ವಿಜಯಪುರ:ಮಗ ಪ್ರಾಣ ಉಳಿಸಲು ಹೋದ ತಾಯಿ ಕೂಡ ಮಗನೊಂದಿಗೆ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ನಿಡಗುಂದಿಯ ನಿವಾಸಿಗಳಾದ ಅಂಜನಾ ಕೊಂಚಿಕೊರವರ(28) ಮತ್ತು ಇವರ ಪುತ್ರ ನಾಗೇಶ(8) ಮೃತ ದುರ್ದೈವಿಗಳು. ವಿಜಯದಶಮಿ ಹಬ್ಬದ ದಿನವೇ ಸಂಭವಿಸಿದ ತಾಯಿ-ಮಗನ ಸಾವಿಗೆ ನಿಡಗುಂದಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ನಿಡಗುಂದಿ ತಾಂಡಾ ಬಳಿ ಇರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ಮಧ್ಯಾಹ್ನ ಬಟ್ಟೆ ತೊಳೆಯಲು ಅಂಜನಾ ಬಂದಿದ್ದರು. ತಾಯಿ ಜತೆಗೆ ಮಗನೂ ಬಂದಿದ್ದ. ಆಟವಾಡುತ್ತ ಆಕಶ್ಮಿಕವಾಗಿ ಕಾಲುಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ಜಲಸಮಾಧಿಯಾದರು.
ತಾಯಿ ಮತ್ತು ಮಗನ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.
ಉಡುಪಿ ಯುವತಿ ಅನುಮಾನಾಸ್ಪದ ಸಾವು: ಕೊನೆಗೂ ಸಿಕ್ಕಿಬಿದ್ದ ಪ್ರಿಯಕರ

ಇಬ್ಬರು ಪತ್ನಿಯರೊಂದಿಗಿನ ಕಾಮದಾಟದ ಲೈವ್​ ದೃಶ್ಯವನ್ನೇ ಮಾರಾಟಕ್ಕಿಟ್ಟ 24ರ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
