ಚಿಕ್ಕಬಳ್ಳಾಪುರ:ನಿನ್ನೆ ಮನೆಯಿಂದ ಹೊರಗೆ ಹೋಗಿದ್ದ ತಾಯಿ-ಮಗ ಇಂದು ತೋಟದಲ್ಲಿನ ಸಂಪಿನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿ ಗ್ರಾಮದ ನವಲತಾ (26) ಮತ್ತು ಆಕೆಯ ಪುತ್ರ ಅಂಜನ್​ಕುಮಾರ್ (5) ಸಾವಿಗೀಡಾದವರು. ಇವರು ನಿನ್ನೆ ಸಂಜೆ ಮನೆಯಿಂದ ತೋಟದ ಕಡೆಗೆ ಹೋಗಿದ್ದವರು ಮರಳಿರಲಿಲ್ಲ.
ಹೀಗಾಗಿ ತೋಟಕ್ಕೆ ಹೋಗಿ ಹುಡುಕಾಡಿದಾಗ ಅಲ್ಲಿನ ಸಂಪ್​ನಲ್ಲಿ ತಾಯಿ-ಮಗನ ಶವ ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವಲತ ಸಂಬಂಧಿಕರು ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.
ನವಲತಾ ಪತಿ ಸೊಣ್ಣೇ ಗೌಡ, ಆತನ ತಂದೆ ರಾಮಣ್ಣ, ತಾಯಿ ಪಿಳ್ಳಮ್ಮ, ಸೋದರರಾದ ಮುರಳಿ, ಚಂದ್ರು, ಗಾಯತ್ರಿ ಅವರ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯೋಗಿ ಆದಿತ್ಯನಾಥ್​ ಪ್ರಮಾಣವಚನ: ದೇಶದಲ್ಲೀಗ ಐವರು ‘ಅಂಡರ್​ 50 ಸಿಎಂ’!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twelve =
Remember me
