ಕುಂದಾಪುರ:ವಯೋಸಹಜ ಅನಾರೋಗ್ಯದಿಂದ ತಾಯಿ ಮೃತಪಟ್ಟ ಬೆನ್ನಲ್ಲೇ ಮಗನೂ ಹೃದಯಾಘಾತಕ್ಕೆ ಈಡಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಕುಂದಾಪುರದಲ್ಲಿ ನಡೆದಿದೆ.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿಯ ಮಹಾರಾಜ್ ಜುವೆಲರ್ಸ್‌ ಮಾಲೀಕ ದಿ. ರಮೇಶ್ ಶೇಟ್ ಅವರ ಪತ್ನಿ ಶಕುಂತಳಾ ಶೇಟ್ (72) ಶುಕ್ರವಾರ ಸ್ವಗೃಹದಲ್ಲಿ ನಿಧನರಾಗಿದ್ದರು. ತಾಯಿ ಮೃತಪಟ್ಟ ನೋವಲ್ಲಿದ್ದ ಮಗ ಪ್ರಶಾಂತ್ ಶೇಟ್ (46) ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಶನಿವಾರ ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿನ ಹಿಂದು ರುದ್ರಭೂಮಿಯಲ್ಲಿ ತಾಯಿ -ಮಗನ ಅಂತ್ಯಸಂಸ್ಕಾರ ಒಟ್ಟಿಗೆ ನಡೆಯಿತು. ಮೃತರ ಗೌರವಾರ್ಥ ಕುಂದಾಪುರ ಪೇಟೆಯಲ್ಲಿನ ಚಿನ್ನದ ಅಂಗಡಿಗಳು ಮುಚ್ಚಿದ್ದವು.
ಶಕುಂತಳಾಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಪುತ್ರರೊಂದಿಗೆ ನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. 3ನೇ ಪುತ್ರ ಪ್ರಶಾಂತ್ ಅವಿವಾಹಿತರಾಗಿದ್ದು, ಕುಂದಾಪುರದ ಜುವೆಲ್ಲರ್ಸ್ ಅಸೋಸಿಯೇಶನ್ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ್ದರು.
https://www.vijayavani.net/loss-of-smell-taste-added-to-list-of-covid-19-symptoms-says-health-ministry/
ಸಾಲ ಕೊಡಿಸಿದ ‘ತಪ್ಪಿಗೆ’ ತಾಯಿ-ಮಗಳ ಆತ್ಯಹತ್ಯೆ! ಫಿಲೇಚರ್ ಮಾಲೀಕನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
