆ ಗೊತ್ತಿರುವ ವಿಚಾರವನ್ನು ಹೇಳಿದ್ದೇನೆ.
| ರಮೇಶ್ ದೆಂಬಲ್,ಫ್ಯಾಷನ್ ಡಿಸೈನರ್
ಮತ್ತಷ್ಟು ತಗ್ಗಿತು ಕರೊನಾ ಪರೀಕ್ಷೆ ಖರ್ಚು.. ಕೋವಿಡ್​ ಟೆಸ್ಟ್​ ಬೆಲೆ ಇಳಿಸಿದ ಸರ್ಕಾರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
