ಚಿಕ್ಕಮಗಳೂರು:ಮಗಳನ್ನು ರಕ್ಷಿಸಲು ತಾಯಿ ಧಾವಿಸಿದ್ದರೂ ಬಳಿಕ ಅಮ್ಮ-ಮಗಳಿಬ್ಬರೂ ಪ್ರಾಣ ಕಳೆದುಕೊಂಡ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಜತೆಗಿದ್ದ ಮಗ ಪಾರಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ದುರಂತ ಪ್ರಕರಣ ನಡೆದಿದೆ.
ಶೋಭಾ (40) ಮತ್ತು ಆಕೆಯ ಪುತ್ರಿ ವರ್ಷ (8) ಸಾವಿಗೀಡಾದವರು. ಜತೆಗಿದ್ದ ಮಗ ಚೇತನ್ ಪಾರಾಗಿದ್ದಾನೆ. ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ಈ ಮೂವರು ಕೆರೆಯನ್ನು ದಾಟುತ್ತಿದ್ದಾಗ ಈ ಪ್ರಕರಣ ಸಂಭವಿಸಿದೆ.
ಮಗ-ಮಗಳೊಂದಿಗೆ ತಾಯಿ ದನ ಮೇಯಿಸಲು ಹೋಗಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಡೆ ದಾಟಲು ಹೋಗಿದ್ದರು. ಈ ಸಂದರ್ಭದಲ್ಲಿ ಮಗಳು ಏಕಾಏಕಿ ನೀರಿನ ಪ್ರಮಾಣ ಹೆಚ್ಚಿರುವ ಕಡೆ ತೆರಳಿ ಸಿಲುಕಿಕೊಂಡಿದ್ದರಿಂದ ತಕ್ಷಣ ತಾಯಿ ರಕ್ಷಣೆಗೆ ಧಾವಿಸಿದ್ದಳು. ಆದರೆ ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಅಂಗವಿಕಲ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿ; ವರ್ಷದ ಹಿಂದೆ ಪತಿ-ಮಗುವನ್ನು ಕಳೆದುಕೊಂಡಿದ್ದ ಮಹಿಳೆ!

ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
