ವಿಜಯಪುರ:ಒಬ್ಬರನ್ನು ಪ್ರಾಣಾಪಾಯದಿಂದ ತಪ್ಪಿಸುವ ಪ್ರಯತ್ನ ಕೊನೆಗೆ ಒಂದೇ ಮನೆಯ ಮೂವರು ಸಾವಿಗೀಡಾಗುವಂತೆ ಮಾಡಿದೆ. ಇಂಥದ್ದೊಂದು ದುರಂತ ವಿಜಯಪುರ ಜಿಲ್ಲೆಯಲ್ಲಿ ಇಂದು ನಡೆದಿದೆ. ಪರಿಣಾಮವಾಗಿ, ಇಬ್ಬರು ಮಕ್ಕಳೊಂದಿಗೆ ತಾಯಿಯೂ ಸಾವಿಗೀಡಾಗಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಗೀತಾ (38) ಮತ್ತು ಆಕೆಯ ಪುತ್ರಿ ಶೋಭಿತಾ (12), ಪುತ್ರ ವಾಸುದೇವ (10) ಸಾವಿಗೀಡಾದವರು. ಗೀತಾ ಬಟ್ಟೆ ತೊಳೆಯಲೆಂದು ಭೀಮಾ ನದಿ ತೀರಕ್ಕೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ದಶಪಥ: 2ನೇ ಟೋಲ್​ನಲ್ಲಿ ಶುಲ್ಕ ಸಂಗ್ರಹ ತಡೆಗೆ ಶಾಸಕರ ಮನವಿ
ಭೀಮಾ ನದಿಯಲ್ಲಿ ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿಯಲ್ಲಿ ಇಳಿದಿದ್ದು, ಬಳಿಕ ಮುಳುಗಲಾರಂಭಿಸಿದ್ದಾನೆ. ಅದನ್ನು ಕಂಡು ಅಕ್ಕ ಶೋಭಿತಾ ತಮ್ಮನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಧಾವಿಸಿದ್ದಳು. ಆದರೆ ಇಬ್ಬರಿಗೂ ಈಜು ಬರದ ಕಾರಣಕ್ಕೆ ಅವರು ಮುಳುಗಲಾರಂಭಿಸಿದ್ದರು. ಆಗ ತಾಯಿ ತನ್ನ ಮಕ್ಕಳನ್ನು ರಕ್ಷಿಸಲು ಧಾವಿಸಿದ್ದು, ಕೊನೆಗೆ ಮೂವರೂ ಮುಳುಗಿ ನೀರುಪಾಲಾದರು. ಈ ಸಂಬಂಧ ಇಂಡಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್​ ಮನೇಲಿ ಸಿಕ್ತು ಲೀಟರ್​​ಗಟ್ಟಲೆ ಮದ್ಯ!; ಲೋಕಾಯುಕ್ತ ದಾಳಿ ವೇಳೆ ಪತ್ತೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
