ಕಲಬುರಗಿ:ಓಂ ನಗರದ ಅಪಾರ್ಟ್‌ಮೆಂಟ್​ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆಯಾಗಿದೆ.
ಸುಚಿತ್ರಾ(33) ಮತ್ತು ವಿನಿತ್ (9) ಮೃತ ದುರ್ದೈವಿಗಳು. ಬೆಳಗಾವಿ ಮೂಲದ ಸುಚಿತ್ರಾಗೆ ಬಾಗಲಕೋಟೆಯ ಮುಧೋಳ ಮೂಲದ ಜಗದೀಶ್ ಕಾಂಬಳೆ ಜತೆ 11 ವರ್ಷದ ಹಿಂದೆ ಮದುವೆ ಆಗಿತ್ತು. ಈ ದಂಪತಿಯ ಮಗು ವಿನಿತ್. ಓಂ ನಗರದ ಅಪಾರ್ಟ್‌ಮೆಂಟ್​ನ ಮನೆಯಲ್ಲಿ ದಂಪತಿ ವಾಸವಿದ್ದರು.ಇದನ್ನೂ ಓದಿರಿಕಾಂಗ್ರೆಸ್ ಮನೆ ಹೊಸ್ತಿಲಿಗೆ ಬಂದ ಮಧುಬಂಗಾರಪ್ಪ! ಶಿವರಾತ್ರಿ ದಿನವೇ ಮಹತ್ವದ ಚರ್ಚೆ
ಶಿವರಾತ್ರಿ ಹಬ್ಬದ ದಿನವೇ ಮನೆಯಲ್ಲಿ ತಾಯಿ-ಮಗು ಮೃತಪಟ್ಟಿದ್ದು, ಸುಚಿತ್ರಾಳ ಗಂಡನ ಮೇಲೆ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಜಗದೀಶ್ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಎಸ್​ಬಿಐ ಬ್ಯಾಂಕಿನ ಡೆಪ್ಯೂಟಿ ಮ್ಯಾನೇಜರ್. ಮಹಾತ್ಮ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವರಾತ್ರಿ ಹಬ್ಬದ ಸಡಗರದಲ್ಲಿರಬೇಕಿದ್ದ ಕುಟುಂಬಸ್ಥರು ಮಗಳು-ಮೊಮ್ಮಗನ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ.
ಇನ್ನು ತನಿಖೆ ನಂತರ ತಾಯಿ-ಮಗು ಸಾವಿಗೆ ಕಾರಣ ಏನು ಎಂದು ಗೊತ್ತಾಗಲಿದೆ. ಇದು ಆತ್ಮಹತ್ಯೆಯೋ? ಕೊಲೆಯೋ ಎಂಬ ಅನುಮಾನಕ್ಕೆ ಉತ್ತರ ಸಿಗಲಿದೆ.
150 ಹುದ್ದೆ ತಲಾ 25-30 ಲಕ್ಷ ರೂ.ಗೆ ಸೇಲ್​! ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ

ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

Video| ಕಪಾಳಕ್ಕೆ ಹೊಡೆದ ಪಿಎಸ್​ಐಗೆ ​ಯುವತಿ ಅವಾಜ್​! ನನ್​ ಗಾಡಿ ಮುಟ್ಟೋಕೆ ನೀನ್ಯಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
